ಬೆಂಗಳೂರು(ಜೂ.13): ಕೊರೋನಾ ಲಾಕ್ಡೌನ್ ಎಫೆಕ್ಟ್ ಮಹಾನಗರಿ ಬೆಂಗಳೂರು ಖಾಲಿ ಖಾಲಿ ಹೊಡೆಯುತ್ತಿದೆ. ಅನ್‌ಲಾಕ್ ಆದಮೇಲೆ ತಕ್ಕಮಟ್ಟಿಗೆ ಜನರ ಓಡಾಡ ಹೆಚ್ಚಿದೆಯಾರೂ ವಲಸೆ ಕಾರ್ಮಿಕರು ವಾಪಾಸ್ ಬರುತ್ತಿಲ್ಲ. ಇದರ ಪರಿಣಾಮ ಸಿಲಿಕಾನ್ ಸಿಟಿ ಪ್ರತಿ ಏರಿಯಾದಲ್ಲಿ ಬಾಡಿಗೆ ಮನೆಗಳು ತುಂಬ ಈಸಿಯಾಗಿ ಸಿಗುತ್ತಿವೆ. ಆದರೆ ಕೇಳೋರೋ ಇಲ್ಲ!
ಬೆಂಗಳೂರಿನಲ್ಲಿ ಖಾಲಿ ಖಾಲಿ ಹೊಡೆಯುತ್ತಿವೆ ಬಾಡಿಗೆ ಮನೆಗಳು. ಮೊದಲೆಲ್ಲ ರಾಜಧಾನಿಯಲ್ಲಿ ಅದರಲ್ಲೂ ನಮಗೆ ಬೇಕಾದ ಏರಿಯಾದಲ್ಲಿ ಬಾಡಿಗೆ ಮನೆ ಹುಡುಕೋದು ದುಸ್ಸಾಹಸದ ಕೆಲಸವಾಗಿತ್ತು. ಬ್ರೋಕರ್ ಹಿಡಿದ್ರೂ ನಮಗೆ ಇಷ್ಟವಾಗುವ ಮನೆ ಬಾಡಿಗೆಗೆ ಸಿಗ್ತಿದ್ದಿಲ್ಲ. ಆದರೀಗ ಬೆಂಗಳೂರಿನಲ್ಲಿ ಬಹುತೇಕ ಎಲ್ಲ ಏರಿಯಾದಲ್ಲಿ ಬಾಡಿಗೆ ಮನೆ ಈಸಿಯಾಗಿ ಸಿಗುತ್ತಿವೆ.
ಸುದೀರ್ಘ ಎರಡು ತಿಂಗಳ ಲಾಕ್ಡೌನ್ಗೆ ಲಕ್ಷಾಂತರ ವಲಸೆ ಕಾರ್ಮಿಕರು ತಮ್ಮೂರಿಗೆ ತೆರಳಿದ್ದಾರೆ. ಕೊರೊನೋ ಅಟ್ಟಹಾಸ ಇನ್ಯಾವಾಗ ಕಡಿಮೆಯಾಗುತ್ತೊ ಎಂದು ಗಂಟುಮೂಟೆ ಕಟ್ಟಿಕೊಂಡು ಹೋದವರೇ ಹೆಚ್ಚು. ಇದರಿಂದಾಗಿ ಬಾಡಿಗೆ ಮನೆಗಳು ನಗರದ ಎಲ್ಲ ಏರಿಯಾಗಳಲ್ಲಿ ಟುಲೆಟ್ ಬೋರ್ಡ್ ಕಾಣುತ್ತಿದೆ. ಬಾಡಿಗೆ ಮನೆಗಳ ಕೇಳೋರೇ ಇಲ್ಲ.
ಲಾಕ್ಡೌನ್ ಎಫೆಕ್ಟ್ ರಾಜಧಾನಿಯಲ್ಲಿ ರೆಂಟೆಡ್ ಹೌಸ್ ಗೆ ಡಿಮ್ಯಾಂಡ್ ಇಲ್ಲದಂತಾಗಿದೆ. ಮನೆ ಮಾಲೀಕರಿಗೆ ಲಾಕ್ ಡೌನ್ ಸಂಕಷ್ಟ ಏನೆಂಬುದು ಕಳೆದ ಮೂರು ತಿಂಗಳಿನಿಂದ ಗೊತ್ತಾಗುತ್ತಿದೆ. ಬಾಡಿಗೆ ಮನೆ ಖಾಲಿಯಾಗುವುದನ್ನೇ ಕಾದು ಮೊದಲೇ ಬುಕ್ ಮಾಡುತ್ತಿದ್ದರು. ಆಗ ಮನೆ ಮಾಲಿಕರಿಗೆ ಫುಲ್ ಡಿಮ್ಯಾಂಡ್ ಇರುತ್ತಿತ್ತು. ಆದರೀಗ ತಿಂಗಳುಗಟ್ಟಲೇ ಮನೆ ಖಾಲಿಯಿರುವುದರಿಂದ ಮನೆ ಮಾಲೀಕರು ಬಾಡಿಗೆ ಆದಾಯ ನೆಚ್ಚಿಕೊಂಡವರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಲಕ್ಷಾಂತರ ಕಾರ್ಮಿಕರು, ಸಿಬ್ಬಂದಿ ತಮ್ಮೂರಿಗೆ ತೆರಳಿದ್ದಾರೆ. ಕೆಲಸ ಕಳೆದುಕೊಂಡವರು, ಟೆಕ್ಕಿಗಳ ವರ್ಕ್ ಫ್ರಂ ಹೋಮ್ ಪರಿಣಾಮ ಬಾಡಿಗೆ ಮನೆಗಳು ಖಾಲಿ ಹೊಡೆಯುತ್ತಿವೆ. ಬೆಂಗಳೂರಿನ ಬನ್ನೇರುಘಟ್ಟ ರಸ್ತೆ, ವೈಟ್ ಫೀಲ್ಡ್, ಬಿಟಿಎಂ ಲೇಔಟ್ ಏರಿಯಾ ಬಾಡಿಗೆ ಮನೆ ಫುಲ್ ಖಾಲಿ ಖಾಲಿ ಹೊಡೆಯುತ್ತಿವೆ. ಟೆಕ್ಕಿಗಳಿಗೆ ವರ್ಕ್ ಫ್ರಂ ಹೋಂ ಇರುವುದರಿಂದ ಮನೆ ಖಾಲಿ ಮಾಡಿ ತಮ್ಮೂರಿಗೆ ತೆರಳಿದ್ದಾರೆ. ಇದರಿಂದಾಗಿ ಈ ಏರಿಯಾಗಳಲ್ಲಿ ಶೇ.60ಕ್ಕೂ ಹೆಚ್ಚು ಅಪಾರ್ಟ್ಮೆಂಟ್ನಲ್ಲಿರುವ ಫ್ಲ್ಯಾಟ್, ಬಾಡಿಗೆ ಮನೆಗಳು ಖಾಲಿ ಇದ್ದು ಟುಲೆಟ್ ಬೋರ್ಡ್ ಗಳಿರುವುದು ಕಂಡುಬರುತ್ತಿದೆ.
ಇನ್ನುಳಿದಂತೆ ಮಹಾನಗರದ ಇತರೆಡೆ ಶೇ.40ರಷ್ಟು ಬಾಡಿಗೆ ಮನೆಗಳು ಖಾಲಿ ಖಾಲಿಯಿವೆ. ನಮ್ಮ ಏರಿಯಾ ಸೇರಿದಂತೆ ಬೆಂಗಳೂರಿನ ಬಹುತೇಕ ಕಡೆ ಬಾಡಿಗೆ ಮನೆ ಕೇಳೋದು ದಿಕ್ಕಿಲ್ಲ. ಮನೆ ಬಿಟ್ಟು ಹೋದವರು ವಾಪಾಸ್ ಬಂದಿಲ್ಲ. ಬಾಡಿಗೆಗೆ ಕೇಳುವವರ ಸಂಖ್ಯೆಯೂ ಕಡಿಮೆಯಿದೆ ಎಂದು ವಿದ್ಯಾಪೀಠ ಬಳಯಿರುವ ರಿಯಲ್ ಎಸ್ಟೇಟ್ ಬ್ರೋಕರ್ ಶಂಕರ್ ಎನ್ನುತ್ತಾರೆ.ಸದ್ಯ ಬೆಂಗಳೂರಿನಲ್ಲಿ ಈಸಿಯಾಗಿ ಸಿಗುತ್ತೆ ಬಾಡಿಗೆ ಮನೆ. ಆದರೆ ಬಾಡಿಗೆ ಮನೆಗೆ ಬರುವವರೇ ಇಲ್ಲದಂತಾಗಿದೆ. ಬಂದರೂ ಕಡಿಮೆ ದರಕ್ಕೆ ಬಾಡಿಗೆದಾರರು ಕೇಳುತ್ತಿದ್ದಾರಂತೆ. ಕೊರೋನಾ ಮುಂಚೆ ಬಾಡಿಗೆ ಮನೆ ಹುಡುಕೋದೆ ಕಷ್ಟವಾಗಿತ್ತು. ಈಗ ಪ್ರತಿ ಏರಿಯಾದಲ್ಲಿ ಖಾಲಿ ಮನೆಗಳ ಬೋರ್ಡ್ ಫಿಕ್ಸ್ ಆಗಿದೆ. ಅನ್‌ಲಾಕ್ ಆಗಿ ತಿಂಗಳಾದ್ರೂ ರಾಜಧಾನಿಗೆ ವಲಸೆ ಕಾರ್ಮಿಕರು ಬರುತ್ತಿಲ್ಲ. ಮೂರು ತಿಂಗಳಿನಿಂದ ಖಾಲಿಯಿರುವ ಮನೆಗಳಿಗೆ ಪೇಂಟ್ ಹೊಡೆದು, ಕ್ಲೀನ್ ಮಾಡಿ ಕಾಯುತ್ತಿದ್ದಾರೆ.
ಕೊರೋನಾ ಸೋಂಕು ಹೆಚ್ಚಳ, ಸೀಲ್ಡೌನ್ ಏರಿಯಾ ಹೆಚ್ಚಾಗುತ್ತಿರುವ ಹಿನ್ನೆಲೆ ಅಂಥ ಏರಿಯಾಗಳಲ್ಲಿ ಬಾಡಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಬಾಡಿಗೆ ಮನೆಗಳ ಟುಲೆಟ್ ಬೋರ್ಡ್ ಎಲ್ಲೆಂದರಲ್ಲಿ ಕಾಣಸಿಗುತ್ತಿದೆ. ಲಾಕ್ಡೌನ್ನಿಂದಾಗಿ ಎರಡು ತಿಂಗಳಿನಿಂದ ನಮ್ಮ ಆರು ಬಾಡಿಗೆ ಮನೆಗಳು ಖಾಲಿಯಿವೆ. ಸದ್ಯ ಯಾರು ಬಾಡಿಗೆಗೆ ಬರುತ್ತಿಲ್ಲ. ಇದ್ದ ಒಬ್ಬ ಮಗನ ಕೆಲಸವೂ ಹೋಗಿದೆ. ನಾನು ಟೀಚರ್ ಆಗಿದ್ದು, ನನಗೂ ಸದ್ಯ ಕೆಲಸವೂ ಇಲ್ಲ. ಮನೆ ಬಾಡಿಗೆ ಹಣದಿಂದಲೇ ಜೀವನ ನಡೆಸಬೇಕು. ಸ್ವಲ್ಪ ಕಡಿಮೆ ಬಾಡಿಗೆ ಕೊಡಲು ರೆಡಿಯಿದ್ದೇವೆ. ಪರಿಸ್ಥಿತಿ ಕಷ್ಟವಾಗುತ್ತಿದೆ ಎಂದು ಬಿಟಿಎಂ ಲೇಔಟ್ ನಲ್ಲಿರುವ ಮನೆ ಮಾಲೀಕರಾದ ಗಾಯತ್ರಿ ತಮ್ಮ ಕಷ್ಟ ಹಂಚಿಕೊಳ್ಳುತ್ತಾರೆ.
Comments are closed.