ಕರ್ನಾಟಕ

ಬೆಂಗಳೂರಿನಲ್ಲಿ ಕೊರೋನಾ ಸಮುದಾಯಕ್ಕೆ ಹರಡಿಲ್ಲ: ಬಿಬಿಎಂಪಿ

Pinterest LinkedIn Tumblr


ಬೆಂಗಳೂರು: ಬೆಂಗಳೂರು ನಗರದ ವ್ಯಾಪ್ತಿಯಲ್ಲಿ ಕಂಟೈನ್‌ಮೆಂಟ್ ವಲಯಗಳ ಹೆಚ್ಚಳವಾಗುತ್ತಿರುವುದರಿಂದ ಕೊರೋನಾ ಸೋಂಕು ಸಮೂಹಕ್ಕೆ ಹರಡಿದೆ ಎಂಬ ಆತಂಕ ಸರಿಯಲ್ಲ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್‌ಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ಪಾಲಿಕೆಯ ಮಾಸಿಕ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಗರದಲ್ಲಿ ಕಂಟೈನ್‌ಮೆಂಟ್ ವಲಯಗಳ ಹೆಚ್ಚಳದ ಕುರಿತು ಆತಂಕ ಬೇಡ. ಏಕೆಂದರೆ ಈಗ ಕಂಟೈನ್‌ಮೆಂಟ್ ವಲಯಗಳ ವ್ಯಾಖ್ಯಾನ ಬದಲಾಗಿದೆ. ಈಗ ಜನಸಾಂಧ್ರತೆಯಿಲ್ಲದ ಪ್ರದೇಶದಲ್ಲಿ ಒಂಟಿ ಮನೆಗಳನ್ನು ಇಲ್ಲವೇ ಸೋಂಕಿತರು ಕಂಡುಬಂದಿರುವ ಪ್ರದೇಶಗಳನ್ನು ಮಾತ್ರ ಕಂಟೈನ್‌ಮೆಂಟ್ ಎಂದು ಘೋಷಿಸಲಾಗುತ್ತಿದೆ ಎಂದರು.

ಈ ಹೊಸ ಬದಲಾವಣೆಯಿಂದ ಕಂಟೈನ್‌ಮೆಂಟ್‌ ವಲಯಗಳ ಸಂಖ್ಯೆ ಹೆಚ್ಚಳವಾಗಿದೆ. ಈ ಹಿಂದೆ ಪಾದರಾಯನಪುರ, ಹೊಂಗಸಂದ್ರ, ಶಿವಾಜಿನಗರ, ಮಂಗಪ್ಪನಪಾಳ್ಯದ ಮಾದರಿಯಲ್ಲಿ ಒಂದೇ ವಾರ್ಡ್‌ಗಳಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗುತ್ತಿಲ್ಲ ಆದ್ದರಿಂದ ಕಂಟೈನ್‌ಮೆಂಟ್ ವ್ಯಾಖ್ಯಾನ ಬದಲಿಸಲಾಗಿದೆ ಎಂದಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಕಂಟೈನ್‌ಮೆಂಟ್‌ ಪ್ರದೇಶಗಳ ಸಂಖ್ಯೆ 113ಕ್ಕೆ ಏರಿಕೆಯಾಗಿದೆ. ಗುರುವಾರ ಒಂದೇ ದಿನ 28 ಹೊಸ ಕಂಟೈನ್‌ಮೆಂಟ್‌ ಪ್ರದೇಶಗಳನ್ನು ಗುರುತಿಸಲಾಗಿದೆ. ಬುಧವಾರ ಈ ಸಂಖ್ಯೆ 85 ಇತ್ತು. ಇದುವರೆಗೆ ಪಾಲಿಕೆಯ 198 ವಾರ್ಡ್‌ಗಳಲ್ಲಿ 109 ವಾರ್ಡ್‌ಗಳಲ್ಲಿ ಕೋವಿಡ್‌ 19 ಸೋಂಕು ಪತ್ತೆಯಾಗಿದೆ.

Comments are closed.