ಕರ್ನಾಟಕ

ರಾಜ್ಯದಲ್ಲಿ ಇಂದು (ಶುಕ್ರವಾರ) 271 ಕೊರೋನಾ ಪ್ರಕರಣಗಳು ಪತ್ತೆ: 7 ಸಾವು

Pinterest LinkedIn Tumblr


ಬೆಂಗಳೂರು (ಜೂ. 12): ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಇಂದು ರಾಜ್ಯದಲ್ಲಿ 271 ಹೊಸ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ರಾಜ್ಯದ ಕೊರೋನಾ ಸೋಂಕಿತರ ಸಂಖ್ಯೆ 6,516ಕ್ಕೆ ಏರಿಕೆಯಾಗಿದೆ. ಇಂದು 7 ಕೊರೋನಾ ಸಾವಿನ ಕೇಸ್​ಗಳು ದಾಖಲಾಗಿವೆ.

ಕಳೆದೆರಡು ದಿನಗಳಿಂದ 200ರೊಳಗಿದ್ದ ಕೊರೋನಾ ಸೋಂಕಿತರ ಸಂಖ್ಯೆ ಇಂದು ಮತ್ತೆ ಏರಿಕೆಯಾಗಿದೆ. ಇಂದು ಹೊಸದಾಗಿ 7 ಕೊರೋನಾ ಸಾವಿನ ಸಂಖ್ಯೆ ದಾಖಲಾಗುವ ಮೂಲಕ ಮಹಾಮಾರಿಗೆ ರಾಜ್ಯದಲ್ಲಿ 79 ಜನರು ಬಲಿಯಾದಂತಾಗಿದೆ. ಇಂದು ದಾಖಲೆಯ 464 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇಂದಿನ ಪಟ್ಟಿಯಲ್ಲಿ 14 ಅಂತಾರಾಷ್ಟ್ರೀಯ ಪ್ರಯಾಣಿಕರು ಮತ್ತು 92 ಅಂತರ್ ರಾಜ್ಯ ಪ್ರಯಾಣಿಕರಿದ್ದಾರೆ.

ಕರ್ನಾಟಕದಲ್ಲಿ ಇಂದು 271 ಕೊರೋನಾ ಕೇಸುಗಳು ಪತ್ತೆಯಾಗಿವೆ. ಬಳ್ಳಾರಿಯಲ್ಲಿ ಅತಿಹೆಚ್ಚು ಕೇಸ್ ದಾಖಲಾಗಿದೆ. ಬಳ್ಳಾರಿ- 97, ಬೆಂಗಳೂರು- 36, ಉಡುಪಿ- 22, ಕಲಬುರ್ಗಿ- 20, ಧಾರವಾಡ- 19, ದಕ್ಷಿಣ ಕನ್ನಡ- 17, ಬೀದರ್- 10, ಹಾಸನ-9, ಮೈಸೂರು-9, ತುಮಕೂರು-7, ಶಿವಮೊಗ್ಗ-6, ರಾಯಚೂರು-4, ಉತ್ತರ ಕನ್ನಡ-4, ಚಿತ್ರದುರ್ಗ- 3, ರಾಮನಗರ- 3, ಮಂಡ್ಯ- 2, ಬೆಳಗಾವಿ, ವಿಜಯಪುರ, ಯಾದಗಿರಿಯಲ್ಲಿ ತಲಾ ಒಂದು ಕೊರೋನಾ ಪ್ರಕರಣಗಳು ಪತ್ತೆಯಾಗಿವೆ.

ಬೆಂಗಳೂರಿನ 61 ವರ್ಷದ ಮಹಿಳೆ, 65 ವರ್ಷದ ಮಹಿಳೆ, 52 ವರ್ಷದ ಪುರುಷ, 49 ವರ್ಷದ ಮಹಿಳೆ, ಹಾಸನದ 60 ವರ್ಷದ ಪುರುಷ, ಕಲಬುರ್ಗಿಯ 53 ವರ್ಷದ ಪುರುಷ ಹಾಗೂ 48 ವರ್ಷದ ಪುರುಷ ರೋಗಿಗಳು ಕೊರೋನಾದಿಂದ ಸಾವನ್ನಪ್ಪಿರುವುದು ಇಂದು ದೃಢಪಟ್ಟಿದೆ. ಬೆಂಗಳೂರೊಂದರಲ್ಲೇ 4 ಸಾವಿನ ಕೇಸ್ ಪತ್ತೆಯಾಗಿದೆ.

Comments are closed.