ರಾಷ್ಟ್ರೀಯ

ಆಯುಷ್ಮಾನ್ ಭಾರತ್ ಯೋಜನೆಗೆ ನೀವು ಸೇರ್ಪಡೆಗೊಂಡಿರುವ ಕುರಿತು ತಿಳಿಯಲು ನಿಮ್ಮ ಹೆಸರನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಿ!

Pinterest LinkedIn Tumblr


ನವದೆಹಲಿ: ದೇಶದ ಬಡವರಿಗೆ ಉತ್ತಮ ಮತ್ತು ಅಗ್ಗದ ಚಿಕಿತ್ಸೆ ನೀಡಲು ಆಯುಷ್ಮಾನ್ ಭಾರತ್ ಯೋಜನೆ (Ayushman Bharat Yojana)ಯನ್ನು ಸರ್ಕಾರ ಪ್ರಾರಂಭಿಸಿತು. ಮೋದಿಕೇರ್ ಎಂದು ಕರೆಯಲ್ಪಡುವ ಈ ಯೋಜನೆಯು ರೋಗಿಗಳಿಗೆ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆಯನ್ನು ಒದಗಿಸುತ್ತದೆ. ಆದರೆ ಈ ಯೋಜನೆಯ ಪ್ರಯೋಜನವು ಫಲಾನುಭವಿಗಳ ಪಟ್ಟಿಯಲ್ಲಿ ಸೇರ್ಪಡೆಗೊಳ್ಳುವವರಿಗೆ ಮಾತ್ರ ಇದರ ಲಾಭ ಲಭ್ಯವಿರುತ್ತದೆ. ನಿಮ್ಮ ಹೆಸರನ್ನು ನೀವು ಹೇಗೆ ಪರಿಶೀಲಿಸಬಹುದು ಎಂದು ನಾವು ನಿಮಗೆ ತಿಳಿಸುತ್ತೇವೆ.

ಆನ್‌ಲೈನ್‌ನಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸಿ:
ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸಲು ನೀವು ಆನ್‌ಲೈನ್ ಮತ್ತು ಆಫ್‌ಲೈನ್ ಎರಡೂ ವಿಧಾನಗಳನ್ನು ಬಳಸಬಹುದು. ಮನೆಯಲ್ಲಿಯೇ ಇದ್ದು ಆನ್‌ಲೈನ್‌ನಲ್ಲಿ ನೀವು ತಿಳಿದುಕೊಳ್ಳಲು ಬಯಸಿದರೆ, ಇದಕ್ಕಾಗಿ ನೀವು ಕೆಲವು ಹಂತಗಳನ್ನು ಅನುಸರಿಸಬೇಕಾಗುತ್ತದೆ ಮತ್ತು ಕೆಲವೇ ನಿಮಿಷಗಳಲ್ಲಿ ನೀವು ಸುಲಭವಾಗಿ ಆ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ ಎಂಬುದನ್ನು ಕಂಡುಕೊಳ್ಳುವಿರಿ.

ನಿಮ್ಮ ಹೆಸರನ್ನು ನೀವು ಈ ರೀತಿ ಪರಿಶೀಲಿಸಬಹುದು:
ಮೊದಲಿಗೆ, ನೀವು https://www.pmjay.gov.in/ ಅಧಿಕೃತ ಸೈಟ್‌ಗೆ ಹೋಗಬೇಕು. ಇದರ ನಂತರ ನೀವು ‘Am I Eligible’ ಕ್ಲಿಕ್ ಮಾಡಬೇಕು. ಅದರ ಮೇಲೆ ಕ್ಲಿಕ್ ಮಾಡಿದ ನಂತರ ಹೊಸ ಪುಟ ತೆರೆಯುತ್ತದೆ. ಇದರಲ್ಲಿ ನೀವು ಮೊಬೈಲ್ ಸಂಖ್ಯೆ, ಕ್ಯಾಪ್ಚಾ ಕೋಡ್ ಮತ್ತು ಒಟಿಪಿ ನಮೂದಿಸಬೇಕು.

ಈಗ ನಿಮ್ಮ ರಾಜ್ಯವನ್ನು ಆರಿಸುವ ಮೂಲಕ ನಿಮ್ಮ ವರ್ಗವನ್ನು ಆಯ್ಕೆ ಮಾಡಿ. ನೀವು ನೋಡಲು ಬಯಸುವ ರಾಜ್ಯಗಳ ವರ್ಗವನ್ನು ಆರಿಸಿ. ಈಗ ನೀವು ಹೆಸರು, ಎಚ್‌ಎಚ್‌ಡಿ ಸಂಖ್ಯೆ, ಮೊಬೈಲ್ ಸಂಖ್ಯೆ ಮತ್ತು ಪಡಿತರ ಚೀಟಿ ಆಯ್ಕೆಗಳನ್ನು ನೋಡುತ್ತೀರಿ. ಇದರಲ್ಲಿ ನಿಮ್ಮ ವಿವರಗಳನ್ನು ನೀವು ಭರ್ತಿ ಮಾಡಬೇಕು. ಇದನ್ನು ಮಾಡಿದ ನಂತರ ನಿಮ್ಮ ರಾಜ್ಯಗಳನ್ನು ನೀವು ತಿಳಿಯುವಿರಿ.

ಈ ಪಟ್ಟಿಯಲ್ಲಿ, ನೀವು ಮತ್ತು ನಿಮ್ಮ ಕುಟುಂಬವು ಈ ಯೋಜನೆಯ ವ್ಯಾಪ್ತಿಗೆ ಬರುತ್ತವೆ ಅಥವಾ ಇಲ್ಲ ಎಂದು ತಿಳಿಯುತ್ತದೆ. ನಂತರ ನಿಮ್ಮ ಮತ್ತು ನಿಮ್ಮ ಕುಟುಂಬದ ಹೆಸರನ್ನು ಸೇರಿಸಲು, ನೀವು ನಿಮ್ಮ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಹೋಗಿ CMO ಅನ್ನು ಸಂಪರ್ಕಿಸಬೇಕು.

ಇತ್ತೀಚೆಗೆ, ಫಲಾನುಭವಿಗಳ ಸಂಖ್ಯೆ 1 ಕೋಟಿ ದಾಟಿದಾಗ ಆಯುಷ್ಮಾನ್ ಭಾರತ್ ಯೋಜನೆಯ ಎಲ್ಲಾ ಫಲಾನುಭವಿಗಳನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಅವರು ಇದು ಪ್ರತಿಯೊಬ್ಬ ಭಾರತೀಯರಿಗೂ ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು. ಎರಡು ವರ್ಷಗಳಿಗಿಂತ ಕಡಿಮೆ ಅವಧಿಯಲ್ಲಿ ಈ ಉಪಕ್ರಮವು ಅನೇಕ ಜನರ ಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ. ಎಲ್ಲಾ ಫಲಾನುಭವಿಗಳು ಮತ್ತು ಅವರ ಕುಟುಂಬಗಳನ್ನು ನಾನು ಅಭಿನಂದಿಸುತ್ತೇನೆ. ನಾನು ಅವರಿಗೆ ಉತ್ತಮ ಆರೋಗ್ಯವನ್ನು ಬಯಸುತ್ತೇನೆ ಎಂದಿದ್ದರು.

Comments are closed.