ಕರ್ನಾಟಕ

ರಾಜ್ಯದಲ್ಲಿ ಇಂದು (ಮಂಗಳವಾರ) 161 ಕೊರೋನಾ ಪ್ರಕರಣಗಳು ಪತ್ತೆ: ಎರಡು ಸಾವು

Pinterest LinkedIn Tumblr


ಬೆಂಗಳೂರು(ಜೂ.09): ಕರ್ನಾಟಕದಲ್ಲಿ ಕೊರೋನಾ ವೈರಸ್​ ಆರ್ಭಟ ಮುಂದುವರಿದೆ. ಹೀಗಾಗಿಯೇ ಕಳೆದ 24 ಗಂಟೆಯಲ್ಲಿ 161 ಮಂದಿ ಹೊಸದಾಗಿ ಕೋವಿಡ್​​-19 ಪಾಸಿಟಿವ್​ ಬಂದಿದೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 5,921ಕ್ಕೆ ಏರಿಕೆಯಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಹೆಲ್ತ್​​​ ಬುಲೆಟಿನ್​​ನಿಂದ ತಿಳಿದು ಬಂದಿದೆ.

ರಾಜ್ಯ ಸರ್ಕಾರದ ಹೆಲ್ತ್​​​ ಬುಲೆಟಿನ್​​ ಪ್ರಕಾರ, ಇಂದು ಯಾದಗಿರಿ 61, ಬೆಂಗಳೂರು ನಗರ 29, ದಕ್ಷಿಣ ಕನ್ನಡ 23, ಕಲಬುರ್ಗಿ 10, ಬೀದರ್ 09, ದಾವಣಗೆರೆ 8, ಕೊಪ್ಪಳ 6, ಶಿವಮೊಗ್ಗ 4 ಕೇಸ್​ ಪತ್ತೆಯಾಗಿವೆ. ಇನ್ನು ವಿಜಯಪುರ, ಚಿಕ್ಕಬಳ್ಳಾಪುರ, ಧಾರವಾಡ, ಮೈಸೂರು, ಬಾಗಲಕೋಟೆ, ತುಮಕೂರು ಮತ್ತು ಚಾಮರಾಜನಗರದಲ್ಲಿ ತಲಾ ಕೇಸ್​​ ವರದಿಯಾಗಿದೆ.

ಸದ್ಯ ಒಟ್ಟು 5,921 ಸೋಂಕಿತರ ಪೈಕಿ2,605 ಜನರು ಸಂಪೂರ್ಣ ಗುಣಮುಖರಾಗಿ ಡಿಸ್ಚಾರ್ಜ್​​​ ಆಗಿದ್ಧಾರೆ. ಹೀಗಾಗಿ ರಾಜ್ಯದಲ್ಲಿ ಪ್ರಸ್ತುತ 3248 ಆ್ಯಕ್ಟೀವ್​​ ಕೇಸುಗಳಿವೆ. ಈ ಎಲ್ಲರಿಗೂ ಪ್ರತ್ಯೇಕವಾಗಿ ಆಸ್ಪತ್ರೆಯಲ್ಲಿರಿಸಿ ಕೋವಿಡ್​​-19 ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನು, ಮಾರಕ ಕೊರೋನಾ ಸೋಂಕಿಗೆ ಇಬ್ಬರು ಬಲಿಯಾಗಿದ್ಧಾರೆ. ಈ ಮೂಲಕ ರಾಜ್ಯದಲ್ಲಿನ ಮೃತರ ಸಂಖ್ಯೆಯೂ 66ಕ್ಕೆ ಏರಿಕೆಯಾಗಿದೆ. ಆದ್ದರಿಂದಲೇ ಜನರಲ್ಲಿ ಮತ್ತಷ್ಟು ಕೊರೋನಾ ವೈರಸ್​ ಭೀತಿ ಶುರುವಾಗಿದೆ.

Comments are closed.