ಕರ್ನಾಟಕ

ಕೆನರಾ ಬ್ಯಾಂಕ್ ನಿಂದ ಎಲ್ಲ ಸಾಲಗಳ ಮೇಲಿನ ಬಡ್ಡಿದರ ಇಳಿಕೆ!‌

Pinterest LinkedIn Tumblr


ಬೆಂಗಳೂರು: ಸರಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್‌, ನಾನಾ ಸಾಲಗಳ ಮೇಲಿನ ಬಡ್ಡಿ ದರವನ್ನು (ಎಂಸಿಎಲ್‌ಆರ್‌) ಇಳಿಕೆ ಮಾಡಿದೆ. ಪರಿಷ್ಕೃತ ದರಗಳು ಜೂನ್‌ 7ರಿಂದಲೇ ಅನ್ವಯವಾಗಲಿದ್ದು, ಸಾಲ ಪಡೆದಿರುವ ಗ್ರಾಹಕರಿಗೆ ಇದರಿಂದ ಸಾಕಷ್ಟು ಹಣ ಉಳಿತಾಯವಾಗಲಿದೆ.

ರಿಸರ್ವ್‌ ಬ್ಯಾಂಕ್‌ನ ರೆಪೊ ದರಕ್ಕೆ ಜೋಡಣೆಯಾಗಿರುವ ಸಾಲಗಳ ಮೇಲಿನ ಬಡ್ಡಿ ದರವನ್ನು (ಆರ್‌ಎಲ್‌ಎಲ್‌ಆರ್‌) ಕೆನರಾ ಬ್ಯಾಂಕ್‌ ಶೇ.0.40ರಷ್ಟು ಇಳಿಕೆ ಮಾಡಿದೆ. ಗ್ರಾಹಕರಿಗೆ ಬಡ್ಡಿ ದರವು ಈಗ ಶೇ 6.90ಕ್ಕೆ ಇಳಿಕೆಯಾಗಿದೆ. ಈ ಮೊದಲು ಶೇ.7.30ರಷ್ಟು ಬಡ್ಡಿ ವಿಧಿಸಲಾಗುತ್ತಿತ್ತು.

ಒಂದು ವರ್ಷ, 6 ತಿಂಗಳು, 3 ತಿಂಗಳು, ಒಂದು ರಾತ್ರಿ ಅವಧಿ ಸೇರಿದಂತೆ ಸಾಲಗಳ ಬಡ್ಡಿ ದರದಲ್ಲಿಯೂ ಶೇ 0.20ರಷ್ಟು ಇಳಿಕೆ ಮಾಡಲಾಗಿದೆ. ಪರಿಷ್ಕೃತ ಬಡ್ಡಿ ದರದ ಪ್ರಕಾರ, ಒಂದು ರಾತ್ರಿ ಅವಧಿಯ ಸಾಲಕ್ಕೆ ಎಂಸಿಎಲ್‌ಆರ್‌ ಶೇ.7.30, ಒಂದು ತಿಂಗಳ ಸಾಲಕ್ಕೆ ಶೇ.7.30, ಮೂರು ತಿಂಗಳಿಗೆ ಶೇ.7.55ರ ಎಂಸಿಎಲ್‌ಆರ್‌ ನಿಗದಿ ಮಾಡಲಾಗಿದೆ. 6 ತಿಂಗಳ ಸಾಲಕ್ಕೆ ಶೇ.7.60, ಮತ್ತು ಒಂದು ವರ್ಷದ ಸಾಲಕ್ಕೆ ಶೇ.7.65ರ ಎಂಸಿಎಲ್‌ಆರ್‌ ನಿಗದಿಯಾಗಿದೆ.

Comments are closed.