ಬೆಂಗಳೂರು (ಜೂ. 5): ಎರಡೂವರೆ ತಿಂಗಳು ಲಾಕ್ಡೌನ್ ಮಾಡಿದ್ದರೂ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಕೊರೋನಾ ಕೇಸ್ಗಳು ಆತಂಕ ಸೃಷ್ಟಿಸಿವೆ. ಮಹಾರಾಷ್ಟ್ರ, ದೆಹಲಿ, ಗುಜರಾತ್ ಮುಂತಾದ ರಾಜ್ಯಗಳಿಂದ ಕರ್ನಾಟಕಕ್ಕೆ ಬರಲು ಅನುಮತಿ ನೀಡಿದ ಮೇಲೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ದುಪ್ಪಟ್ಟಾಗಿದೆ. ಇಂದು ಒಂದೇ ದಿನ ಕರ್ನಾಟಕದಲ್ಲಿ 515 ಕೊರೋನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಇಂದು ಕೂಡ ಸೋಂಕಿತರ ಪಟ್ಟಿಯಲ್ಲಿ ಮಹಾರಾಷ್ಟ್ರದಿಂದ ಬಂದವರ ಸಂಖ್ಯೆಯೇ ಹೆಚ್ಚಾಗಿದೆ.
ಕರ್ನಾಟಕದಲ್ಲಿ ಇಂದು 515 ಕೊರೋನಾ ಕೇಸ್ಗಳು ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ 4,835ಕ್ಕೆ ಏರಿಕೆಯಾಗಿದೆ. ಇಂದು 83 ಕೊರೋನಾ ಸೋಂಕಿತರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 13 ರೋಗಿಗಳು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದಿನ 515 ಸೋಂಕಿತರ ಪೈಕಿ 482 ಸೋಂಕಿತರು ಬೇರೆ ರಾಜ್ಯಗಳಿಂದ ಬಂದವರಾಗಿದ್ದಾರೆ. ಉಡುಪಿಯೊಂದರಲ್ಲೇ ಇಂದು 204 ಕೊರೋನಾ ಕೇಸ್ಗಳು ಪತ್ತೆಯಾಗಿವೆ.
ಇಂದು ಉಡುಪಿಯಲ್ಲಿ 204, ಯಾದಗಿರಿ- 74, ಕಲಬುರ್ಗಿ- 42, ಬೀದರ್- 39, ಬೆಳಗಾವಿ- 36, ಬೆಂಗಳೂರು-10. ಮಂಡ್ಯ- 13, ವಿಜಯಪುರ- 53, ಹಾಸನ- 3, ದಾವಣಗೆರೆ- 1, ಚಿಕ್ಕಬಳ್ಳಾಪುರ- 3, ದಕ್ಷಿಣ ಕನ್ನಡ- 8, ಉತ್ತರ ಕನ್ನಡ- 7, ಬಾಗಲಕೋಟೆ- 1, ಧಾರವಾಡ-3, ಬಳ್ಳಾರಿ- 1, ಬೆಂಗಳೂರು ಗ್ರಾಮಾಂತರ- 12, ಕೋಲಾರ- 1, ಹಾವೇರಿ- 2, ರಾಮನಗರ- 2 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಇವರಲ್ಲಿ ಬಹುತೇಕರು ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ.
Comments are closed.