ಕರ್ನಾಟಕ

ರಾಜ್ಯದಲ್ಲಿ 187 ಕೊರೋನಾ ಪ್ರಕರಣಗಳು ಪತ್ತೆ: ಒಂದು ಸಾವು

Pinterest LinkedIn Tumblr


ಬೆಂಗಳೂರು(ಜೂ. 01): ಕಳೆದ 24 ಗಂಟೆ ಅವಧಿಯಲ್ಲಿ ರಾಜ್ಯದಲ್ಲಿ 187 ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಉಡುಪಿಯೊಂದರಲ್ಲೇ ಬರೋಬ್ಬರಿ 73 ಪ್ರಕರಣಗಳು ದಾಖಲಾಗಿವೆ. ಬೆಂಗಳೂರಿನಲ್ಲಿ ಒಬ್ಬ ಸೋಂಕಿತ ವ್ಯಕ್ತಿ ಬಹು ಅಂಗಾಂಗ ವೈಫಲ್ಯದಿಂದ ಮೃತಪಟ್ಟಿದ್ದಾರೆ. ಬಿಹಾರಿ ಕೂಲಿ ಕಾರ್ಮಿಕ ಪಿ-429 ರೋಗಿಯ ಸೆಕೆಂಡರಿ ಸಂಪರ್ಕದಿಂದ ಸೋಂಕು ತಗುಲಿ ಏಪ್ರಿಲ್ 24ರಂದು ಆಸ್ಪತ್ರೆಗೆ ದಾಖಲಾಗಿದ್ದ 90 ವರ್ಷದ ವೃದ್ಧರು ಅಸುನೋಗಿದ್ದಾರೆ. ಮೇ 22ರಂದು ಸೆಪ್ಸಿಸ್ ಉಲ್ಭಣಗೊಂಡಿದ್ದರಿಂದ ಐಸಿಯುಗೆ ವರ್ಗಾಯಿಸಲಾಗಿತ್ತು. ಆದರೆ, ನಿನ್ನೆ ರಾತ್ರಿ ಇವರು ಇಹಲೋಕ ತ್ಯಜಿಸಿದ್ಧಾರೆ.

ಈ 90 ವರ್ಷದ ವೃದ್ಧರ ಸಾವಿನ ನಂತರ ರಾಜ್ಯದಲ್ಲಿ ಕೊರೋನಾಗೆ ಬಲಿಯಾದವರ ಸಂಖ್ಯೆ 52ಕ್ಕೆ ಏರಿದೆ. ಹಾಗೆಯೇ, ನಿನ್ನೆ ಸಂಜೆ 5ರಿಂದ ಇಲ್ಲಿಯವರೆಗೆ 187 ಪ್ರಕರಣಗಳು ದಾಖಲಾಗಿವೆ. ಇಲ್ಲಿಯವರೆಗೆ ದಾಖಲಾಗಿರುವ ಒಟ್ಟಾರೆ ಪ್ರಕರಣಗಳ ಸಂಖ್ಯೆ 3,408 ಮುಟ್ಟಿದೆ. ಇದೇ ವೇಳೆ, ಕಳೆದ 24 ಗಂಟೆ ಅವಧಿಯಲ್ಲಿ 110 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ಧಾರೆ. ಇದರೊಂದಿಗೆ ರಾಜ್ಯದಲ್ಲಿ ಈವರೆಗೆ 1,318 ಮಂದಿ ಗುಣಮುಖಗೊಂಡು ಆಸ್ಪತ್ರೆಯಿಂದ ಡಿಸ್​ಚಾರ್ಜ್ ಆದಂತಾಗಿದೆ. ಈಗ ರಾಜ್ಯಾದ್ಯಂತ ಸಕ್ರಿಯ ಪ್ರಕರಣಗಳು 2,026 ಇವೆ.

ಕಳೆದ 24 ಗಂಟೆಯಲ್ಲಿ ಬೆಳಕಿಗೆ ಬಂದಿರುವ 187 ಪ್ರಕರಣಗಳ ವಿವರ:
ಉಡುಪಿ‌ 73
ಬೆಂಗಳೂರು 28
ಕಲ್ಬುರ್ಗಿ 24ಹಾಸನ 16
ಮಂಡ್ಯ ‌15
ಶಿವಮೊಗ್ಗ 9
ಚಿಕ್ಕಬಳ್ಳಾಪುರ 5
ದಕ್ಷಿಣ ಕನ್ನಡ 4
ವಿಜಯಪುರ 1
ಬಾಗಲಕೋಟೆ 2
ಬಳ್ಳಾರಿ 3
ಧಾರವಾಡ 2
ಕೋಲಾರ 1
ಹಾವೇರಿ 1
ರಾಮನಗರ 1
ಬೀದರ್ 2

Comments are closed.