ಬೆಂಗಳೂರು (ಮೇ 29): ಕಳೆದೊಂದು ವಾರದಿಂದ ಬೆಂಗಳೂರಿನಲ್ಲಿ ಸಂಜೆಯ ವೇಳೆ ಮಳೆಯ ಅಬ್ಬರ ಜೋರಾಗಿದೆ. 2-3 ದಿನಗಳಿಂದ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗುತ್ತಿದೆ. ಇಂದು ಸಂಜೆ ಕೂಡ ಬೆಂಗಳೂರಿನ ಹಲವು ಭಾಗಗಳಲ್ಲಿ ಗಾಳಿ ಸಹಿತ ಮಳೆಯಾಗಿದೆ.
ಬೆಂಗಳೂರಿನ ದಕ್ಷಿಣ ಭಾಗಗಳಾದ ಬಸವನಗುಡಿ, ಜಯನಗರ, ಬನಶಂಕರಿ, ಬಿಟಿಎಂ ಲೇಔಟ್, ಹನುಮಂತನಗರ, ಕೆ.ಆರ್. ಮಾರ್ಕೆಟ್, ಮೆಜೆಸ್ಟಿಕ್, ಯಶವಂತಪುರ, ಮಲ್ಲೇಶ್ವರಂ, ಹೆಬ್ಬಾಳ, ರಾಜಾಜಿನಗರದ ಸುತ್ತಮುತ್ತ ಮಿಂಚು, ಗುಡುಗು, ಬಿರುಗಾಳಿ ಸಹಿತ ಜೋರಾಗಿ ಮಳೆಯಾಗುತ್ತಿದ್ದು, ಕಚೇರಿಗಳಿಂದ ಮನೆಗೆ ಮರಳುತ್ತಿದ್ದವರು ಮಳೆಯಿಂದ ರಸ್ತೆಮಧ್ಯೆ ಸಿಲುಕಿಕೊಳ್ಳುವಂತಾಗಿದೆ.
ದಕ್ಷಿಣ ರಾಜ್ಯಗಳಲ್ಲಿ ಮುಂಗಾರು ಪ್ರವೇಶಕ್ಕೆ 3 ದಿನಗಳಷ್ಟೇ ಬಾಕಿ ಇದೆ. ಜೂನ್ 1ರಂದು ಕೇರಳಕ್ಕೆ ಮಾನ್ಸೂನ್ ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಹೀಗಾಗಿ, ಬೆಂಗಳೂರು ಸೇರಿದಂತೆ ಕರ್ನಾಟಕದ ಅನೇಕ ಭಾಗಗಳಲ್ಲಿ ಮುಂಗಾರು ಮಳೆಯಾಗುತ್ತಿದೆ.
Comments are closed.