ಕರ್ನಾಟಕ

ಭಾರೀ ಕುಸಿತ ಕಂಡ ಚಿನ್ನ ದರ

Pinterest LinkedIn Tumblr


ಬೆಂಗಳೂರು (ಮೇ 28): ನೀವು ಚಿನ್ನ ತೆಗೆದುಕೊಳ್ಳುವ ಆಲೋಚನೆಯಲ್ಲಿದ್ದೀರೇ? ಹಾಗಿದ್ದರೆ ಇದು ಸೂಕ್ತ ಸಮಯ. ಏಕೆಂದರೆ ಇಷ್ಟು ದಿನ ಏರಿಕೆ ಗತಿಯಲ್ಲಿ ಸಾಗುತ್ತಿದ್ದ ಚಿನ್ನದ ದರ ಈಗ ಗಣನೀಯ ಇಳಿಕೆ ಕಾಣುತ್ತಿದೆ. ಬುಧವಾರ ಬೆಂಗಳೂರಿನಲ್ಲಿ 22 ಕ್ಯಾರೆಟ್​ನ 10 ಗ್ರಾಂ ಚಿನ್ನಕ್ಕೆ 900 ರೂಪಾಯಿ ಇಳಿಕೆ ಕಂಡಿದೆ. ಈ ಮೂಲಕ ಚಿನ್ನದ ಬೆಲೆ 43,400 ರೂಪಾಯಿ ಆಗಿದೆ. ಇನ್ನು, 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರ ಕೂಡ 890 ರೂಪಾಯಿ ಇಳಿಕೆ ಕಂಡಿದ್ದು, 47,430 ರೂಪಾಯಿ ಆಗಿದೆ.

ಮೇ 23ರಂದು ಚಿನ್ನದ ದರ ಏರಿಕೆ ಕಂಡಿದ್ದು ಹೊರತುಪಡಿಸಿದರೆ ಮೇ 20ರಿಂದ ಕಳೆದ ಇಲ್ಲಿಯವರೆಗೆ ಚಿನ್ನದ ದರ ಕುಸಿಯುತ್ತಲೇ ಇದೆ. ಆದರೆ, ನಿನ್ನೆ ಕಂಡಷ್ಟು ದರ ಕುಸಿತ ಇತ್ತೀಚೆಗೆ ಕಂಡಿರಲಿಲ್ಲ.

ಬೆಳ್ಳಿ ಬೆಲೆಯಲ್ಲಿ ಭಾರೀ ಕುಸಿತ ಕಂಡಿದೆ. ಕೆಜಿ ಬೆಳ್ಳಿಗೆ 900 ರೂಪಾಯಿ ಇಳಿಕೆ ಕಂಡಿದೆ. ಈ ಮೂಲಕ ಬೆಳ್ಳಿ ದರ 47,400 ರೂಪಾಯಿ ಆಗಿದೆ.

ಅನೇಕ ವಿಚಾರಗಳು ಚಿನ್ನದ ಬೆಲೆಯನ್ನು ನಿರ್ಧರಿಸುತ್ತವೆ. ಹಣ ದುಬ್ಬರ, ಅಂತಾರಾಷ್ಟ್ರೀಯ ಮಾರುಕಟ್ಟೆ ಬೆಲೆ, ಬಡ್ಡಿ ದರ, ಜ್ಯುವೆಲರಿ ಮಾರುಕಟ್ಟೆ ಮತ್ತು ವ್ಯಾಪಾರ ಯುದ್ಧಗಳು ಚಿನ್ನದ ಬೆಲೆ ಏರಿಳಿತಕ್ಕೆ ನೇರ ಕಾರಣವಾಗುತ್ತವೆ.

Comments are closed.