ಕರ್ನಾಟಕ

ಪೊಲೀಸರು ಮನೆಯಿಂದಲೇ ಊಟ, ಮಾಸ್ಕ್​​​​ ಮತ್ತು ಫೇಸ್​​​​ ಶೀಲ್ಡ್​​ ತರುವುದು ಕಡ್ಡಾಯ: ಭಾಸ್ಕರ್​​ ರಾವ್​ ​

Pinterest LinkedIn Tumblr


ಬೆಂಗಳೂರು(ಮೇ.25): ಕೊರೋನಾ ಮಾಹಾಮಾರಿ ಪೊಲೀಸರನ್ನು ಕಾಡತೊಡಗಿದೆ. ಬೆಂಗಳೂರಿನ ಪುಲಿಕೇಶಿನಗರ ಸಂಚಾರ ಠಾಣೆಯ ಕಾನ್ಸ್​​ಟೇಬಲ್​​ಗೆ ಸೋಂಕು ತಗುಲಿದ್ದು, ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾನ್ಸ್​​ಟೇಬಲ್​​ಗೆ ಕೊರೋನಾ ಸೋಂಕು ಪತ್ತೆಯಾದ ಬಳಿಕ ಇಲಾಖೆ ಎಚ್ಚೆತ್ತುಕೊಂಡಿದ್ದು, ಅಗತ್ಯ ಕ್ರಮಗಳನ್ನ ಕೈಗೊಳ್ಳಲು ನಗರ ಪೊಲೀಸ್ ಕಮೀಷನರ್ ಭಾಸ್ಕರ್ ರಾವ್ ಮುಂದಾಗಿದ್ದಾರೆ.

ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿಗಳ ಸ್ವಚ್ಚತೆ ಸಲುವಾಗಿ ವಾಷಿಂಗ್ ಮೆಷಿನ್ ಕೊಡಲು ಕಮೀಷನರ್ ಚಿಂತನೆ ನಡೆಸಿದ್ದಾರೆ. ಪ್ರಾಯೋಗಿಕವಾಗಿ ನಗರದ ಎರಡು ಪೊಲೀಸ್ ಠಾಣೆಗಳಿಗೆ ವಾಷಿಂಗ್ ಮೆಷಿನ್ ನೀಡಲಿದ್ದು, ಸಿಬ್ಬಂದಿಗಳು ತಮ್ಮ ಸಮವಸ್ತ್ರ, ಖರ್ಚಿಫ್ ಸ್ವಚ್ಚತೆ ಮಾಡಿಕೊಳ್ಳಬೇಕು ಎಂಬ ಹೊಸ ವ್ಯವಸ್ಥೆ ಜಾರಿಗೊಳಿಸಲಿದ್ದಾರೆ.

ಪೊಲೀಸರ ಆರೋಗ್ಯದ ದೃಷ್ಟಿಯಿಂದ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನ ಕೈಗೊಳ್ಳುತ್ತಿದ್ದು, ಅದರಲ್ಲಿ ಮುಖ್ಯವಾಗಿ ವಾಷಿಂಗ್ ಮೆಷಿನ್ ನೀಡುವ ಯೋಜನೆ ಸಹ ಒಂದಾಗಿದೆ. ಕರ್ತವ್ಯ ನಿರತ ಸಿಬ್ಬಂದಿ ಕರ್ತವ್ಯ ಮುಗಿದ ಬಳಿಕ ಮನೆಗೆ ಹೋಗ್ತಾ. ಮನೆಗೆ ಹೋಗುವುದಕ್ಕಿಂತ ಠಾಣೆಯಲ್ಲಿ ಸಮವಸ್ತ್ರ ಸ್ವಚ್ಚತೆ ಮಾಡಿಕೊಳ್ಳಬೇಕೆಂದು ಕಮೀಷನರ್ ಮನವಿ ಮಾಡಿದ್ದಾರೆ. ಇದಕ್ಕಾಗಿ ಬಿಸಿನೀರಿನ ವ್ಯವಸ್ಥೆಯೂ ಮಾಡುವುದಾಗಿ ತಿಳಿಸಿದರು. ಮೊದಲು ಎರಡು ಠಾಣೆಯಲ್ಲಿ ಇದನ್ನ ಜಾರಿಗೆ ತಂದು ಬಳಿಕ ಇನ್ನಷ್ಟು ಠಾಣೆಗಳಿಗೆ ವಾಷಿಂಗ್ ಮೆಷಿನ್ ಕೊಡಲು ಚಿಂತನೆ ನಡೆಸಿದ್ದಾರಂತೆ.

ಇನ್ನೂ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯನಿರತ ಸಿಬ್ಬಂದಿಗಳ ಆರೋಗ್ಯದ ಬಗ್ಗೆ ಮೇಲಾಧಿಕಾರಿಗಳು ನಿಗಾ ವಹಿಸಬೇಕೆಂದು ಸೂಚನೆ ನೀಡಿದರು. ಠಾಣೆಯಲ್ಲಿರುವ ಪ್ರತಿ ಸಿಬ್ಬಂದಿ ಮೇಲೆ ಎಸ್ಐ, ಇನ್ಸ್‌ಪೆಕ್ಟರ್, ಎಸಿಪಿ, ಡಿಸಿಪಿಗಳು ಎಚ್ಚರಿಕೆ ವಹಿಸಲು ಸೂಚನೆ ನೀಡಿದ್ದಾರೆ. ಪೊಲೀಸ್ ಠಾಣೆಯಲ್ಲಿ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಹಾಗೂ ಫೇಸ್ ಶೀಲ್ಡ್ ಧರಿಸಬೇಕು. ಸ್ಯಾನಿಟೈಸರ್ ಹಾಕಬೇಕು. ಸಾರ್ವಜನಿಕರು ಠಾಣೆಗೆ ಬಂದಾಗ ಕಡ್ಡಾಯವಾಗಿ ಮಾಸ್ಕ್, ಹಾಗೂ ಸ್ಯಾನಿಟೈಸರ್ ಹಾಕಿ ಬರಬೇಕು. ಹಾಗೂ ಪೊಲೀಸ್ ಸಿಬ್ಬಂದಿ ವಿನಾಕಾರಣ ಯಾವುದೇ ವಸ್ತುಗಳನ್ನ ಮುಟ್ಟಬಾರದು ಎಂದು ಎಚ್ಚರಿಸಿದರು.

ಅಲ್ಲದೇ, ಪೊಲೀಸ್ ಠಾಣೆ ಬಳಿ ಅನಗತ್ಯವಾಗಿ ಇರುವ ವಸ್ತುಗಳನ್ನ ಕೂಡಲೇ ವಿಲೇವಾರಿ ಮಾಡಿ ಸ್ವಚ್ಛವಾಗಿ ಇಟ್ಟುಕೊಳ್ಳಲು ಸೂಚನೆ ನೀಡಿದರು. ಪೊಲೀಸರು ಹೊರಗಡೆ ಕರ್ತವ್ಯದಲ್ಲಿ ಇದ್ದಾಗ ದಾನಿಗಳು ನೀಡುವ ಊಟ ಸೇವಿಸಬಾರದು. ಎಲ್ಲರೂ ಮನೆಯಿಂದ ಊಟ ತರಬೇಕೆಂದು ಸಿಬ್ಬಂದಿಗೆ ಸೂಚಿಸಿದರು. ಇನ್ನೂ ಕೊರೋನಾ ಬಂದ ಬಳಿಕ ಪೆರೇಡ್ ನಿಲ್ಲಿಸಲಾಗಿತ್ತು. ಆದ್ರೀಗ ಮತ್ತೆ ಪೆರೇಡ್ ಶುರು ಮಾಡಲು ಕಮೀಷನರ್ ಸೂಚನೆ ನೀಡಿದ್ದಾರೆ.

ಪೆರೇಡ್ ಮಾಡುವುದರಿಂದ ಮಾನಸಿಕ ಹಾಗೂ ದೈಹಿಕ ಸಮತೋಲನ ಸಾಧ್ಯವಾಗುತ್ತೆ, ಇದರಿಂದ ಪಾಸಿಟಿವ್ ಆಗಿ ಕರ್ತವ್ಯ ನಿರ್ವಹಿಸಬಹುದು ಎಂದರು. ಕೊರೋನಾ ಸೋಂಕು ಪತ್ತೆಯಾದ ಬಳಿಕ ಪೊಲೀಸರು ಕೋವಿಡ್​​-19 ವಾರಿಯರ್ಸ್‌ ಆಗಿ ಹಗಲಿರುಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದೇ ವೇಳೆ ಓರ್ವ ಪೊಲೀಸ್ ಕಾನ್ಸ್‌ಟೇಬಲ್ ಗೆ ಪಾಸಿಟಿವ್ ಅಗಿದ್ದು, ಇದೀಗ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನ ಕೈಗೊಳ್ಳಲು ಇಲಾಖೆ ಮುಂದಾಗಿದೆ.

Comments are closed.