ರಾಷ್ಟ್ರೀಯ

ದೇಶದಲ್ಲಿ 24 ಗಂಟೆಯಲ್ಲಿ 6,977 ಕೊರೋನಾ ವೈರಸ್ ಪ್ರಕರಣಗಳು ಪತ್ತೆ; 154 ಮಂದಿ ಬಲಿ

Pinterest LinkedIn Tumblr


ಬೆಂಗಳೂರು (ಮೇ 25): ಭಾರತದಲ್ಲಿ ಕಳೆದ 24 ಗಂಟೆಯಲ್ಲಿ ಬರೋಬ್ಬರಿ 6,977 ಹೊಸ ಕೊರೋನಾ ಪ್ರಕರಣ ದಾಖಲಾಗಿದೆ. ಈ ಮೂಲಕ ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದೇಶದಲ್ಲಿ 1,38,845 ಆಗಿದೆ.

ವಿಶ್ವದಲ್ಲಿ 54 ಲಕ್ಷ ಜನರಲ್ಲಿ ಕೊರೋನಾ ವೈರಸ್​ ಇದೆ. ಈ ಪೈಕಿ 3.46 ಲಕ್ಷ ಜನರು ಕೊರೋನಾ ವೈರಸ್​ಗೆ ಮೃತಪಟ್ಟಿದ್ದಾರೆ. ಈ ಪೈಕಿ ಭಾರತದಲ್ಲಿ ಕೊರೋನಾ ಪೀಡಿತರ ಸಂಖ್ಯೆ 1.38 ಲಕ್ಷ ಇದೆ. ಕಳೆದ 24 ಗಂಟೆಯಲ್ಲಿ 154 ಜನರು ಮೃತಪಟ್ಟಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ ಸಾವಿನ ಸಂಖ್ಯೆ 4,021 ಆಗಿದೆ.

ಕಳೆದ 24 ಗಂಟೆಯಲ್ಲಿ 3,280 ಜನರು ವೈರಸ್​ನಿಂದ ಚೇತರಿಕೆ ಕಂಡಿದ್ದಾರೆ. ಭಾರತದಲ್ಲಿ ಈವರೆಗೆ 57 ಸಾವಿರ ಜನರು ವೈರಸ್​ನಿಂದ ಮುಕ್ತಿ ಕಂಡಿದ್ದಾರೆ.

ಎರಡು ವಾರಗಳ ಹಿಂದೆ 14ನೇ ಸ್ಥಾನದಲ್ಲಿದ್ದ ಭಾರತ ಈಗ 10ನೇ ಸ್ಥಾನಕ್ಕೆ ಏರಿಕೆ ಆಗಿದೆ. ಶೀಘ್ರವೇ ಟರ್ಕಿ, ಜರ್ಮನಿ ಹಾಗೂ ಫ್ರಾನ್ಸ್​ ದೇಶವನ್ನು ಭಾರತ ಹಿಂದಿಕ್ಕುವ ಲಕ್ಷಣ ಗೋಚರವಾಗಿದೆ.

ಲಾಕ್​ಡೌನ್ ಸಡಿಲಿಕೆ ನಂತರ ಕೊರೋನಾ ವೈರಸ್​ ಮಿತಿ ಮೀರಿ ಹರಡುತ್ತಿದೆ. ಈ ವೈರಸ್​ ನಿಯಂತ್ರಣ ಅಸಾಧ್ಯ ಎಂಬಂತಾಗಿದೆ. ಹೀಗಾಗಿ, ಮುಂದಿನ ದಿನಗಳಲ್ಲಿ ಈ ವೈರಸ್​ ಸೋಂಕಿತರ ಸಂಖ್ಯೆ ಮಿತಿ ಮೀರುವ ಸಾಧ್ಯತೆ ಇದೆ. 16 ಲಕ್ಷ ಸೋಂಕಿತರನ್ನು ಹೊಂದುವ ಮೂಲಕ ಅಮೆರಿಕ ಮೊದಲ ಸ್ಥಾನದಲ್ಲಿ ಇದ್ದರೆ, 3.63 ಲಕ್ಷ ಸೋಂಕಿತರಿರುವ ಬ್ರೇಜಿಲ್​ ಎರಡನೇ ಹಾಗೂ 3.44 ಲಕ್ಷ ಸೋಂಕಿತರಿರುವ ರಷ್ಯಾ ಮೂರನೇ ಸ್ಥಾನದಲ್ಲಿದೆ.

Comments are closed.