
ಬೆಂಗಳೂರು (ಮೇ 25): ಕರ್ನಾಟಕದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ನಿನ್ನೆ ಸಂಜೆಯಿಂದ ಇಂದು ಸಂಜೆಯವರೆಗೆ ರಾಜ್ಯದಲ್ಲಿ 93 ಕೊರೋನಾ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1,431ಕ್ಕೆ ಏರಿಕೆಯಾಗಿದೆ. ಇಂದು ಕರ್ನಾಟಕದಲ್ಲಿ ಕೊರೋನಾದಿಂದಾಗಿ ಇಬ್ಬರು ಸಾವನ್ನಪ್ಪಿದ ಪ್ರಕರಣ ದಾಖಲಾಗಿದೆ.
ಇಂದು ಬೆಂಗಳೂರಿನಲ್ಲಿ ಮತ್ತು ದಕ್ಷಿಣ ಕನ್ನಡದಲ್ಲಿ ತಲಾ ಒಬ್ಬರು ಕೊರೋನಾ ರೋಗಿಗಳು ಸಾವನ್ನಪ್ಪಿದ್ದಾರೆ. ಬೆಂಗಳೂರಿನ 55 ವರ್ಷದ ಮಹಿಳಾ ರೋಗಿ ಮೇ 19ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ದಕ್ಷಿಣ ಕನ್ನಡದ 43 ವರ್ಷದ ಪುರುಷ ರೋಗಿ ಲಿವರ್ ಸಮಸ್ಯೆಯಿಂದ ಮೇ 23ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಅದೇ ದಿನ ಅವರು ಸಾವನ್ನಪ್ಪಿದ್ದರು. ಇಂದು ಅವರ ವೈದ್ಯಕೀಯ ವರದಿ ಬಂದಿದ್ದು, ಆ ರೋಗಿಗೆ ಕೊರೋನಾ ಇದ್ದುದು ಖಚಿತವಾಗಿದೆ. ಈ ಮೂಲಕ ಕರ್ನಾಟಕದಲ್ಲಿ ಕೊರೋನಾಗೆ 44 ಜನರು ಬಲಿಯಾದಂತಾಗಿದೆ.
ಇಂದು ಬೆಂಗಳೂರಿನಲ್ಲಿ 2, ಮಂಡ್ಯ- 2, ಕಲಬುರ್ಗಿ- 16, ಬೆಳಗಾವಿ-1, ಯಾದಗಿರಿ- 15, ಉಡುಪಿ- 32, ಹಾಸನ- 1, ವಿಜಯಪುರ- 1, ಉತ್ತರ ಕನ್ನಡ- 1, ದಕ್ಷಿಣ ಕನ್ನಡ- 4, ಧಾರವಾಡ- 4, ಬಳ್ಳಾರಿ- 3, ತುಮಕೂರು- 1, ಕೋಲಾರ- 2, ರಾಮನಗರ- 1 ಕೊರೋನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 2,182ಕ್ಕೆ ಏರಿಕೆಯಾಗಿದೆ.
Comments are closed.