ಕರ್ನಾಟಕ

ಜೂನ್ ದೇಶಕ್ಕೆ ಭಯಾನಕ; ಆತಂಕ ಹೊರ ಹಾಕಿದ ತಜ್ಞರು

Pinterest LinkedIn Tumblr


ಬೆಂಗಳೂರು (ಮೇ 25): ಇತ್ತೀಚಿನ ಕೆಲ ದಿನಗಳಲ್ಲಿ ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಭಾರತದಲ್ಲಿ ಹೆಚ್ಚುತ್ತಲೇ ಇದೆ. ಶುಕ್ರವಾರ 6 ಸಾವಿರ, ಶನಿವಾರ 6,554 ಹಾಗೂ ಭಾನುವಾರ 6,767 ಕೊರೋನಾ ಪ್ರಕರಣಗಳು ದಾಖಲಾಗಿವೆ. ಮುಂದಿನ ಕೆಲವೇ ವಾರಗಳಲ್ಲಿ ಕೊರೋನಾ ವೈರಸ್​ ಪ್ರಕರಣಗಳು ಈಗಿರುವುದಕ್ಕಿಂತ ದುಪ್ಪಟ್ಟಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅಷ್ಟೇ ಅಲ್ಲ, ಜೂನ್​ ತಿಂಗಳು ಭಯಾನಕವಾಗಿರಲಿದೆ ಎಂದು ಆತಂಕ ಹೊರ ಹಾಕಿದ್ದಾರೆ.

ಕಳೆದ ಎರಡು ತಿಂಗಳಿಂದ ಭಾರತದಲ್ಲಿ ಲಾಕ್​ಡೌನ್​ ಮುಂದುವರಿಯುತ್ತಿದೆ. ಆದರೆ, ಆರ್ಥಿಕ ಚಟುವಟಿಕೆಗಳಿಗೆ ಸಹಕಾರಿಯಾಗಲಿ ಎನ್ನುವ ಕಾರಣಕ್ಕೆ ಲಾಕ್​ಡೌನ್​ ಸಡಿಲಿಕೆ ಮಾಡಲಾಗಿದೆ. ಲಾಕ್​ಡೌನ್​ ನಡುವೆಯೂ ವೈರಸ್​ ಇಷ್ಟೊಂದು ಏರಿಕೆ ಕಂಡಿದ್ದು ಭಾರತದಲ್ಲೇ ಮೊದಲೇನಲ್ಲ.

ಇರಾನ್​ನಲ್ಲಿ ಒಂದೇ ಬಾರಿಗೆ ಕೊರೋನಾ ವೈರಸ್​ ಪ್ರಕರಣಗಳು ಹೆಚ್ಚಿದ್ದವು. ಆದರೆ, ಅಲ್ಲಿ ತೆಗೆದುಕೊಂಡ ಮುಂಜಾಗ್ರತ ಕ್ರಮದಿಂದ ಏಪ್ರಿಲ್​ ವೇಳೆಗೆ ಕೆಲವೇ ಸಾವಿರ ಆಕ್ಟಿವ್​ ಕೇಸ್​​ಗಳು ಉಳಿದುಕೊಂಡಿದ್ದವು. ಹೀಗಾಗಿ ಆರ್ಥಿಕ ಚಟುವಟಿಕೆಗಳಿಗೆ ಅನುವು ಮಾಡಿಕೊಡಲಾಯಿತು. ಇದಕ್ಕೆ ಈಗ ಇರಾನ್​ ಭಾರೀ ಬೆಲೆ ತೆತ್ತುತ್ತಿದೆ. ಸದ್ಯ ಇರಾನ್​ನಲ್ಲಿ 1.35 ಲಕ್ಷ ಕೊರೋನಾ ಪ್ರಕರಣಗಳು ವರದಿ ಆಗಿವೆ.

ಕೊರೋನಾ ವೈರಸ್​ಗೆ ತತ್ತರಿಸಿರುವ ಕೆಲ ಯುರೋಪ್​ ರಾಷ್ಟ್ರಗಳು ಲಾಕ್​ಡೌನ್​ ತೆಗೆದು ಹಾಕುವ ಮೂಲಕ ಭಾರೀ ನಷ್ಟ ಅನುಭವಿಸುತ್ತಿವೆ. ಇನ್ನು, ಕೊರೋನಾ ಮೊದಲು ಕಾಣಿಸಿಕೊಂಡಿದ್ದ ವುಹಾನ್​​ನಲ್ಲಿ ಈಗ ಮತ್ತೆ ಹೊಸ ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆ. ಸದ್ಯ, ಭಾರತದಲ್ಲಿ ಇದೇ ಪರಿಸ್ಥಿತಿ ಎದುರಾಗುವ ಸಾಧ್ಯತೆ ಇದೆ.

ಭಾರತವನ್ನು ಸಂಪೂರ್ಣವಾಗಿ ಶಟ್​ಡೌನ್​ ಮಾಡಿಡಲು ಸಾಧ್ಯವಿಲ್ಲ. ಹಾಗೆ ಮಾಡಿದರೆ ದೇಶದ ಆರ್ಥಿಕತೆ ಹದಗೆಡುತ್ತದೆ. ಹೀಗಾಗಿ ಲಾಕ್​ಡೌನ್​ ಸಡಿಲಿಕೆ ಮಾಡಲಾಗಿದೆ. ಹಾಗಂದ ಮಾತ್ರಕ್ಕೆ, ಜನರು ಬೇಕಾಬಿಟ್ಟಿ ತಿರುಗಬೇಕೆಂದಿಲ್ಲ ಎನ್ನುತ್ತಾರೆ ತಜ್ಞರು.

ಈಗ ಕೊರೋನಾ ಮಿತಿ ಮೀರಿರುವ ರಾಷ್ಟ್ರಗಳಲ್ಲಿ ಆರಂಭದಲ್ಲಿ 5-6 ಸಾವಿರ ಕೊರೋನಾ ಪ್ರಕರಣಗಳುವ ವರದಿ ಆಗುತ್ತಿದ್ದವು. ಅದು ನಂತರ 15-30 ಸಾವಿರಕ್ಕೆ ಏರಿಕೆ ಆಗಿತ್ತು. ಜೂನ್​ ತಿಂಗಳಲ್ಲಿ ಭಾರತದಲ್ಲೂ ಇದೇ ಪರಿಸ್ಥಿತಿ ನಿರ್ಮಾಣವಾಗಬಹುದು ಎಂಬುದು ತಜ್ಞರ ಅಭಿಪ್ರಾಯ.

Comments are closed.