ಕರ್ನಾಟಕ

ಕ್ವಾರಂಟೈನ್ ತಪ್ಪಿಸಿಕೊಳ್ಳಲು ಮೆಡಿಕಲ್ ಟೆಸ್ಟ್ ನಿಂದ ಬಚಾವು ಮಾಡುತ್ತೇನೆ 25 ಸಾವಿರ ರು. ಕೊಡಿ ! ಮೋಸ ಹೋಗುವ ಮುಂಚೆ ಈ ವರದಿ ಓದಿ…

Pinterest LinkedIn Tumblr

ಬೆಂಗಳೂರು: ಇತ್ತೀಚೆಗೆ ದಂಪತಿಗಳು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಭ್ರಷ್ಟಾಚಾರವನ್ನು ಬಯಲಿಗೆ ತಂದಿದ್ದರು. ಗಾಂಧಿ ನಗರದ ಹೊಟೇಲ್ ವೊಂದರಲ್ಲಿ ಕ್ವಾರಂಟೈನ್ ಗೆ ಒಳಗಾಗಿದ್ದ ದಂಪತಿ ಬಳಿ ಬಂದ ವ್ಯಕ್ತಿ ತಾನು ವೈದ್ಯ ಎಂದು ಹೇಳಿಕೊಂಡು, ಮೆಡಿಕಲ್ ಟೆಸ್ಟ್ ನಿಂದ ಬಚಾವು ಮಾಡುತ್ತೇನೆ 25 ಸಾವಿರ ರು. ಕೊಡಿ ಎಂದು ಹೇಳಿದ್ದಾನೆ.

ಇದನ್ನು ಕೇಳಿದ ದಂಪತಿ ಹೊಟೇಲ್ ಸಿಬ್ಬಂದಿ ಮೂಲಕ ಬಿಬಿಎಂಪಿಗೆ ವಿಷಯ ತಿಳಿಸಿದ್ದಾರೆ, ಬಿಬಿಎಂಪಿ ಆರೋಗ್ಯಾಧಿಕಾರಿ ಡಾ. ನಂದಾ ಅವರು ದಾಖಲಿಸಿದ ದೂರಿನ ಮೇರೆಗೆ ಗಾಂಧಿನಗರ ಪೊಲೀಸರು, 56 ವರ್ಷದ ವ್ಯಕ್ತಿಯ ವಿರುದ್ಧ ಕೇಸ್ ದಾಖಲಿಸಿದ್ದಾರೆ.

ಬ್ಯಾಟರಾಯನಪುರ ನಿವಾಸಿ ಕೃಷ್ಣೇಗೌಡ ಹೊಟೆಲ್ ಗೆ ಬಂದು ತಾನು ವೈದ್ಯನೆಂದು ಹೇಳಿಕೊಂಡಿದ್ದಾನೆ. ಹೊಟೇಲ್ ಬಾಡಿಗೆ 27 ಸಾವಿರ ರು ನೀಡಬೇಕಿಲ್ಲ, ಅದರ ಬದಲು 25 ಸಾವಿರ ರು ನೀಡಿದರೇ ಸಾಕು ಎಂದು ಹೇಳಿ ಹೋಗಿದ್ದಾನೆ.

ದಂಪತಿ ಹೊಟೆಲ್ ಸಿಬ್ಬಂದಿಗೆ ವಿಷಯ ತಿಳಿಸಿದ್ದಾರೆ. ಸಿಬ್ಬಂದಿ ಬಿಬಿಎಂಪಿ ಅಧಿಕಾರಿಗಳಿಗೆ ಹೇಳಿದ್ದಾರೆ. ಆದರೆ ಆ ವೇಳೆಗೆ ಕೃಷ್ಣೆಗೌಡ ಪರಾರಿಯಾಗಿದ್ದ, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆತನಿಗಾಗಿ ಶೋಧ ನಡೆಸಿದ್ದಾರೆ.

Comments are closed.