ಕರ್ನಾಟಕ

ಸಲೂನ್ ಶಾಪ್ ಗಳಿಗೆ ಅನುಮತಿ: ಗ್ರಾಹಕರು ಮುಂಚಿತವಾಗಿಯೇ ಮಾಲೀಕನಿಗೆ ಫೋನ್ ಮಾಡಿ ಬುಕ್ಕಿಂಗ್ ಮಾಡಿಕೊಳ್ಳಬೇಕು…

Pinterest LinkedIn Tumblr


ಬೆಂಗಳೂರು: ಬರೋಬ್ಬರಿ 54 ದಿನಗಳ ಬಳಿಕ ರಾಜ್ಯದಲ್ಲಿ ಸಲೂನ್ ಶಾಪ್ ತೆರೆಯಲು ಅನುಮತಿ ನೀಡಲಾಗಿದೆ. ಆದರೆ ಸಲೂನ್ ಶಾಪ್ ತೆರಿಯಲು ಅನುಮತಿ ನೀಡಿದ್ದರು ಕೆಲ ಗೊಂದಲಗಳು ಸಲೂನ್ ಶಾಪ್‍ಗಳಲ್ಲಿ ಕಾರ್ಯನಿರ್ವಹಿಸುವವರಿಗೆ ಮೂಡಿದೆ. ಪರಿಣಾಮ ಸರ್ಕಾರ ಪ್ರತ್ಯೇಕ ಮಾರ್ಗಸೂಚಿ ನೀಡಬೇಕು ಎಂದು ಸವಿತಾ ಸಮಾಜ ಆಗ್ರಹಿಸಿದೆ.

ಸಲೂನ್ ಶಾಪ್ ಬಹುದಿನಗಳ ಬಳಿಕ ತೆರೆಯುತ್ತಿರುವ ಕಾರಣ ಸಾಕಷ್ಟು ಗ್ರಾಹಕರು ಆಗಮಿಸುತ್ತಾರೆ. ಆದರೆ ಜ್ವರ, ಶೀತ, ಕೆಮ್ಮು ಇರುವ ಗ್ರಾಹಕರಿಗೆ ನಾವು ಸೇವೆ ಕೊಡಬೇಕಾ ಬೇಡ್ವಾ ಎಂಬ ಬಗ್ಗೆ ಇನ್ನು ಗೊಂದಲ ಇದೆ ಎಂದು ಸವಿತಾ ಸಮಾಜದವರು ಹೇಳಿದ್ದಾರೆ. ಅಲ್ಲದೇ ಸರ್ಕಾರ ಇಂದಿನಿಂದ ಸಲೂನ್ ತೆರೆಯಲು ಅನುಮತಿ ನೀಡದ್ದರೂ ಸಾಮಾನ್ಯ ದಿನಗಳಲ್ಲಿ ಮಂಗಳವಾರ ಸಲೂನ್ ತೆರೆಯುವುದಿಲ್ಲ. ಆದರು ನಾಳೆ ಬಹುತೇಕ ಅಂಗಡಿಗಳು ಜನರ ಸೇವೆಗೆ ಲಭ್ಯವಿರುತ್ತವೆ ಎಂಬ ಮಾಹಿತಿ ಲಭಿಸಿದೆ.

ಇತ್ತ ಉಡುಪಿಯಲ್ಲಿ ಸಲೂನ್ ಶಾಪ್ ತೆರೆಯಲು ಜಿಲ್ಲಾಡಳಿತ ಅನುಮತಿ ನೀಡಿದ್ದು, ಸವಿತಾ ಸಮಾಜಕ್ಕೆ ಜಿಲ್ಲಾಡಳಿತ ಕಟ್ಟುನಿಟ್ಟಿನ ನಿಯಮ ವಿಧಿಸಿದೆ. ಮಾಸ್ಕ್ -ಸ್ಯಾನಿಟೈಸರ್ ಮತ್ತು ಸಾಮಾಜಿಕ ಅಂತರದ ಜೊತೆಗೆ ಸಾಕಷ್ಟು ಕಟ್ಟುನಿಟ್ಟಿನ ಷರತ್ತುಗಳನ್ನು ವಿಧಿಸಲಾಗಿದೆ. ಹೇರ್ ಕಟ್ಟಿಂಗ್, ಶೇವಿಂಗ್ ಮಾಡಿಸಲು ಬರುವ ಗ್ರಾಹಕರು ಮುಂಚಿತವಾಗಿಯೇ ಮಾಲೀಕನಿಗೆ ಫೋನ್ ಮಾಡಿ ಬುಕ್ಕಿಂಗ್ ಮಾಡಿಕೊಳ್ಳಬೇಕು. ಮಾಲೀಕರು ಗ್ರಾಹಕರಿಗೆ ಕೊಟ್ಟ ಸಮಯಕ್ಕೆ ಬಂದು ಹೇರ್ ಕಟ್ಟಿಂಗ್, ಶೇವಿಂಗ್ ಮಾಡಿಕೊಂಡು ವಾಪಸ್ಸಾಗಬೇಕು. ಸಲೂನ್ ಮುಂಭಾಗ ಮತ್ತು ಒಳಭಾಗದಲ್ಲಿ ಜನ ಜಮಾಯಿಸುವಂತಿಲ್ಲ. ಪ್ರತಿಯೊಬ್ಬ ಗ್ರಾಹಕನಿಗೆ ಉಪಯೋಗಿಸಿದ ಬಟ್ಟೆಯನ್ನು ಪೆಟ್ರೋಲ್ ಅಥವಾ ಸಾಬೂನಿನ ನೀರಿನಲ್ಲಿ ಮುಳುಗಿಸಿಡಬೇಕು. ಯೂಸ್ ಆಂಡ್ ಥ್ರೋ ಶೇವಿಂಗ್ ಕಿಟ್ ಗಳನ್ನು ಮಾತ್ರ ಬಳಸಬೇಕು ಎಂದು ಜಿಲ್ಲಾಡಳಿತ ಸೂಚನೆ ಕೊಟ್ಟಿದೆ. ಈ ಎಲ್ಲ ನಿಯಮಗಳನ್ನು ಪಾಲಿಸಿ ದಿನಕ್ಕೆ ಹದಿನೈದರಿಂದ ಇಪ್ಪತ್ತು ಜನರಿಗೆ ಮಾತ್ರ ಕ್ಷೌರ ಸೇವೆ ಕೊಡಲು ಜಿಲ್ಲಾಧಿಕಾರಿ ಜಗದೀಶ್ ಸೂಚನೆ ನೀಡಿದ್ದಾರೆ.

Comments are closed.