ಕರ್ನಾಟಕ

ರಾಜ್ಯದಲ್ಲಿ 99 ಕೊರೋನಾ ವೈರಸ್ ಪ್ರಕರಣಗಳು

Pinterest LinkedIn Tumblr


ಬೆಂಗಳೂರು (ಮೇ 18): ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಲಾಕ್​ಡೌನ್​ ಸಡಿಲಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ನಾಳೆಯಿಂದ ಬಸ್​, ಆಟೋ, ರೈಲು, ಟ್ಯಾಕ್ಸಿ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಹಾಗೇ, ಸಲೂನ್​, ಅಂಗಡಿ, ಪಾರ್ಕ್​ಗಳನ್ನು ತೆರೆಯಲು ಕೂಡ ಅನುಮತಿ ನೀಡಲಾಗಿದೆ. ಆದರೆ, ಕರ್ನಾಟಕದಲ್ಲಿ ಕೇವಲ 24 ಗಂಟೆಗಳಲ್ಲಿ ಬರೋಬ್ಬರಿ 99 ಕೊರೋನಾ ಸೋಂಕಿತ ಪ್ರಕರಣಗಳು ಪತ್ತೆಯಾಗುವ ಮೂಲಕ ರಾಜ್ಯದಲ್ಲಿ ಕೊರೋನಾ ಅಟ್ಟಹಾಸ ಇನ್ನಷ್ಟು ಹೆಚ್ಚುವ ಆತಂಕ ಎದುರಾಗಿದೆ.

ರಾಜ್ಯದಲ್ಲಿ ನಿನ್ನೆ ಸಂಜೆಯಿಂದ ಇಂದು ಸಂಜೆಯವರೆಗೆ 99 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಕರ್ನಾಟಕದಲ್ಲಿ ಸೋಂಕಿತ ಪ್ರಕರಣಗಳ ಸಂಖ್ಯೆ 1,246ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಒಂದೇ ದಿನದಲ್ಲಿ ಇದುವರೆಗೂ ದಾಖಲಾದ ಅತ್ಯಧಿಕ ಕೊರೋನಾ ಸೋಂಕಿತ ಪ್ರಕರಣಗಳು ಇದಾಗಿದೆ. ಈಗಾಗಲೇ ರಾಜ್ಯದಲ್ಲಿ ಕೊರೋನಾದಿಂದ 37 ಜನರು ಸಾವನ್ನಪ್ಪಿದ್ದಾರೆ. 530 ರೋಗಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಇಂದು ಪತ್ತೆಯಾದ 99 ಹೊಸ ಕೊರೋನಾ ಪ್ರಕರಣಗಳಲ್ಲಿ ಮಹಾರಾಷ್ಟ್ರದಿಂದ ಆಗಮಿಸಿದವರ ಸಂಖ್ಯೆ ಹೆಚ್ಚಾಗಿದೆ. ಬೆಂಗಳೂರು – 24, ಮಂಡ್ಯ- 17, ರಾಯಚೂರು- 6, ಹಾಸನ- 4, ಕೊಪ್ಪಳ- 3, ವಿಜಯಪುರ- 5, ಗದಗ- 5, ಬಳ್ಳಾರಿ- 1, ಯಾದಗಿರಿ- 6, ಬೀದರ್- 1, ಕಲಬುರ್ಗಿ- 10, ಉತ್ತರ ಕನ್ನಡ- 9, ಬೆಳಗಾವಿ- 2, ಮೈಸೂರು- 1, ಕೊಡಗು- 1, ಉಡುಪಿ- 1, ದಕ್ಷಿಣ ಕನ್ನಡ- 2 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಬೆಂಗಳೂರು ಮತ್ತು ಮಂಡ್ಯದಲ್ಲಿ ಕೊರೋನಾ ಆತಂಕ ಮತ್ತಷ್ಟು ಹೆಚ್ಚಾಗಿದೆ.

Comments are closed.