ಕರ್ನಾಟಕ

ರಾಜ್ಯದಲ್ಲಿ 22 ಮಂದಿಗೆ ಕೊರೋನಾ; ಎರಡು ಸಾವು

Pinterest LinkedIn Tumblr


ಬೆಂಗಳೂರು(ಮೇ.14): ರಾಜ್ಯದಲ್ಲಿ ಮಾರಕ ಕೊರೋನಾ ವೈರಸ್​​ ಹಾವಳಿ ಮುಂದುವರಿದಿದೆ. ಇಂದು 22 ಹೊಸ ಕೊರೋನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 981ಕ್ಕೆ ಏರಿಕೆಯಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ.

ಇನ್ನು, ರಾಜ್ಯ ಸರ್ಕಾರ ನೀಡಿರುವ ಮಾಹಿತಿ ಪ್ರಕಾರ ಇಂದು ದಾವಣಗೆರೆ 3, ಮಂಡ್ಯ 4, ಬೆಂಗಳೂರು 5, ಗದಗ 4, ಬೀದರ್ 4, ಬಾಗಲಕೋಟೆ 1, ಬೆಳಗಾವಿ ಒಬ್ಬರಿಗೆ ಕೊರೋನಾ ಬಂದಿದೆ. ಇದುವರೆಗೂ 981 ಸೋಂಕಿತರ ಪೈಕಿ 456 ಜನ ಸಂಪೂರ್ಣ ಗುಣಮುಖರಾಗಿ ಡಿಸ್ಚಾರ್ಜ್​​ ಆಗಿದ್ದಾರೆ.

ಇನ್ನು, ಕೊರೋನಾಗೆ ಇಬ್ಬರು ಬಲಿಯಾದ ಪರಿಣಾಮ ಸಾವಿನ ಸಂಖ್ಯೆ 35ಕ್ಕೆ ಏರಿಕೆಯಾಗಿದೆ. ದಕ್ಷಿಣ ಕನ್ನಡ ಮತ್ತು ಬೆಂಗಳೂರಿನಲ್ಲಿ ತಲಾ ಒಬ್ಬರು ಸೋಂಕಿಗೆ ಬಲಿಯಾಗಿದ್ದಾರೆ.

ಇಂದು ಪತ್ತೆಯಾದ 22 ಪ್ರಕರಣ ಪೈಕಿ ಬೆಂಗಳೂರಿನ 5 ಮಂದಿಯೂ ಪಾದರಾಯನಪುರ ನಿವಾಸಿಗಳು. ಇದರಲ್ಲಿ ನಾಲ್ವರು ಪುರುಷರು ಹಾಗೂ ಓರ್ವ ಮಹಿಳೆಗೆ ಸೋಂಕು ತಗುಲಿದೆ. ಈ ಎಲ್ಲರನ್ನೂ ಪ್ರತ್ಯೇಕವಾಗಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಚೀನಾದಲ್ಲಿ ಕಾಣಿಸಿಕೊಂಡ ಮಾರಕ ಕೊರೋನಾ ವೈರಸ್​ ಆರ್ಭಟ ಭಾರತದಲ್ಲಿ ಮುಂದುವರಿದಿದೆ. ಕಳೆದ 24 ಗಂಟೆಗಳಲ್ಲಿ 3,722 ಹೊಸ ಕೋವಿಡ್​​-19 ಪಾಸಿಟಿವ್​​ ಪ್ರಕರಣಗಳು ದಾಖಲಾಗಿದೆ. ಈ ಮೂಲಕ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 78 ಸಾವಿರ ಗಡಿ ದಾಟಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಅಧಿಕೃತ ಮಾಹಿತಿ ನೀಡಿದೆ.

Comments are closed.