ಬೆಂಗಳೂರು (ಮೇ 14): ರಾಜ್ಯದಲ್ಲಿ ಕೊರೋನಾ ಪೀಡಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಮತ್ತೊಂದು ಕಡೆ ಹೊರ ರಾಜ್ಯದಿಂದ ಬರುವವರ ಸಂಖ್ಯೆಯೂ ಜಾಸ್ತಿ ಆಗುತ್ತಿದೆ. ಹೀಗಾಗಿ ಕರ್ನಾಟಕ-ತಮಿಳುನಾಡು ಗಡಿಯಲ್ಲಿರುವ ಅತ್ತಿಬೆಲೆಯಲ್ಲಿ ಪೊಲೀರು ಬಿಗಿ ಭದ್ರತೆ ಮಾಡಿದ್ದಾರೆ.
ತಮಿಳುನಾಡಿನಿಂದ ಬುರವ ಪ್ರತಿಯೊಂದು ವಾಹನವನ್ನು ತಡೆದು ಪೊಲೀಸರು ತಪಾಸಣೆ ಮಾಡುತ್ತಿದ್ದಾರೆ. ಆರೋಗ್ಯ ಸಮಸ್ಯೆ ಇದ್ದು, ಅಂಥವರು ಪಾಸ್ ಹೊಂದಿದ್ದರೆ ಮಾತ್ರ ನಗರದ ಒಳಗೆ ಕರೆದುಕೊಳ್ಳಲಾಗುತ್ತಿದೆ. ಇಲ್ಲದಿದ್ದರೆ ಬಂದ ದಾರಿಯಲ್ಲಿ ವಾಪಸ್ ಕಳಿಸ್ತಿದ್ದಾರೆ.
ಒಂದು ವೇಳೆ ಬೆಂಗಳೂರಿನಲ್ಲೇ ಕೆಲಸ ಮಾಡ್ತಿರೋದು, ಅಲ್ಲಿಯೇ ಇರುವುದು ಎಂದಾದರೆ ಅಂಥವರನ್ನು ವೈದ್ಯಕೀಯ ತಪಾಸಣೆ ಮಾಡಿ 14 ದಿನಗಳ ಕಾಲ ಕ್ವಾರೆಂಟೈನ್ ಮಾಡುತ್ತಿದ್ದಾರೆ. ಕ್ವಾರೆಂಟೈನ್ ಆಗೋವರಿಗೆ ಆನೇಕಲ್ ನಲ್ಲಿ 12 ಹೋಟೆಲ್ ಹಾಗೂ ಕಲ್ಯಾಣ ಮಂಟಪ ಈಗಾಗಲೇ ಜಿಲ್ಲಾಡಳಿತ ಬುಕ್ ಮಾಡಿದೆ. ಇನ್ನು ಕ್ವಾರೆಂಟೈನ್ ಆಗಲು ಇಷ್ಟ ಇಲ್ಲದೆ ನೂರಾರು ವಾಹನಗಳು ವಾಪಸ್ ಹೋಗುತ್ತಿವೆ. ಕೇವಲ ಟ್ರಕ್ ಹಾಗೂ ಗೂಡ್ಸ್ ವಾಹನಗಳಿಗೆ ಮಾತ್ರ ಪೊಲೀಸರು ಪ್ರವೇಶ ಮಾಡಿಕೊಟ್ಟಿದ್ದಾರೆ.
ಇದನ್ನೂ ಓದಿ: ಇಂದು 20 ಲಕ್ಷ ಕೋಟಿ ರೂ. ವಿಶೇಷ ಪ್ಯಾಕೇಜ್ ಬಗ್ಗೆ ಇನ್ನಷ್ಟು ವಿವರಣೆ ನೀಡಲಿರುವ ನಿರ್ಮಲಾ ಸೀತಾರಾಮನ್
ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 3,722 ಹೊಸ ಕೋವಿಡ್-19 ಪಾಸಿಟಿವ್ ಪ್ರಕರಣಗಳು ದಾಖಲಾಗಿದೆ. ಈ ಮೂಲಕ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 78 ಸಾವಿರ ಗಡಿ ದಾಟಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಅಧಿಕೃತ ಮಾಹಿತಿ ನೀಡಿದೆ.
Comments are closed.