ಕರ್ನಾಟಕ

ರಾಜ್ಯದ 30 ಜಿಲ್ಲೆಗಳನ್ನು 3 ಜೋನ್​​​ಗಳನ್ನಾಗಿ ವಿಂಗಡಿಸಿ ಆದೇಶ

Pinterest LinkedIn Tumblr


ಬೆಂಗಳೂರು(ಏ.03): ಕೇಂದ್ರ ಸರ್ಕಾರದ ಆದೇಶದ ಮೇರೆಗೆ ಮುಖ್ಯಮಂತ್ರಿ ಬಿ.ಎಸ್​​ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರವೂ ಮಾರಕ ಕೊರೋನಾ ವೈರಸ್​ಗೆ ತತ್ತರಿಸಿ ಹೋದ ಕರ್ನಾಟಕದಲ್ಲಿನ ಜಿಲ್ಲೆಗಳನ್ನು ಮೂರು ಜೋನ್​​ಗಳನ್ನಾಗಿಸಿ ವಿಂಗಡಣೆ ಮಾಡಲಾಗಿದೆ. ಈ ಪೈಕಿ ರಾಜಧಾನಿ ಬೆಂಗಳೂರು ನಗರ, ಮೈಸೂರು, ಬೆಂಗಳೂರು ಗ್ರಾಮಾಂತರ ಮಾತ್ರ ರೆಡ್​ ಜೋನ್​​ನಲ್ಲಿವೆ.

ರಾಜ್ಯದ 30 ಜಿಲ್ಲೆಗಳನ್ನು ಕೊರೋನಾ ಸೋಂಕಿತರು ಮತ್ತು ಸೋಂಕಿಗೆ ಬಲಿಯಾದವರ ಸಂಖ್ಯೆಗೆ ಅನುಗುಣವಾಗಿ ಮೂರು ಜೋನ್​​ಗಳನ್ನಾಗಿ ವಿಂಗಡಣೆ ಮಾಡಲಾಗಿದೆ. ರೆಡ್​ ಜೋನ್​ನಲ್ಲಿ ಮೂರು ಜಿಲ್ಲೆಗಳಲಿದ್ದು, ಇನ್ನು ಆರೇಂಜ್​​​​ ಜೋನ್​​ಗಳಲ್ಲಿ 13 ಜಿಲ್ಲೆಗಳಿವೆ. ಬೆಳಗಾವಿ, ವಿಜಯಪುರ, ಕಲಬುರಗಿ, ಬಾಗಲಕೋಟೆ, ಮಂಡ್ಯ, ಬಳ್ಳಾರಿ, ಧಾರವಾಡ, ದಕ್ಷಿಣ ಕನ್ನಡ, ಬೀದರ್‌, ಚಿಕ್ಕಬಳ್ಳಾಪುರ, ಉತ್ತರ ಕನ್ನಡ, ತುಮಕೂರು ಮತ್ತು ಗದಗ ಜಿಲ್ಲೆಗಳು ಆರೇಂಜ್​​ ಜೋನ್​​ ವ್ಯಾಪ್ತಿಗೆ ಬರುತ್ತವೆ.

ಇನ್ನು, ಗ್ರೀನ್​​​ ಜೋನ್​​​ ವ್ಯಾಪ್ತಿಯಲ್ಲಿ 14 ಜಿಲ್ಲೆಗಳಿವೆ. ಈ ವಲಯದಲ್ಲಿ ದಾವಣಗೆರೆ, ಉಡುಪಿ, ಯಾದಗಿರಿ, ರಾಯಚೂರು, ಕೊಪ್ಪಳ, ಹಾವೇರಿ, ಚಿತ್ರದುರ್ಗ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ರಾಮನಗರ, ಕೊಡಗ, ಕೋಲಾರ ಮತ್ತು ಚಾಮರಾಜನಗರ ಜಿಲ್ಲೆಗಳು ಇವೆ.

ಗ್ರೀನ್​​ ಮತ್ತು ಆರೇಂಜ್​​ ಜೋನ್​ ಹೊರತುಪಡಿಸಿ ರೆಡ್​​​ ಜೋನ್​​ ಜಿಲ್ಲೆಗಳಲ್ಲಿ ಮೇ 3ರ ನಂತರವೂ ಕೆಲವು ವಿನಾಯ್ತಿಗಳೊಂದಿಗೆ ಲಾಕ್​ಡೌನ್​​​​ ಮುಂದುವರಿಯಲಿದೆ. ಗ್ರೀನ್​​ ಮತ್ತು ಆರೇಂಜ್​​​ ಬಹುತೇಕ ಲಾಕ್‌ಡೌನ್ ತೆರವುಗೊಳಿಸದೆ ಹಲವು ಕ್ಷೇತ್ರಗಳಿಗೆ ವಿನಾಯ್ತಿ ನೀಡಲಾಗಿದೆ.

Comments are closed.