ಅಂತರಾಷ್ಟ್ರೀಯ

ಮಕ್ಕಳನ್ನು ಸಮಾಧಾನಪಡಿಸಲು ಕಲ್ಲುಗಳನ್ನು ಪಾತ್ರೆಯಲ್ಲಿಟ್ಟು ಬೇಯಿಸಿದ ಅಮ್ಮ

Pinterest LinkedIn Tumblr


ಕೀನ್ಯಾ: ಆರ್ಥಿಕ ಸಂಕಷ್ಟದಿಂದಾಗಿ ಮಕ್ಕಳಿಗೆ ಆಹಾರ ಬಡಿಸಲು ಸಾಧ್ಯವಾಗದ ತಾಯಿಯೊಬ್ಬಳು, ಕಲ್ಲುಗಳನ್ನು ಪಾತ್ರೆಯಲ್ಲಿಟ್ಟು ಬೇಯಿಸಿ ಮಕ್ಕಳಿಗೆ ಸಮಾಧಾನ ಹೇಳುವ ಮನಕಲುಕುವ ಘಟನೆ ಕೀನ್ಯಾದ ಮೊಂಬಾಸ ಪ್ರದೇಶದಲ್ಲಿ ನಡೆದಿದ್ದು, ಈ ಕುರಿತು ಬಿಬಿಸಿ ಮಾಡಿರುವ ವರದಿ ಜಗತ್ತಿನಾದ್ಯಂತ ವೈರಲ್‌ ಆಗಿದೆ.

ಬಟ್ಟೆ ತೊಳೆಯುವ ಕೆಲಸ ಮಾಡುತ್ತಿರುವ ಪೆನಿಹಾ ಬಹತಿ ಕಿಟ್ಸಾವೊ ಎಂಬ ಮಹಿಳೆ ಅನಕ್ಷರಸ್ಥೆ. ಆಕೆಗೆ ಎಂಟು ಮಕ್ಕಳಿದ್ದು, ಎರಡು ವಾರದ ಹಿಂದೆ ಆಕೆಯ ಪತಿಯನ್ನು ಡಕಾಯಿತರ ಗುಂಪೊಂದು ಕೊಲೆ ಮಾಡಿದೆ. ಈ ನಡುವೆ ಕೀನ್ಯಾದಲ್ಲಿ ಕೊರೊನಾ ಬಾಧೆ ಕಾಣಿಸಿಕೊಂಡಿದ್ದು, ಮಹಿಳೆಗೆ ಕೆಲಸ ನಷ್ಟವಾಯಿತು.

ಆರ್ಥಿಕ ಸಂಕಷ್ಟಕ್ಕೆ ಒಳಗಾದ ಆಕೆ ಮಕ್ಕಳ ಹೊಟ್ಟೆ ತುಂಬಿಸಲು ಪರದಾಡತೊಡಗಿದಳು. ಹೀಗಾಗಿ ಊಟಕ್ಕಾಗಿ ಹಠ ಮಾಡುವ ಮಕ್ಕಳನ್ನು ಸಮಾಧಾನ ಮಾಡುವ ಉದ್ದೇಶದಿಂದ ಪಾತ್ರೆಯಲ್ಲಿ ನೀರು ತುಂಬಿ ಅದಕ್ಕೆ ಒಂದೊಂದೇ ಕಲ್ಲುಗಳನ್ನು ಹಾಕುತ್ತಾ ಆಹಾರ ತಯಾರಿಸುವಂತೆ ನಟಿಸಿ ಮಕ್ಕಳು ನಿದ್ರಿಸುವಂತೆ ಮಾಡುತ್ತಿದ್ದಳು. ಮಹಿಳೆಯ ದಯನೀಯ ಸ್ಥಿತಿ ಕಂಡ ಸ್ಥಳೀಯರೊಬ್ಬರು ಮಾಧ್ಯಮಗಳಿಗೆ ವಿಷಯ ಮುಟ್ಟಿಸಿದ್ದರು. ಈ ಕುರಿತು ವರದಿ ಪ್ರಕಟವಾದ ಬಳಿಕ ಸಾವಿರಾರು ಮಂದಿ ಈ ತಾಯಿಗೆ ನೆರವು ನೀಡಿದ್ದಾರೆ. ಬ್ಯಾಂಕ್‌ ಖಾತೆಯನ್ನು ತೆರೆದು ಹಣ ಕಳುಹಿಸಿದ್ದಾರೆ.

Comments are closed.