ಕರ್ನಾಟಕ

ಖಾಸಗಿ ವಾಹನದಲ್ಲಿ ಊರಿಗೆ ತೆರಳಲು ಹೊರಡಿಸಿದ್ದ ಆದೇಶವನ್ನೇ ಹಿಂಪಡೆದ ಸರ್ಕಾರ

Pinterest LinkedIn Tumblr


ಬೆಂಗಳೂರು (ಮೇ 3): ಲಾಕ್​ಡೌನ್​ನಿಂದಾಗಿ ಬೆಂಗಳೂರಿನಲ್ಲಿ ನೀವು ಸಿಲುಕಿದ್ದೀರೆ? ಖಾಸಗಿ ವಾಹನದಲ್ಲಿ ಮನೆಗೆ ತೆರಳಲು ಪಾಸ್​ ತೆಗೆದುಕೊಂಡಿದ್ದೀರೆ? ಹಾಗಿದ್ರೆ ಅದು ಸಾಧ್ಯವಿಲ್ಲ. ಏಕೆಂದರೆ ಸರ್ಕಾರ ಈ ಆದೇಶವನ್ನು ಈಗ ಹಿಂಪಡೆದಿದೆ.

ಹೌದು, ಲಾಕ್ ಡೌನ್ ಘೋಷಿಸಿದಾಗಿನಿಂದ ನಗರ ಹಾಗೂ ಇತರ ಭಾಗಗಳಲ್ಲಿ ಸಿಲುಕಿರುವ ಕೂಲಿ ಕಾರ್ಮಿಕರು ಹಾಗೂ ಸಾಮಾನ್ಯರು ತಮ್ಮ ತಮ್ಮ ಊರುಗಳಿಗೆ ವಾಪಸ್ ಹೋಗಲು ಆಗದೇ ಹತಾಶರಾಗಿದ್ದಾರೆ. ಮೇ 17ರವರೆಗೆ ಲಾಕ್ ಡೌನ್ ಮುಂದುವರಿಸಲು ನಿಶ್ಚಯಿಸಿರುವುದರಿಂದ ಎಲ್ಲರಿಗೂ ಅವವರ ಊರುಗಳಿಗೆ ಹೋಗಲು ಸರ್ಕಾರ ಅವಕಾಶ ಕಲ್ಪಿಸಿದೆ. ಇವತ್ತಿನಿಂದ ಮಂಗಳವಾರದವರೆಗೆ ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ಉಚಿತವಾಗಿ ಪ್ರಯಾಣಿಸಲು ವ್ಯವಸ್ಥೆ ಮಾಡಲಾಗಿದೆ.

ನಿನ್ನೆ ಖಾಸಗಿ ವಾಹನದಲ್ಲಿ ಮನೆಗೆ ತೆರಳಬಹುದು ಎನ್ನುವ ಆದೇಶವನ್ನು ಸರ್ಕಾರ ಮಾಡಿತ್ತು. ಆದರೆ, ಈಗ ಸರ್ಕಾರ ಆದೇಶವನ್ನು ಹಿಂಪಡೆದಿದೆ. ಉಚಿತ ಬಸ್ ವ್ಯವಸ್ಥೆ ಮಾಡಿರುವುದರಿಂದ ಖಾಸಗಿ ವಾಹನಗಳಿಗೆ ಅವಕಾಶ ನೀಡದಿರಲು ಸರ್ಕಾರ ನಿರ್ಧರಿಸಿದೆ. ಹೀಗಾಗಿ, ಯಾವುದೇ ರೀತಿಯ ಪಾಸ್ ನೀಡದಂತೆ ಪೊಲೀಸರಿಗೆ ಸರ್ಕಾರದಿಂದ ಮೌಖಿಕ ಆದೇಶ ಬಂದಿದೆ ಎನ್ನಲಾಗಿದೆ.

Comments are closed.