
ಯಾದಗಿರಿ: ಲಾಕ್ ಡೌನ್ ಸಂಕಷ್ಟ ಸಂದರ್ಭದಲ್ಲಿ ಕೇಂದ್ರ ಸರಕಾರ ಬಡವರ, ಕಾರ್ಮಿಕರ ಹಸಿವು ನೀಗಿಸುವ ಕಾರ್ಯ ಮಾಡುತ್ತಿದೆ. ರಾಜ್ಯದಲ್ಲಿ ಮೊದಲನೇ ಬಾರಿ ಕೇಂದ್ರ ಸರಕಾರ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ ಮೂಲಕ ಪಡಿತರ ವಿತರಣೆ ಯೋಜನೆಗೆ ಜಾರಿಗೆ ತಂದಿದೆ. ಲಾಕ್ ಡೌನ್ ಸಂದರ್ಭ ಗರೀಬ್ ಕಲ್ಯಾಣ ಯೋಜನೆ ಮೂಲಕ ರಾಜ್ಯಾದ್ಯಂತ ಪಡಿತರ ವಿತರಣೆ ಮಾಡಲಾಗುತ್ತಿದೆ.
ರಾಜ್ಯದಲ್ಲಿ 1,16,28,264 (1.16 ಕೋಟಿ) ಬಿಪಿಎಲ್ ಪಡಿತರ ಕಾರ್ಡ್ಗಳಿವೆ. ಅಂತ್ಯೋದಯ ಕಾರ್ಡ್ 10,92,423 (10.9 ಲಕ್ಷ) ಇವೆ. ಅದೆ ರೀತಿ 1,07,829 ಎಪಿಎಲ್ ಕಾರ್ಡ್ಗಳಿವೆ. ಹೀಗಾಗಿ ಸರಕಾರ ಎಪ್ರಿಲ್ ಹಾಗೂ ಮೇ ತಿಂಗಳ ಪಡಿತರ ವಿತರಣೆ ಮಾಡಲಾಗುತ್ತಿದೆ. ಇಂದಿನಿಂದ ರಾಜ್ಯದ ಎಲ್ಲಾ ಭಾಗದ ಜಿಲ್ಲೆಗಳಲ್ಲಿ ಪಡಿತರ ವಿತರಣೆ ಮಾಡಲಾಗುತ್ತಿದೆ.
ಅಂತ್ಯೋದಯ ಕಾರ್ಡ್ ಹೊಂದಿದ್ದ ಪ್ರತಿ ಸದಸ್ಯರಿಗೆ ಉಚಿತ 10 ಕೆಜಿ ಅಕ್ಕಿ ಕೊಡಲಾಗುತ್ತಿದೆ. ಪ್ರತಿ ಪಡಿತರ ಚೀಟಿಗೂ ಒಂದು ತಿಂಗಳಿಗೆ ಮಾತ್ರ ಒಂದು ಕೆಜಿ ತೊಗರಿ ಬೆಳೆ ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ.
ಬಿಪಿಎಲ್ ಕಾರ್ಡ್ ಹೊಂದಿದ್ದ ಪ್ರತಿ ಸದಸ್ಯರಿಗೆ 10 ಕೆಜಿ ಅಕ್ಕಿ ಉಚಿತ ನೀಡಲಾಗುತ್ತಿದೆ. ತೊಗರಿ ಬೆಳೆ 1 ಕೆಜಿ ಉಚಿತ ನೀಡಲಾಗುತ್ತಿದೆ.
ಈಗಾಗಲೇ ಕೇಂದ್ರ ಸರಕಾರ ಗರೀಬ್ ಕಲ್ಯಾಣ ಯೋಜನೆಯಡಿ ವಿತರಣೆ ಮಾಡುವ ಮುನ್ನ ರಾಜ್ಯ ಸರಕಾರ ಎಪ್ರಿಲ್ ಹಾಗೂ ಮೇ ತಿಂಗಳ ಪಡಿತರ ವಿತರಣೆ ಮಾಡಿದೆ. ಈಗ ಕೇಂದ್ರ ಸರಕಾರ ವಿತರಣೆ ಮಾಡುತ್ತಿದೆ.
ಯಾದಗಿರಿಯಲ್ಲಿ ಗರೀಬ್ ಕಲ್ಯಾಣ ಯೋಜನೆ ಮೂಲಕ ಪಡಿತರ ವಿತರಣೆ..!ಯಾದಗಿರಿ ಜಿಲ್ಲೆಯಲ್ಲಿ ಕೂಡ ಗರೀಬ್ ಕಲ್ಯಾಣ ಮೂಲಕ 399 ಪಡಿತರ ನ್ಯಾಯ ಬೆಲೆ ಅಂಗಡಿಯಲ್ಲಿ ಪಡಿತರ ವಿತರಣೆ ಮಾಡಲಾಗುತ್ತಿದೆ. ಇಂದಿನಿಂದ ಒಂದು ತಿಂಗಳ ಪಡಿತರ ವಿತರಣೆ ಮಾಡಲಾಗುತ್ತಿದೆ. ಯಾದಗಿರಿ ಜಿಲ್ಲೆಯಲ್ಲಿ 1,17,942 ಅಂತ್ಯೋದಯ ಕಾರ್ಡ್ಗಳಿವೆ. 8,28,511 ಬಿಪಿಎಲ್ ಕಾರ್ಡ್ಗಳಿವೆ .
ಇಲ್ಲಿಯವರಗೆ ಕೇಂದ್ರ ಸರಕಾರ ಎಪ್ರಿಲ್ ಹಾಗೂ ಮೇ ತಿಂಗಳ 94,645 ಕ್ವಿಂಟಾಲ್ ಅಕ್ಕಿ ಪೂರೈಕೆ ಮಾಡಿದೆ. ಅಕ್ಕಿ ಜೊತೆ ಒಂದು ತಿಂಗಳ ತೊಗರಿ ಬೇಳೆ ನೀಡಲಾಗುತ್ತಿದೆ. ಅದರಂತೆ 2,611 ಕ್ವಿಂಟಾಲ್ ತೊಗರಿ ಬೆಳೆ ಪೂರೈಕೆಯಾಗಿದೆ. ಆದರೆ, ಕೇಂದ್ರ ಸರಕಾರ ವಿತರಣೆ ಮಾಡಿದ ನಂತರ ಮೇ ತಿಂಗಳ ತೊಗರಿ ಬೇಳೆ ನೀಡಲಾಗುತ್ತದೆ.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ದತ್ತಪ್ಪ ಅವರು ಮಾತನಾಡಿ, ಕೇಂದ್ರ ಸರಕಾರವು ಗರೀಬ್ ಕಲ್ಯಾಣ ಯೋಜನೆ ರಾಜ್ಯದಲ್ಲಿ ಮೊದಲ ಬಾರಿ ಜಾರಿಗೆ ತಂದು ಪಡಿತರ ವಿತರಣೆ ಮಾಡುವ ಕೆಲಸ ಮಾಡಿದೆ. ಜನರು ಪಡಿತರ ಆಹಾರ ಧಾನ್ಯವನ್ನು ಮನೆಯಲ್ಲಿ ಕಾಪಾಡಿಕೊಳ್ಳಬೇಕು. ಜನರು ಈ ಯೋಜನೆ ಸದುಪಯೋಗ ಪಡಿಸಿಕೊಳ್ಳಬೇಕು. ಪಡಿತರ ವಿತರಕರು ತಪ್ಪು ಮಾಡಿದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ರಾಜ್ಯ ಹಾಗೂ ಕೇಂದ್ರ ಸರಕಾರ ಲಾಕ್ ಡೌನ್ ಸಂದರ್ಭದಲ್ಲಿ ಯಾರು ಕೂಡ ಹಸಿವಿನಿಂದ ಬಳಲಬಾರದೆಂದು ಪಡಿತರ ಆಹಾರ ಧಾನ್ಯ ವಿತರಣೆ ಮಾಡಿದೆ. ಜನರು ಸರಕಾರದ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಬೇಕಿದೆ.
Comments are closed.