ಕರ್ನಾಟಕ

ತುಮಕೂರಿನಲ್ಲಿ ಮಾಸ್ಕ್ ಧರಿಸದೇ ಓಡಾಡುವ ವ್ಯಕ್ತಿಗಳಿಗೆ ಪಾಲಿಕೆಯಿಂದ 100 ರೂ. ದಂಡ

Pinterest LinkedIn Tumblr

ತುಮಕೂರು: ನಗರದಲ್ಲಿ ಮಾಸ್ಕ್ ಧರಿಸದೇ ಓಡಾಡುವ ವ್ಯಕ್ತಿಗಳಿಗೆ ಪಾಲಿಕೆ ಸಿಬ್ಬಂದಿ 100 ರೂ. ದಂಡ ವಿಧಿಸುತ್ತಿದ್ದಾರೆ. ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಓಡಾಡುವಾಗ ಮಾಸ್ಕ್‌ ಧರಿಸುವುದನ್ನು ಕಡ್ಡಾಯ ಮಾಡಲಾಗಿದೆ. ಮಾಸ್ಕ್ ಧರಿಸದ ವ್ಯಕ್ತಿಗಳಿಗೆ ದಂಡ ವಿಧಿಸಲಾಗುತ್ತಿದೆ.

ಮಾಸ್ಕ್‌ ಧರಿಸದೇ ಓಡಾಡುವ ವ್ಯಕ್ತಿಗಳಿಗೆ ದಂಢ ವಿಧಿಸುವಂತೆ ಖುದ್ದು ತುಮಕೂರು ಪಾಲಿಕೆ ಆಯುಕ್ತ ಭೂಬಾಲನ್ ಸೂಚನೆ ನೀಡಿದ್ದಾರೆ. ಆಯುಕ್ತರ ಆಧೇಶದಂತೆಯೇ ದಂಡ ವಿಧಿಸಲಾಗುತ್ತಿದೆ.

ಸಾರ್ವಜನಿಕ ಸ್ಥಳದಲ್ಲಿ ಉಗುಳುವುದು ಕಂಡುಬಂದರೂ ದಂಡ ವಿಧಿಸಲಾಗುತ್ತದೆ. ನಗರದಾದ್ಯಂತ ಪಾಲಿಕೆ ಸಿಬ್ಬಂದಿ ಗಸ್ತು ತಿರುಗುತ್ತಿದ್ದು, ಯಾವುದೇ ವ್ಯಕ್ತಿ ಮಾಸ್ಕ್‌ ಧರಿಸದೇ ಇರುವುದು ಅಥವಾ ಉಗುಳುವುದು ಕಂಡುಬಂದರೆ ಸ್ಥಳದಲ್ಲೇ ದಂಡ ಹಾಕುತ್ತಿದ್ದಾರೆ.

ಈಗಾಗಲೇ ಒಟ್ಟು 81 ಜನರಿಗೆ ದಂಡ ಹಾಕಲಾಗಿದೆ. ಇದರ ಜೊತೆಗೆ ನಾಲ್ಕು ಅಂಗಡಿಗಳಿಗೆ ತಲಾ 500 ರೂ ದಂಡ ವಿಧಿಸಲಾಗಿದೆ.

ಅಂಗಡಿಗಳ ಮುಂದೆ ಸಾಮಾಜಿಕ ಅಂತರ ಕಾಯ್ದಕೊಳ್ಳದೇ ಇದ್ದಿದ್ದಕ್ಕೆ ಅಂಗಡಿಗಳಿಗೂ ದಂಡ ವಿಧಿಸಲಾಗಿದೆ.

Comments are closed.