ಕರ್ನಾಟಕ

ಕೊರೋನಾ ವೈರಸ್​: ರಾಜ್ಯವನ್ನು 4 ಜೋನ್​​ಗಳನ್ನಾಗಿ ವಿಂಗಡಿಸಿ ರಾಜ್ಯ ಸರ್ಕಾರ ಆದೇಶ

Pinterest LinkedIn Tumblr


ಬೆಂಗಳೂರು(ಏ.27): ಕೊರೋನಾ ಪಾಸಿಟಿವ್​​ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕಾರಣ ಕರ್ನಾಟಕ ರಾಜಧಾನಿ ಬೆಂಗಳೂರು, ಮೈಸೂರು, ಬೆಳಗಾವಿ, ದಕ್ಷಿಣ ಕನ್ನಡ, ಬೀದರ್, ಕಲ್ಬುರ್ಗಿಯನ್ನು ರಾಜ್ಯ ಸರ್ಕಾರ ರೆಡ್ ಜೋನ್ ಎಂದು ಘೋಷಣೆ ಮಾಡಿತ್ತು. ಈ ಬೆನ್ನಲ್ಲೀ ಮತ್ತೆ ರಾಜ್ಯದಲ್ಲಿ ನಾಲ್ಕು ಜೋನ್​​ಗಳಾಗಿ ಬದಲಾವಣೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.

ಇಷ್ಟು ದಿನಗಳು ನಾವು ರಾಜ್ಯದಲ್ಲಿ ಕೇವಲ ಮೂರು ಜೋನ್​​ಗಳನ್ನು ಮಾತ್ರ ನೋಡಬಹುದಿತ್ತು. ಆದರೀಗ, ರಾಜ್ಯ ಸರ್ಕಾರದ ಆದೇಶದ ಮೇರೆಗೆ ನಾವು ಇನ್ಮುಂದೆ ನಾಲ್ಕು ಜೋನ್​​ಗಳನ್ನು ನೋಡಬಹುದಾಗಿದೆ. ಗ್ರೀನ್ ಜೋನ್, ಯೆಲ್ಲೋ ಜೋನ್, ಆರೆಂಜ್ ಜೋನ್, ರೆಡ್ ಜೋನ್ ಆಗಿ ವಿಂಗಡಣೆ ಮಾಡಲಾಗಿದೆ.

ಇನ್ನು, ಕೊರೋನಾ ಸೋಂಕಿನ ಪ್ರಕರಣಗಳ ಸಂಖ್ಯೆಗೆ ಅನುಗುಣವಾಗಿ ನಾಲ್ಕು ಜೋನ್ ಆಗಿ ವಿಂಗಡನೆ ಮಾಡಲಾಗಿದೆ. ಗ್ರೀನ್ ಜೋನ್ ಅಂದರೆ ಒಂದೂ ಕೊರೋನಾ‌ ಪಾಸಿಟಿವ್ ಇಲ್ಲದ ಜಿಲ್ಲೆಗಳು, ಯೆಲ್ಲೋ ಜೋನ್ ಅಂದರೆ 1 ರಿಂದ 5 ಕೊರೋನಾ ಪಾಸಿಟಿವ್ ಇರುವ ಜಿಲ್ಲೆಗಳು, ಆರೆಂಜ್ ಜೋನ್ ಅಂದರೆ 6 ರಿಂದ 14 ಕೊರೋನಾ ಪಾಸಿಟಿವ್ ಇರುವ ಜಿಲ್ಲೆಗಳು, ರೆಡ್ ಜೋನ್ ಅಂದರೆ 15 ಕ್ಕೂ ಹೆಚ್ಚು ಕೊರೋನಾ ಪಾಸಿಟಿವ್ ಇರುವ ಜಿಲ್ಲೆಗಳು ಎಂದು ಗುರುತಿಸಲಾಗಿದೆ.

ಜೋನ್ ವಿಂಗಡನೆ ಪ್ರತಿ ವಾರಕ್ಕೊಮ್ಮೆ ಕೊರೋನಾ‌ ಪಾಸಿಟಿವ್ ಸಂಖ್ಯೆಗಳಿಗೆ ಅನುಗುಣವಾಗಿ ಮಾಡಲಾಗುತ್ತದೆ. ಸದ್ಯ ಆರೆಂಜ್ ಜೋನ್​​ನಲ್ಲಿ 5, ರೆಡ್​​ ಜೋನ್​​ನಲ್ಲಿ 6, ಯೆಲ್ಲೋ ಜೋನ್​​ನಲ್ಲಿ 6, ಗ್ರೀನ್ ಜೋನ್​​ ನಲ್ಲಿ 14 ಜಿಲ್ಲೆಗಳು ಇವೆ. ಈಗ ಉಡುಪಿ, ಕೊಡಗು, ದಾವಣಗೆರೆ, ಚಿತ್ರದುರ್ಗ ಗ್ರೀನ್ ಜೋನ್​​ಗೆ ಸೇರ್ಪಡೆಯಾಗಿದೆ.

ರಾಜ್ಯದಲ್ಲಿ ಯಾವ್ಯಾವ ಜಿಲ್ಲೆಗಳು ಯಾವ ಜೋನ್​​ನಲ್ಲಿದೆ?

1) ರೆಡ್ ಜೋನ್ ಜಿಲ್ಲೆಗಳು- ಬೆಂಗಳೂರು ನಗರ
– ‎ಮೈಸೂರು
– ‎ಬೆಳಗಾವಿ
– ಬಾಗಲಕೋಟೆ
– ವಿಜಯಪುರ
– ‎ಕಲಬುರಗಿ

2) ಆರೆಂಜ್ ಜೋನ್ ಜಿಲ್ಲೆಗಳು
– ಬೀದರ್
– ‎ಧಾರಾವಾಡ
– ‎ಬಳ್ಳಾರಿ
– ‎ದಕ್ಷಿಣ ಕನ್ನಡ
– ‎ಮಂಡ್ಯ

3) ಯೆಲ್ಲೋ ಜೋನ್ ಜಿಲ್ಲೆಗಳು
– ಉತ್ತರ ಕನ್ನಡ
– ‎ಬೆಂಗಳೂರು ಗ್ರಾಮಾಂತರ
– ‎ಗದಗ
– ‎ತುಮಕೂರು
– ‎ಚಿಕ್ಕಬಳ್ಳಾಪುರ

4) ಗ್ರೀನ್ ಜೋನ್ ಜಿಲ್ಲೆಗಳು
– ಚಿಕ್ಕಮಗಳೂರು
– ‎ಶಿವಮೊಗ್ಗ
– ‎ರಾಮನಗರ
– ‎ಯಾದಗಿರಿ
– ‎‌ಕೊಪ್ಪಳ
– ‎ಹಾವೇರಿ
– ‎ರಾಯಚೂರು
– ‎ಹಾಸನ
– ‎ಚಾಮರಾಜನಗರ
– ‎ಕೋಲಾರ
– ಉಡುಪಿ
– ‎ಕೊಡಗು
– ‎ದಾವಣಗೆರೆ
– ‎ಚಿತ್ರದುರ್ಗ

Comments are closed.