ಕರ್ನಾಟಕ

ಬೆಂಗಳೂರಿನಲ್ಲಿ ಭಾರೀ ಮಳೆ- ಭೂ ಕುಸಿತ; ನಾಮಾವಶೇಷವಾದ ರಸ್ತೆ

Pinterest LinkedIn Tumblr


ಬೆಂಗಳೂರು (ಏಪ್ರಿಲ್ 24); ತಡರಾತ್ರಿಯಿಂದ ಬೆಂಗಳೂರಿನಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಭೂ ಕುಸಿತ ಉಂಟಾಗಿದ್ದ ರಸ್ತೆಯೇ ನಾಮಾವಶೇಷವಾಗಿರುವ ಘಟನೆ ಲಗ್ಗೆರೆಯ ಲಕ್ಷ್ಮೀದೇವಿ ನಗರದಲ್ಲಿ ನಡೆದಿದೆ.

ಮಳೆಯ ಆರ್ಭಟಕ್ಕೆ ರಸ್ತೆ ಕುಸಿದಿದ್ದು ರಸ್ತೆಯ ಮೇಲೆ ನಿಲ್ಲಿಸಲಾಗಿದ್ದ ಕಾರು ಮತ್ತು ಬೈಕುಗಳು ಆಳಕ್ಕೆ ಬಿದ್ದಿವೆ. ಮಳೆ ಹೀಗೆ ಮುಂದುವರೆದರೆ ರಸ್ತೆ ಮತ್ತಷ್ಟು ಕುಸಿಯುವ ಭೀತಿ ಕಾಡಿದ್ದು, ಪರಿಣಾಮ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ. ರಸ್ತೆಯ ಪಕ್ಕದಲ್ಲೇ ಚರಂಡಿ ಇದ್ದು ರಸ್ತೆ ಕುಸಿದರೆ ದುರಸ್ಥಿ ಕೆಲಸ ಅಷ್ಟು ಸುಲಭದ್ದಲ್ಲ ಎಂದು ಹೇಳಲಾಗುತ್ತಿದೆ.

ನಂದಿನಿ ಲೇಔಟ್‌ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಮಳೆ ನಿಂತ ನಂತರ ದುರಸ್ಥಿ ಕೆಲಸಗಳು ಆರಂಭವಾಗುವ ಸಾಧ್ಯತೆ ಇದೆ.

Comments are closed.