ರಾಷ್ಟ್ರೀಯ

ಕೊರೋನಾ ಕುರಿತು ಭಾರತಕ್ಕೆ ಸಿಹಿ ಸುದ್ದಿ ನೀಡಿದ ಆರೋಗ್ಯ ಸಚಿವಾಲಯ

Pinterest LinkedIn Tumblr


ನವದೆಹಲಿ: ಕರೋನಾ ಸೋಂಕಿನಿಂದ ನೂರಾರು ಸಾವುಗಳ ನಡುವೆ ದೇಶದಲ್ಲಿ ಸೋಂಕಿನ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ. ಇದರೊಂದಿಗೆ, ಹಾಟ್‌ಸ್ಪಾಟ್‌ಗಳು ಮತ್ತು ಕಂಟೋನ್ಮೆಂಟ್ ವಲಯಗಳೂ ಹೆಚ್ಚುತ್ತಿವೆ. ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 23,039 ಕ್ಕೆ ಏರಿದೆ. ಚಿಕಿತ್ಸೆಯ ಬಳಿಕ 5012 ಜನ ಸಂಪೂರ್ಣವಾಗಿ ಗುಣಮುಖರಾಗಿದ್ದರೆ ದೇಶದಲ್ಲಿ ಕರೋನಾ ಸೋಂಕಿನಿಂದ 721 ಜನರ ಪ್ರಾಣ ಕಳೆದುಕೊಂಡಿದ್ದಾರೆ.

ನಿಟ್ಟುಸಿರು ಬಿಡುವ ಸುದ್ದಿ ಕೊಟ್ಟ ಆರೋಗ್ಯ ಸಚಿವಾಲಯ

ಕಳೆದ 24 ಗಂಟೆಗಳಲ್ಲಿ, ದೇಶದಲ್ಲಿ 1500 ಕ್ಕೂ ಹೆಚ್ಚು ಹೊಸ ಕರೋನಾ ಸೋಂಕಿನ ಪ್ರಕರಣಗಳು ದಾಖಲಾಗಿದ್ದು 40 ಜನರು ಸಾವನ್ನಪ್ಪಿದ್ದಾರು. ಭಾರತದ ಆರೋಗ್ಯ ಸಚಿವಾಲಯವು ದಿನರಾತ್ರಿ ಬರುತ್ತಿರುವ ಕೆಟ್ಟ ಸುದ್ದಿಗಳ ಮಧ್ಯೆ ನಿಟ್ಟುಸಿರು ಬಿಡುವ ಸುದ್ದಿ ಕೊಟ್ಟಿದೆ.

ಸಚಿವಾಲಯದ ಪ್ರಕಾರ, ಕರೋನಾ ಸೋಂಕಿನಿಂದ ಚೇತರಿಸಿಕೊಳ್ಳುವ ಜನರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ. ಕಳೆದ 7 ದಿನಗಳಲ್ಲಿ, ಕರೋನಾ ವೈರಸ್ ಸೋಂಕಿನ ವೇಗವು ದ್ವಿಗುಣಗೊಳ್ಳುವುದರಲ್ಲಿ ಕಡಿಮೆಯಾಗಿದೆ. ಈಗ ಸೋಂಕು ಸುಮಾರು 3 ದಿನಗಳ ಬದಲು 7 ದಿನಗಳಲ್ಲಿ ದ್ವಿಗುಣಗೊಳ್ಳುತ್ತಿದೆ.

ಗೋವಾ ಬಳಿಕ ಮಣಿಪುರದಿಂದ ಬಂದ ಖುಷಿ ಸುದ್ದಿ

ಕರೋನಾದ ಬಗ್ಗೆ ಇದುವರೆಗೆ ಗೋವಾದ ಬಳಿಕ ಈ ರಾಜ್ಯದಿಂದ ಖುಷಿ ಸುದ್ದು ಬಂದಿದೆ. ಗೋವಾದ ಬಳಿಕ ಮಣಿಪುರ ಕೂಡ ಕರೋನಾ ಮುಕ್ತ ರಾಜ್ಯವಾಗಿದೆ. ಅಂದರೆ, ಮಣಿಪುರ ರಾಜ್ಯದಲ್ಲಿ ಈಗ ಯಾವುದೇ ವ್ಯಕ್ತಿಯೂ ಕರೋನಾ ವೈರಸ್ ಸೋಂಕಿಗೆ ಒಳಗಾಗುವುದಿಲ್ಲ ಹಾಗು ಸೋಂಕಿಗೆ ಒಳಗಾದವರೂ ಗುಣಮುಖರಾಗಿದ್ದಾರೆ.

ಮಣಿಪುರದ ಮುಖ್ಯಮಂತ್ರಿ ಎನ್ ಬಿರೆನ್ ಸಿಂಗ್ ಅವರು “ಮಣಿಪುರ ಈಗ ಕರೋನಾ ಮುಕ್ತವಾಗಿದೆ ಎಂಬ ಸುದ್ದಿ ಹಂಚಿಕೊಳ್ಳಲು ನನಗೆ ಸಂತೋಷವಾಗಿದೆ. ಇಬ್ಬರೂ ರೋಗಿಗಳು ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ ಮತ್ತು ಈಗ ಅವರ ರಿಪೋರ್ಟ್ ನೆಗೆಟಿವ್ ಅಂತ ಬಂದಿದೆ. ರಾಜ್ಯದಲ್ಲಿ ಯಾವುದೇ ಹೊಸ ಕರೋನಾ ಪ್ರಕರಣ ಇಲ್ಲ” ಎಂದು ಟ್ವೀಟ್ ಮಾಡಿದ್ದಾರೆ.

ಆದರೆ ಇಂದೋರ್, ಮುಂಬೈ, ಪುಣೆ, ಜೈಪುರ ಮತ್ತು ಕೋಲ್ಕತ್ತಾದಂತಹ ನಗರಗಳಲ್ಲಿ ಕರೋನಾ ಸೋಂಕಿನ ಸ್ಥಿತಿ ಹೆಚ್ಚುತ್ತಿರುವ ಬಗ್ಗೆ ಗೃಹ ಸಚಿವಾಲಯ ಕಳವಳ ವ್ಯಕ್ತಪಡಿಸಿದೆ. ಆದರೆ, ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ದೇಶದ 80 ಪ್ರತಿಶತದಷ್ಟು ಕರೋನಾ ವೈರಸ್ ರೋಗಿಗಳಲ್ಲಿ ವೈರಸ್‌‌ನ ಸಾಮಾನ್ಯ ಲಕ್ಷಣಗಳು ಮಾತ್ರ ಇವೆ ಎಂದು ಹೇಳಿದೆ‌.

ಲಾಕ್‌ಡೌನ್ ಉಲ್ಲಂಘಿಸಿದರೆ ಕಠಿಣ ಕ್ರಮ

ಲಾಕ್‌ಡೌನ್ ಉಲ್ಲಂಘನೆ ಕುರಿತು ಕಠಿಣ ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವಾಲಯ ಹೇಳಿದೆ. ಲಾಕ್‌ಡೌನ್ ಪರಿಸ್ಥಿತಿಯನ್ನು ನಾವು ಮೇಲ್ವಿಚಾರಣೆ ಮಾಡುತ್ತಿದ್ದೇವೆ ಎಂದು ಗೃಹ ಸಚಿವಾಲಯದ ವಕ್ತಾರರು ಹೇಳಿದ್ದಾರೆ. ಲಾಕ್ ಡೌನ್ ಬಗ್ಗೆ ರಾಜ್ಯ ಸರ್ಕಾರಗಳು ನೀಡಿದ ಮಾರ್ಗಸೂಚಿಗಳನ್ನು ದುರ್ಬಲಗೊಳಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

“ಈ ಬಗ್ಗೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆಯಲಾಗಿದೆ. ಗೃಹ ಸಚಿವಾಲಯವು ಕೇರಳ ಸರ್ಕಾರದ ಮಾರ್ಗಸೂಚಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿದೆ ಮತ್ತು ಇದು ಜನರ ಆರೋಗ್ಯದ ಮೇಲೆ ಗಂಭೀರ ಪ್ರಭಾವ ಬೀರುತ್ತದೆ” ಎಂದು ಗೃಹ ಸಚಿವಾಲಯದ ವಕ್ತಾರ ಪುಣ್ಯ ಸಲೀಲಾ ಶ್ರೀವಾಸ್ತವ ಹೇಳಿದ್ದಾರೆ.

Comments are closed.