ತುಮಕೂರು:ಗುಜರಾತ್ ರಾಜ್ಯದ ಸೂರತ್ನಿಂದ ತುಮಕೂರಿಗೆ ಬಂದಿದ್ದ 37 ವರ್ಷದ ಮೌಲ್ವಿಗೆ ಕೋವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿದೆ. ಇವರ ಜೊತೆಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ 13 ಮಂದಿಯನ್ನು ಪತ್ತೆ ಹಚ್ಚಲಾಗಿದ್ದು,ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಯನ್ನು ಕ್ವಾರೆಂಟೈನ್ ನಲ್ಲಿಡಲಾಗಿದೆ.
ಕೋವಿಡ್-19ನಿಂದ 65 ವರ್ಷದ ವ್ಯಕ್ತಿಯೊಬ್ಬರು ಜಿಲ್ಲೆಯಲ್ಲಿ ಈಗಾಗಲೇ ಮೃತಪಟ್ಟಿದ್ದು, ಮೃತನ 13 ವರ್ಷದ ಮಗ ಸೋಂಕಿನಿಂದ ಚೇತರಿಸಿಕೊಂಡಿದ್ದಾನೆ.
ಹೊರ ರಾಜ್ಯಗಳಿಂದ ಬಂದವರನ್ನು ಯಾದೃಚ್ಚಿಕವಾಗಿ ಪರೀಕ್ಷೆಗೊಳಪಡಿಸಿದಾಗ ಧರ್ಮಗುರುವಿಗೆ ಕೋವಿಡ್- ಸೋಂಕು ಇರುವುದು ಪತ್ತೆಯಾಗಿದೆ.ಅವರಿಗೆ ಹೇಗೆ ವೈರಸ್ ತಗುಲಿತು ಎಂಬುದರ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್ ಕುಮಾರ್ ಸುದ್ದಿಗಾರರಿಗೆ ತಿಳಿಸಿದರು.
ಪಾಸಿಟಿವ್ ವರದಿ ಬರುತ್ತಿದ್ದಂತೆ ಕಾಲೋನಿಯನ್ನು ಜಿಲ್ಲಾಡಳಿತ ಬಂದ್ ಮಾಡಿದ್ದು, ಕಂಟೈನ್ ಮೆಂಟ್ ಜೂನ್ ಆಗಿ ಪರಿವರ್ತಿಸಿದೆ. ಧರ್ಮಗುರು ಇಲ್ಲಿನ ನಿರ್ಮ ಮಸೀದಿಯಲ್ಲಿ ವಾಸ್ತವ್ಯ ಹೂಡಿದ್ದ ಎನ್ನಲಾಗಿದೆ.
ಸಿರಾದ ಬೇಗಂ ಮೊಹಲ್ಲಾದ ವಾರ್ಡ್ ನಂಬರ್ 10ರ ನಂತರ ಇದೀಗ ತುಮಕೂರು ಮಹಾನಗರ ಪಾಲಿಕೆ ಜಿಲ್ಲೆಯಲ್ಲಿ ಎರಡನೇ ಕಂಟೈನ್ ಮೆಂಟ್ ಜೂನ್ ಆಗಿ ಪರಿವರ್ತಿಸಿದ್ದು, ಇಲ್ಲಿನ ಸ್ಥಳೀಯರಿಗೆ ಅತ್ಯಾವಶ್ಯಕ ವಸ್ತುಗಳನ್ನು ಪೂರೈಕೆಯನ್ನು ಪಾಲಿಕೆ ಆಯುಕ್ತ ಡಾ. ಟಿ. ಭೂಬಾಲನ್ ನೋಡಿಕೊಳ್ಳಲಿದ್ದಾರೆ.
14 ಸದಸ್ಯರನ್ನೊಳಗೊಂಡ ಮಾರ್ಚ್ 12 ರಂದು ಸೂರತ್ ನಿಂದ ತುಮಕೂರಿಗೆ ಆಗಮಿಸಿದ್ದರು. ಆದರೆ, ಮಾರ್ಚ್ 24 ರಂದು ದೇಶಾದ್ಯಂತ ಲಾಕ್ ಡೌನ್ ಜಾರಿಯಾದ ಹಿನ್ನೆಲೆಯಲ್ಲಿ ಸೂರತ್ ಗೆ ವಾಪಸ್ ಹೋಗಲು ಸಾಧ್ಯವಾಗಿರಲಿಲ್ಲ.
Comments are closed.