ಬೆಂಗಳೂರು: ದೇಶದ ವಿವಿಧ ವ್ಯಾಪಾರ ಹಾಗೂ ವಹಿವಾಟುಗಳ ಮೇಲೆ ಪರಿಣಾ ಬೀರಿರುವ ಕೊರೋನಾ ವೈರಸ್, ಚಿನ್ನದ ಮೇಲೆ ಗಂಭೀರ ಪರಿಣಾಮ ಬೀರತೊಡಗಿದ್ದು, ಶೀಘ್ರದಲ್ಲೇ ಪ್ರತೀ ಗ್ರಾಂ ಚಿನ್ನ ರೂ.5,000 ತಲುಪಲಿದೆ ಎಂದು ಹೇಳಲಾಗುತ್ತಿದೆ.
ಕರ್ನಾಟಕದಾದ್ಯಂತ 25,500ರಷ್ಟು ಚಿನ್ನದ ಮಳಿಗೆಗಳಿದ್ದು, ಇದರಲ್ಲಿ ಬೆಂಗಳೂರಿನಲ್ಲಿರುವ 8,500 ಮಳಿಗೆಗಳು ಲಾಕ್’ಡೌನ್ ಪರಿಣಾಮ ಮುಚ್ಚಲ್ಪಟ್ಟಿವೆ. ಈ ಅಂಗಡಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ 5ಲಕ್ಷ ಕೆಲಸಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಏಪ್ರಿಲ್ 21ರಂದು ಚಿನ್ನದ ಪ್ರತೀ ಗ್ರಾಂ ಬೆಲೆ ರೂ.4,800 ತಲುಪಿದ್ದು, ಇನ್ನು ಕೆಲವೇ ದಿನಗಳಲ್ಲಿ ಈ ದರ ರೂ.5,000ಕ್ಕೆ ಏರಿಕೆಯಾಗಲಿದ ಎಂದು ಹೇಳಲಾಗುತ್ತಿದೆ. ಈ ಕುರಿತು ಕರ್ನಾಟಕ ಆಭರಣ ಸಂಘದ ಅಧ್ಯಕ್ಷ ಟಿಎ ಶರವಣ ಮಾತನಾಡಿ, ಸ್ಟಾಕ್ ಮಾರುಕಟ್ಟೆ ಹಾಗೂ ಚಿನ್ನದ ಮೇಲಿನ ಬಡ್ಡಿ ದರ ಕೊರೋನಾ ವೈರಸ್ ಪರಿಣಾಮ ಏರಿಕೆಯಾಗಿದೆ. ಇನ್ನು ಕೆಲ ದಿನಗಳ ಕಾಲ ಇದೇ ರೀತಿಯ ಪರಿಸ್ಥಿತಿ ಮುಂದುವರೆಯಲಿದೆ. ಇನ್ನು ಕೆಲವೇ ವಾರಗಳಲ್ಲಿ ಈ ದರ ರೂ.5,000 ತಲುಪಲಿದೆ ಎಂದು ಹೇಳಿದ್ದಾರೆ.
ಇನ್ನು ಅಕ್ಷಯ ತೃತೀಯ ಹತ್ತಿರ ಬರುತ್ತಿದ್ದು, ಚಿನ್ನದ ದರ ಮತ್ತಷ್ಟು ಏರಿಕೆಯಾಗಲಿದೆ. ರಾಜ್ಯದ ವಿವಿಧ ಭಾಗಗಳಲ್ಲಿರುವ ಜನರು ಪ್ರಮುಖವಾಗಿ ಹಳೇ ಮೈಸೂರಿನ ಜನತೆ ಹೆಚ್ಚು ಸಂಖ್ಯೆಯಲ್ಲಿ ಚಿನ್ನ ಖರೀದಿ ಮಾಡುತ್ತದೆ. ಅಕ್ಷಯ ತೃತೀಯ ದಿನ ಏನೇ ಮಾಡಿದರೂ, ಅದು ಏಳಿಗೆಯಾಗಲಿಗೆ ಎಂಬ ನಂಬಿಕೆ ಜನರಲ್ಲಿದೆ ಎಂದು ತಿಳಿಸಿದ್ದಾರೆ.
ಅಂಗಡಿಗಳೂ ಬಂದ್ ಆಗಿದ್ದರೂ, ಅಕ್ಷಯ ತೃತೀಯ ದಿನ ಚಿನ್ನ ಖರೀದಿ ಮಾಡಲು ಜನರು ಇಚ್ಛಿಸುತ್ತಿದ್ದಾರೆ. ಈಗಾಗಲೇ ಆನ್’ಲೈನ್ ಮೂಲಕ ಗೋಲ್ಡ್ ಕಾಯಿನ್ ಗಳನ್ನು ಬುಕ್ ಮಾಡುತ್ತಿದ್ದಾರೆ. ಏಪ್ರಿಲ್ 26 ರಂದು ಬಿಲ್ ಮಾಡುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಲಾಕ್’ಡೌನ್ ಮುಗಿದ ಬಲಿಕ ನಾವು ಚಿನ್ನವನ್ನು ಜನರಿಗೆ ತಲುಪಿಸುತ್ತೇವೆ. ಅಂಗಡಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದವರಿಗೆ ಅಗತ್ಯ ವಸ್ತುಗಳನ್ನು ಅವರ ಮನೆಬಾಗಿಲಿಗೆ ತಲುಪಿಸಲಾಗುತ್ತಿದೆ ಎಂದಿದ್ದಾರೆ.
ಲಕ್ಷ್ಮಿ ಗೋಲ್ಡ್ ಪ್ಯಾಲೆಸ್ ಮುಖ್ಯಸ್ಥ ನಂಜುಂಡಿ ಮಾತನಾಡಿ, ಈ ಬಾರಿಯ ಅಕ್ಷಯ ತೃತೀಯ ದಿನ ಸೇ.80ರಷ್ಟು ವ್ಯಾಪಾರ ಕಡಿಮೆಯಾಗಿದೆ. ಪರಿಸ್ಥಿತಿ ಕೆಟ್ಟದಾಗಿದ್ದು, ಜನರು ಚಿನ್ನಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿಲ್ಲ. ಇನ್ನೂ 6 ತಿಂಗಳುಗಳ ಕಾಲ ಮುಂದಿನ 6 ತಿಂಗಳು ಚಿನ್ನಕ್ಕೆಂದು ಜನರು ಹೊರಗೆ ಬರುವುದಿಲ್ಲ. ಇನ್ನು ಮುಂದಿನ ದಿನಗಳಲ್ಲಿ ಚಿನ್ನ ಪ್ರತಿ ಗ್ರಾಂಗೆ ರೂ.5,000 ತಲುಪುವ ಸಾಧ್ಯತೆಗಳಿವೆ. ಲಾಕ್’ಡೌನ್ ಇಲ್ಲದೇ ಹೋಗಿದ್ದರೆ, ಚಿನ್ನದ ಸೀಸನ್ ಆರಂಭವಾಗುತ್ತಿತ್ತು. ಅಕ್ಷಯ ತೃತೀಯ ಹಾಗೂ ವೆಡ್ಡಿಂಗ್ ಸೀಸನ್ ಆರಂಭವಾಗುತ್ತಿದೆ ಎಂದು ಹೇಳಿದ್ದಾರೆ.
Comments are closed.