ಕರ್ನಾಟಕ

ರಾಜ್ಯದಲ್ಲಿ ಲಾಕ್​ಡೌನ್​​​ ಸಡಿಲಿಕೆಯಿಂದ ಯಾವ ಕ್ಷೇತ್ರಗಳಿಗೆ ವಿನಾಯಿತಿ ಗೊತ್ತಾ?

Pinterest LinkedIn Tumblr


ಬೆಂಗಳೂರು(ಏ.22): ವ್ಯಾಪಕವಾಗಿ ಹರಡುತ್ತಿರುವ ಮಾರಕ ಕೊರೋನಾ ವೈರಸ್​ ನಿಯಂತ್ರಿಸುವ ಸಲುವಾಗಿ ಕೇಂದ್ರ ಸರ್ಕಾರ ದೇಶಾದ್ಯಂತ ಮೇ 3ರವರೆಗೂ ಲಾಕ್​ಡೌನ್​​ ವಿಸ್ತರಿಸಿ ಆದೇಶಿಸಿದೆ. ಇದರ ನಡುವೇ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವೂ ಕೊರೋನಾ ತೀವ್ರತೆ ಕಡಿಮೆಯಾಗುತ್ತಿರುವ ಕಾರಣ ರಾಜ್ಯದ ಕೆಲವು ಭಾಗಗಳಲ್ಲಿ ಇಂದು ಮಧ್ಯ ರಾತ್ರಿಯಿಂದಲೇ ಲಾಕ್‌ ಡೌನ್‌ ನಿಯಮದಲ್ಲಿ ಸಡಿಲಿಕೆ ಮಾಡಿ ಆದೇಶಿಸಿದೆ.

ರಾಜ್ಯದಲ್ಲಿ ಅತೀ ಹೆಚ್ಚು ಕೋವಿಡ್​​-19 ಪಾಸಿಟಿವ್​​ ಪ್ರಕರಣಗಳು ಕಾಣಸಿಕೊಂಡಿರು ಕಂಟೈನ್ಮೆಂಟ್‌ ಝೋನ್‌ ಹೊರತುಪಡಿಸಿ ಉಳಿದ ಭಾಗಗಳಲ್ಲಿ ಲಾಕ್​​ಡೌನ್ ನಿರ್ಬಂಧ‌ ಸಡಿಲಗೊಳಸಲಾಗಿದೆ. ಡಾಬಾ, ಕಟ್ಟಡ ನಿರ್ಮಾಣ ಕಾಮಗಾಗಿ, ಕೊರಿಯರ್‌ ಸೇವೆ, ಲಾರಿ ರಿಪೇರಿ ಮಾಡುವ ಗ್ಯಾರೇಜ್ ಸೇರಿದಂತೆ‌ ಕೆಲವೊಂದು ಅಗತ್ಯ ಸೇವೆಗಳಿಗೆ ಲಾಕ್​​ಡೌನ್‌ ಮಾಡಲಾಗಿದೆ. ಮಾಲ್‌, ಚಿತ್ರಮಂದಿರ, ಆಟೋ, ವಿಮಾನ, ರೈಲು ಸಂಚಾರ, ಕ್ಯಾಬ್‌ ಮೊದಲಾದ ಸೇವೆಗಳಿಗೆ ಇರುವ ನಿರ್ಬಂಧ ಎಂದಿನಂತೆಯೇ ಮುಂದುವರೆಯಲಿದೆ.

ಹೀಗಿದೆ ಲಾಕ್​ಡೌನ್​​​ ಸಡಿಲಿಕೆಯಿಂದ ಯಾವ ಕ್ಷೇತ್ರಗಳಿಗೆ ವಿನಾಯಿತಿ ಎಂಬ ಸಂಪೂರ್ಣ ಮಾಹಿತಿ…

ಪೇಪರ್, ರಸಗೊಬ್ಬರ, ಎಪಿಎಂಸಿ ಮಾರ್ಕೆಟ್ ಸಂಪೂರ್ಣ ಓಪನ್
ಅಂತರ​ರಾಜ್ಯ ವಾಹನ ಓಡಾಡಕ್ಕೆ ಅವಕಾಶ
ಕೃಷಿ ಮತ್ತು ಮೀನುಗಾರಿಕೆ ವಲಯಕ್ಕೆ ಸಂಪೂರ್ಣ ಅನುಮತಿ
ಕಂಟೋನ್ಮೆಂಟ್ ಜೋನ್​​ಗೆ ಯಾವುದೇ ಅನುಮತಿ ಇಲ್ಲ
ಕೃಷಿ ನೀರಾವರಿಗೆ ಯಾವುದೇ ನಿರ್ಬಂಧ ಇಲ್ಲ
ಕಟ್ಟಡ ನಿರ್ಮಾಣಕ್ಕೆ ಅನುಮತಿ
ಕಟ್ಟಡ ಕಾಮಾಗರಿಗಳಿಗೆ ಅನುಮತಿ
ಟೀ ಕಾಫಿ ಪ್ಲಾಂಟೇಷನ್​​ಗೆ ಅನುಮತಿ
ಪಾಸ್ ಇದ್ದವರಿಗಷ್ಟೇ ಸಂಚಾರಕ್ಕೆ ಅನುಮತಿ
ಗ್ರಾಮೀಣ ಪ್ರದೇಶದಲ್ಲಿ ರಸ್ತೆಗೆ ಕಾಮಗಾರಿಗೆ ಅವಕಾಶ
ಪಶುಸಂಗೋಪನೆಗೆ ಅವಕಾಶ
ಬ್ಯಾಂಕುಗಳ ನಿರ್ವಹಣೆಗೆ ಮುಂದುವರಿಕೆ
ಹೋಟೆಲ್​ಗಳಲ್ಲಿ ಪಾರ್ಸೆಲ್ ಸೇವೆಗಳಿಗೆ ಅವಕಾಶ
ಮೆಟ್ರೋ ರೈಲು ಸಂಚಾರಕ್ಕೆ ಅವಕಾಶ ಇಲ್ಲ
ಶಾಪಿಂಗ್ ಮಾಲ್, ಸಿನಿಮಾ ಥಿಯೇಟರ್ ತೆರೆಯುವುದಿಲ್ಲ
ಸದ್ಯಕ್ಕೆ ಶಾಲಾ ಕಾಲೇಜು ತೆರೆಯುವಂತಿಲ್ಲ
ಟ್ಯಾಕ್ಸಿ ಆಟೋ ಬಸ್ ಸಂಚಾರ ಬಂದ್
ಕೋರಿಯಾರ್ ಸೇವೆಗೆ ಅನುಮತಿ
ವಾಣಿಜ್ಯ ಮತ್ತು ಕೈಗಾರಿಕೆಗೆ ಇಲ್ಲ ಅವಕಾಶ

Comments are closed.