ಕರ್ನಾಟಕ

ಜೂಮ್ ಆ್ಯಪ್ ಬಳಕೆ ತ್ಯಜಿಸಿದ ಕರ್ನಾಟಕ ಸರ್ಕಾರ

Pinterest LinkedIn Tumblr

ಬೆಂಗಳೂರು: ಸೋಮವಾರದಿಂದ ಕೋವಿಡ್ -19 ಲಾಕ್‌ಡೌನ್ ನಡುವೆ ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತನ್ನ ದೈನಂದಿನ ವಿಡಿಯೋ ಪತ್ರಿಕಾಗೋಷ್ಠಿಗಾಗಿ ಬಳಸುತ್ತಿದ್ದ ಜೂಮ್ ಆ್ಯಪ್ ಅನ್ನು ತ್ಯಜಿಸಿದೆ ಮತ್ತು ಇನ್ನು ಮುಂದೆ ಸಿಸ್ಕೋ ವೆಬೆಕ್ಸ್‌ ಬಳಸಲಾಗುವುದು ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.

“ನಾವು ಸೋಮವಾರದಿಂದ ಕೋವಿಡ್‌-19ರ ಬಗ್ಗೆ ಮಾಹಿತಿ ನೀಡಲು ಸುದ್ದಿಗೋಷ್ಠಿಯಲ್ಲಿ ಇನ್ನು ಮುಂದೆ ಜೂಮ್ ಅಪ್ಲಿಕೇಶನ್ ಅನ್ನು ಬಳಸುವುದಿಲ್ಲ. ಇದರ ಬದಲು ನಾವು ಸಿಸ್ಕೋ ವೆಬೆಕ್ಸ್ ಅನ್ನು ಬಳಸುತ್ತೇವೆ” ಎಂದು ಪ್ರತಿದಿನ ಪತ್ರಕರ್ತರೊಂದಿಗೆ ಕೋವಿಡ್‌ ಮಾಹಿತಿಯನ್ನು ಹಂಚಿಕೊಳ್ಳುವ ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜೂಮ್‌ ಅಪ್ಲಿಕೇಶನ್ ಬಳಸುವುದು ಸುರಕ್ಷಿತವಲ್ಲ ಎಂದು ಇತ್ತೀಚಿಗೆ ಕೇಂದ್ರ ಸರ್ಕಾರ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಜೂಮ್‌ ಆ್ಯಪ್ ಅನ್ನು ಬಳಸುವುದನ್ನು ನಿಲ್ಲಿಸಿದೆ. ಜಾಗತಿಕ ಸಾಫ್ಟ್‌ವೇರ್ ಕಂಪನಿ ಇನ್ಫೋಸಿಸ್ ಸೋಮವಾರ ತನ್ನ ವರ್ಚುವಲ್ ಕ್ಯೂ 4 ಹಣಕಾಸು ಫಲಿತಾಂಶಗಳ ಪತ್ರಿಕಾಗೋಷ್ಠಿಯನ್ನು ನಡೆಸಲು ವೆಬೆಕ್ಸ್ ಅನ್ನು ನಿಯೋಜಿಸಿತು.

ಇದರ ನಡುವೆ ಜಿ-ಸೂಟ್‌ನ ಭಾಗವಾಗಿರುವ ಗೂಗಲ್ ಮೀಟ್, ಕೋವಿಡ್ ಲಾಕ್‌ಡೌನ್ ಮಧ್ಯೆ ಪ್ರತಿದಿನ 2 ಮಿಲಿಯನ್‌ಗಿಂತಲೂ ಹೆಚ್ಚು ಹೊಸ ಬಳಕೆದಾರರನ್ನು ಹೊಂದುತ್ತಿದೆ ಹಾಗೂ ಲಕ್ಷಾಂತರ ಜನರು ಮನೆಯಿಂದ ಕೆಲಸ ಮಾಡಲು ಸಹಾಯವಾಗುತ್ತಿದೆ.

“ಬಳಕೆದಾರರ ಮಾಹಿತಿಯನ್ನು ರಕ್ಷಿಸಲು ಮತ್ತು ಗೌಪ್ಯತೆಯನ್ನು ಕಾಪಾಡಲು ಗೂಗಲ್ ಕ್ಲೌಡ್ಸ್‌ ಸುರಕ್ಷಿತ-ವಿನ್ಯಾಸದ ಮೂಲಸೌಕರ್ಯದಲ್ಲಿ ಗೂಗಲ್ ಮೀಟ್ ಅನ್ನು ನಿರ್ಮಿಸಲಾಗಿದೆ, “ಎಂದು ಏಷ್ಯಾ ಪೆಸಿಫಿಕ್‌ನ ಗೂಗಲ್ ಕ್ಲೌಡ್ಸ್‌, ಏಷ್ಯಾ ಫೆಸಿಫಿಕ್, ಭದ್ರತೆಯ ಮುಖ್ಯಸ್ಥ ಮಾರ್ಕ್ ಜಾನ್‌ಸ್ಟನ್ ಹೇಳಿದ್ದಾರೆ.

Comments are closed.