ಅಂತರಾಷ್ಟ್ರೀಯ

ಏಡ್ಸ್‌ ಮೊದಲು ಕಂಡಿದ್ದು ಎಲ್ಲಿ..? ಅಮೆರಿಕಕ್ಕೆ ಚೀನಾ ತಿರುಗೇಟು..!

Pinterest LinkedIn Tumblr


ಬೀಜಿಂಗ್‌: ಕೊರೊನಾ ವೈರಸ್‌ ವಿಚಾರವಾಗಿ ಚೀನಾದ ಮೇಲೆ ಮೂಗು ಮುರಿಯುತ್ತಿರುವ ಅಮೆರಿಕದ ಮೇಲೆ ಡ್ರ್ಯಾಗನ್‌ ರಾಷ್ಟ್ರ ದೊಡ್ಡ ತಿರುಗೇಟು ನೀಡಿದೆ. ಅಮೆರಿಕದಿಂದ ಜಗತ್ತಿಗೆ ಪರಿಚಯಿಸಲ್ಪಟ್ಟ ರೋಗಗಳು ಹಾಗೂ ಆರ್ಥಿಕ ಬಿಕ್ಕಟ್ಟಿನಿಂದ ಉಂಟಾದ ಸಮಸ್ಯೆಯನ್ನು ಚೀನಾ ಜಗತ್ತಿನ ಮುಂದಿಟ್ಟಿದ್ದು, ಅಮೆರಿಕದ ಬಾಯಿ ಮುಚ್ಚಿಸುವ ಪ್ರಯತ್ನ ಮಾಡುತ್ತಿದೆ.

ಕೊರೊನಾ ವೈರಸ್‌ ವಿಚಾರವಾಗಿ ನಮ್ಮ ಮೇಲೆ ಇಲ್ಲಸಲ್ಲದ ಆರೋಪವನ್ನು ಅಮೆರಿಕ ಮಾಡುತ್ತಿದೆ. ಎಚ್‌1ಎನ್‌1 ಮೊದಲು ಎಲ್ಲಿ ಹುಟ್ಟಿದ್ದು..? ಏಡ್ಸ್‌ ಮೊದಲೆಲ್ಲಿ ಕಂಡುಬಂತು..? 2008ರ ಆರ್ಥಿಕ ಬಿಕ್ಕಟ್ಟಿಗೆ ಕಾರಣ ಯಾರು..? ಎಂದು ಅಮೆರಿಕಕ್ಕೆ ಪ್ರಶ್ನೆಗಳನ್ನು ಚೀನಾದ ವಿದೇಶಾಂಗ ಸಚಿವಾಲಯ ಸೋಮವಾರ ವಿಶ್ವವನ್ನು ಕೇಳಿದೆ.

2009ರಲ್ಲಿ ಎಚ್‌1ಎನ್‌1 ರೋಗ ಮೊದಲು ಕಂಡು ಬಂದಿದ್ದು ಅಮೆರಿಕದಲ್ಲಿ, ನಂತರ 214 ದೇಶಗಳಿಗೆ ಹಬ್ಬಿ, 2 ಲಕ್ಷಕ್ಕೂ ಅಧಿಕ ಮಂದಿಯನ್ನು ಬಲಿ ಪಡೆದಿದೆ. ಆ ಸಂದರ್ಭದಲ್ಲಿ ಯಾರಾದರೂ ಅಮೆರಿಕಕ್ಕೆ ಪರಿಹಾರ ನೀಡುವಂತೆ ಒತ್ತಾಯ ಕೇಳಿಬಂತಾ..? ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಗೆಂಗ್‌ ಶುಹಾಂಗ್‌ ಹೇಳಿದ್ದಾರೆ.

ಇನ್ನು, ವಿಶ್ವ ಕಂಡ ಅತ್ಯಂತ ಭೀಕರ ರೋಗ ಏಡ್ಸ್‌ 1980ರ ದಶಕದಲ್ಲಿ ಮೊದಲು ಕಂಡುಬಂದಿದ್ದು ಅಮೆರಿಕದಲ್ಲಿ ನಂತರ ಅದು ವಿಶ್ವ ಪೂರ್ತಿ ವ್ಯಾಪಿಸಿ ಜಾಗತಿಕ ಸಮಸ್ಯೆಯಾಗಿದೆ. ಆಗ ಯಾರಾದ್ರೂ ಅಮೆರಿಕವನ್ನು ಜವಾಬ್ದಾರಿ ಮಾಡಿದ್ರಾ..? ಎಂದು ಅವರು ಜಗತ್ತಿನ ಮುಂದೆ ಪ್ರಶ್ನೆಯನ್ನು ಇಟ್ಟಿದ್ದಾರೆ.

ಇದರ ಜೊತೆ, ಅಮೆರಿಕದಲ್ಲಿದ್ದ ಲೇಹಮನ್‌ ಬ್ರದರ್ಸ್‌ ಅಂತ್ಯದಿಂದ 2008ರಲ್ಲಿ ಜಾಗತಿಕ ಬಿಕ್ಕಟ್ಟು ಸೃಷ್ಟಿಯಾಯಿತು. ಆಗ ಯಾರು ಸಹ ಸಮಸ್ಯೆ ಪರಿಹರಿಸುವಂತೆ ಅಮೆರಿಕವನ್ನು ಕೇಳಲಿಲ್ಲ ಎಂದು ಸಿಂಗಪೂರದ ರಾಷ್ಟ್ರೀಯ ವಿಶ್ವವಿದ್ಯಾಲಯದ ಪ್ರೊಪೆಸರ್‌ ಕಿಶೋರ್‌ ಮಹಬುಬಾನಿ ಹೇಳಿದರು. ಇದರೊಂದಿಗೆ ಅಮೆರಿಕದ ಆರೋಪಗಳಿಗೆ ಚೀನಾ ಜಾಣ್ಮೆಯಿಂದ ಉತ್ತರಿಸುವ ಪ್ರಯತ್ನ ಮಾಡಿದೆ. ವಿಶ್ವ ಆರೋಗ್ಯ ಸಂಸ್ಥೆಯು ಕೂಡ ಕೊರೊನಾ ವೈರಸ್‌ ಪ್ರಾಣಿಗಳಿಂದ ಬಂದಿದ್ದು, ಯಾವುದೇ ಲ್ಯಾಬ್‌ನಲ್ಲಿ ಸೃಷ್ಟಿಯಾಗಿಲ್ಲ ಎಂದು ಸ್ಪಷ್ಟನೆ ನೀಡಿದೆ.

Comments are closed.