ಅಂತರಾಷ್ಟ್ರೀಯ

ಶಸ್ತ್ರಚಿಕಿತ್ಸೆ ನಂತರ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಆರೋಗ್ಯ ಸ್ಥಿತಿ ಗಂಭೀರ?

Pinterest LinkedIn Tumblr


ವಾಷಿಂಗ್ಟನ್ (ಏ.21)​: ಶಸ್ತ್ರಚಿಕಿತ್ಸೆ ಬಳಿಕ ಉತ್ತರ ಕೊರಿಯಾ ಅಧ್ಯಕ್ಷ ಕಿಮ್​ ಜಾಂಗ್​ ಉನ್​ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಅಮೆರಿಕ ಗುಪ್ತಚರ ಇಲಾಖೆ ಮೂಲಗಳು ಹೇಳಿವೆ.

ಕಿಮ್ II ಸಂಗ್​ ಉತ್ತರ ಕೊರಿಯಾ ಪಿತಾಮಹ ಮತ್ತು ಕಿಮ್​ ಜಾಂಗ್​ ಉನ್​ ಅವರ ತಾತ. ಏ.15ರಂದು ಅವರ ಜನ್ಮದಿನ. ಹೀಗಾಗಿ ಇಡೀ ದೇಶಕ್ಕೆ ಸರ್ಕಾರಿ ರಜೆ. ಅಂದು ನಡೆದ ಅಜ್ಜನ ಜನ್ಮದಿನ ಆಚರಣೆಯಲ್ಲಿ ಕಿಮ್​ ಜಾಂಗ್​ ಉನ್​ ಪಾಲ್ಗೊಂಡಿರಲಿಲ್ಲ. ಹೀಗಾಗಿ, ಕಿಮ್​ ಆರೋಗ್ಯದ ಬಗ್ಗೆ ಸಾಕಷ್ಟು ಅನುಮಾನಗಳು ಮೂಡಿವೆ.

ಕಿಮ್​ ಜಾಂಗ್​ ಏ. 11ರಂದು ಸರ್ಕಾರಿ ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಅವರು ಮಾಧ್ಯಮದ ಎದುರು ಬಂದಿದ್ದರು. ನಂತರ ಅವರು ಈ ವರೆಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ.

ಅಂದಹಾಗೆ 2008ರಲ್ಲಿ ಉತ್ತರ ಕೊರಿಯಾ ಅಂದಿನ ಅಧ್ಯಕ್ಷ ಕಿಮ್​ ಜಾಂಗ್​ IIಗೆ ಅವರು ಈ ಕಾರ್ಯಕ್ರಮಕ್ಕೆ ಆಗಮಿಸಿರಲಿಲ್ಲ. ಅವರಿಗೆ ಸ್ಟ್ರೋಕ್ ಉಂಟಾಗಿದೆ ಎಂದು ಅಧಿಕಾರಿಗಳು ನಂತರ ತಿಳಿಸಿದ್ದರು. ದಿನ ಕಳೆದಂತೆ ಅವರ ಆರೋಗ್ಯ ಕ್ಷೀಣಿಸಿತ್ತು. 2011ರಲ್ಲಿ ಕಿಮ್​ ಜಾಂಗ್​ II ಮೃತಪಟ್ಟಿದ್ದರು.

2014ರಲ್ಲಿ ಒಂದು ತಿಂಗಳು ಕಿಮ್​ ಜಾಂಗ್​ ಉನ್​ ಕಾಣೆಯಾಗಿದ್ದರು. ನಂತರ ತಿಳಿದು ಬಂದಿದ್ದೇನೆಂದರೆ ಅವರು ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದರಂತೆ. ಆದರೆ, ಈ ಬಗ್ಗೆ ಯಾರೊಬ್ಬರೂ ಮಾಹಿತಿ ಬಿಟ್ಟುಕೊಟ್ಟಿಲ್ಲ.

ಉತ್ತರ ಕೊರಿಯಾದಿಂದ ಮಾಹಿತಿ ಕಲೆ ಹಾಕುವುದು ಅಮೆರಿಕ ಗುಪ್ತಚರ ಇಲಾಖೆಗೆ ಇರುವ ದೊಡ್ಡ ಸವಾಲು. ಏಕೆಂದರೆ ಇಲ್ಲಿನ ನಾಯಕರನ್ನು ಜನರು ದೇವರಂತೆ ಕಾಣುತ್ತಾರೆ. ಹೀಗಾಗಿ ಜನರು ಹಾಗೂ ಅಧಿಕಾರಿಗಳು ಯಾವುದೆ ಮಾಹಿತಿ ಹೊರ ಹೋಗದಂತೆ ನೋಡಿಕೊಳ್ಳುತ್ತಾರೆ.

Comments are closed.