ಕರ್ನಾಟಕ

ದಾವಣಗೆರೆ ಜಿಲ್ಲೆಯ ವ್ಯಕ್ತಿಗೆ ಕೊರೊನಾ ವೈರಸ್ ಸೋಂಕು: ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 63ಕ್ಕೇ ಏರಿಕೆ

Pinterest LinkedIn Tumblr


ದಾವಣಗೆರೆ: ಜಿಲ್ಲೆಯ ವ್ಯಕ್ತಿಯೋರ್ವನಿಗೆ ಕೋವಿಡ್-19 ಸೋಂಕು ತಗಲಿರುವುದು ದೃಢವಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಜಿ. ಬೀಳಗಿ ತಿಳಿಸಿದ್ದಾರೆ. ಇದರೊಂದಿಗೆ ಇಂದು ರಾಜ್ಯದಲ್ಲಿ ಎಂಟನೇ ಸೋಂಕು ಪತ್ತೆಯಾಗಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 63ಕ್ಕೇರಿದೆ.

ಫ್ರಾನ್ಸ್ ನಿಂದ ಮಾ. 17 ರಿಂದ ಹೊರಟು ಅಬುಧಾಬಿ ಮೂಲಕ ಬೆಂಗಳೂರಿಗೆ ಬಂದಿದ್ದ 24 ಯುವಕ ಮಾರ್ಚ್ 18 ರಂದು ದಾವಣಗೆರೆಗೆ ಆಗಮಿಸಿದ್ದರು. ಮಾರ್ಚ್ 25 ರಂದು ಕೆಮ್ಮು, ‌ಜ್ವರದ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಮಾರ್ಚ್ 26 ರಂದು ಪಾಸಿಟಿವ್ ಎಂದು ದೃಢಪಟ್ಟಿತ್ತು. ಪೂನಾದ ಪ್ರಯೋಗಾಲಯ ಸಹ ಇದನ್ನು ದೃಢಪಡಿಸಿದೆ ಎಂದು ಅವರು ತಿಳಿಸಿದರು.

Comments are closed.