ರಾಷ್ಟ್ರೀಯ

ಚೀನಾ ಕೊರೋನಾ ವೈರಸ್ ಕುರಿತು ವಿಶ್ವದ ಹಾದಿ ತಪ್ಪಿಸಿದ್ದು ಹೇಗೆ?

Pinterest LinkedIn Tumblr


ನವದೆಹಲಿ: ಒಂದು ವೇಳೆ ಚೀನಾ ಮಾರಣಾಂತಿಕ ಕೋವಿಡ್ 19 ಮಹಾಮಾರಿಯನ್ನು ತಡೆಯಲು ಮುಂದಾಗಿದ್ದರೆ ಜಗತ್ತಿನ ಬರೋಬ್ಬರಿ 175 ದೇಶಗಳು ತಲೆಬಾಗಿಸುವ ಪ್ರಸಂಗ ಎದುರಾಗುತ್ತಿರಲಿಲ್ಲ. ಮೊತ್ತ ಮೊದಲು ವೈರಸ್ ಹಬ್ಬಿದಾಗ ಅದಕ್ಕೆ ಮುಂಜಾಗ್ರತಾ ಕ್ರಮ ಆರಂಭದಲ್ಲೇ ತೆಗೆದುಕೊಳ್ಳಬೇಕಾಗಿತ್ತು. ಆದರೆ ಚೀನಾ ಅದಕ್ಕೆ ಬೇಕಾದ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿಲ್ಲ ಎಂದೇ ಆರೋಪಿಸಬೇಕಾಗಿದೆ. ಅಲ್ಲದೇ ವೈರಸ್ ಹಬ್ಬಿದ ನಂತರವೂ ಇತರ ದೇಶಗಳನ್ನು ಕೂಡಾ ಎಚ್ಚರಿಸಿಲ್ಲ ಎಂದು ಜೀ ನ್ಯೂಸ್ ವಿಶ್ಲೇಷಿಸಿದೆ.

ಚೀನಾದ ನಡವಳಿಕೆ ಬಗ್ಗೆ ಜೀ ನ್ಯೂಸ್ ಎಡಿಟರ್ ಇನ್ ಚೀಫ್ ಸುಧೀರ್ ಚೌಧರಿ ಈ ಬಗ್ಗೆ ವಿಶ್ಲೇಷಿಸಿದ್ದು, ಜಾಗತಿಕವಾಗಿ ಫ್ಲೂನಂತಹ ವೈರಸ್ ಗೆ ಐದು ಲಕ್ಷಕ್ಕಿಂತ ಹೆಚ್ಚು ಜನರು ನರಳುವಂತಾಗಿದೆ. ಸಾವಿನ ಪ್ರಮಾಣ 23 ಸಾವಿರಕ್ಕೆ ಏರಿಕೆ ಕಂಡಿದೆ.

ಚೀನಾದ ವುಹಾನ್ ನಲ್ಲಿ 2019ರ ನವೆಂಬರ್ ನಲ್ಲಿ ಇಲ್ಲಿನ ಜನರಿಗೆ ಸೋಂಕು ತಗುಲಿದ ಬಗ್ಗೆ ವರದಿಯಾಗಿತ್ತು. ಆರಂಭದಲ್ಲಿ ಇದೊಂದು ಸಾಮಾನ್ಯ ನ್ಯೂಮೋನಿಯಾ ವೈರಲ್ ಎಂದು ವೈದ್ಯರು ಭಾವಿಸಿದ್ದರು. ನಂತರ ಸಾಧಾರಣ ಔಷಧದಿಂದ ಇದನ್ನು ಗುಣಪಡಿಸಲು
ಸಾಧ್ಯವಾಗಲಿಲ್ಲ. 2019ರ ಡಿಸೆಂಬರ್ ನಲ್ಲಿ ಚೀನಾದಿಂದ ಕೊರಿಯಾ ಮತ್ತು ಥಾಯ್ ಲ್ಯಾಂಡ್ ಗೆ ವೈರಸ್ ಹಬ್ಬಿಬಿಟ್ಟಿತ್ತು!

ವರದಿಯ ಪ್ರಕಾರ ಆರಂಭದಲ್ಲಿ ಮಾರಣಾಂತಿಕ ಸೋಂಕಿನ ಬಗ್ಗೆ ತಿಳಿದ ಚೀನಾ ಈ ಕುರಿತ ಪುರಾವೆಯನ್ನು ನಾಶಮಾಡಲು ಪ್ರಯತ್ನಿಸಿತ್ತು. ಕೆಲವು ವರದಿಗಳ ಪ್ರಕಾರ ಚೀನಾ ವೈದ್ಯರು ಶೀಘ್ರವೇ ಹೊಸ ವೈರಸ್ ಅನ್ನು ಕಂಡುಹಿಡಿದುಬಿಟ್ಟಿದ್ದರು. ನಂತರ ಚೀನಾ ಅಧಿಕಾರಿಗಳು ಪ್ರಯೋಗಾಲಯಗಳನ್ನು ಬಂದ್ ಮಾಡಿ, ವೈರಸ್ ಸ್ಯಾಂಪಲ್ಸ್ ಅನ್ನು ಶಗೊಳಿಸಿಬಿಟ್ಟಿರುವುದಾಗಿ ವಿವರಿಸಿದೆ.

ಅಷ್ಟೇ ಅಲ್ಲ ಮಾರಣಾಂತಿಕ ವೈರಸ್ ಬಗ್ಗೆ ಜನರು ಅಪಾಯದ ಕರೆಗಂಟೆ ಬಾರಿಸಿದ್ದರು. ಈ ಸಂದರ್ಭದಲ್ಲಿ ಚೀನಾ ಅಂತಹ ವ್ಯಕ್ತಿಗಳನ್ನು ಬಂಧಿಸಿತ್ತು ಇಲ್ಲವೇ ಕೆಲವರು ನಿಗೂಢವಾಗಿ ನಾಪತ್ತೆಯಾಗಿದ್ದರು ಎಂದು ವರದಿ ಆರೋಪಿಸಿದೆ. ವುಹಾನ್ ವೈದ್ಯ ಲೀ ವೆನ್ ಲಿಯಾಂಗ್ ಈ ವೈರಸ್ ಬಗ್ಗೆ ಮೊದಲು ಹೇಳಿಕೆ ನೀಡಿದ್ದರು. ಕೂಡಲೇ ಇವರನ್ನು ಚೀನಾ ಬಂಧಿಸಿತ್ತು, ಬಳಿಕ ವೈರಸ್ ಗೆ ಬಲಿಯಾಗಿದ್ದರು ಎಂದು ವರದಿಯಾಗಿತ್ತು.

ಇತ್ತೀಚೆಗಷ್ಟೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೋವಿಡ್ 19 ಚೀನಾ ವೈರಸ್ ಎಂದು ಕರೆದಿದ್ದರು. ಆದರೆ ಚೀನಾ ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ತಮ್ಮಿಂದ ಯಾವುದೇ ತಪ್ಪು ನಡೆದಿಲ್ಲ ಎಂದು ಹೇಳಿತ್ತು. ಆದರೆ ಈ ಹಿಂದೆ ಸ್ಪ್ಯಾನಿಶ್ ಫ್ಲೂ, ನ್ಯೂ ದಿಲ್ಲಿ ಸೂಪರ್ ಬಗ್ ಅಥವಾ ದಕ್ಷಿಣ ಕೊರಿಯಾ ನದಿ ಹಾಂಟಾನಾದ ಹಾಂಟಾ ವೈರಸ್ ಎಂದು ಹೆಸರಿಟ್ಟಾಗ ಚೀನಾ ಯಾವತ್ತೂ ಆಕ್ಷೇಪ ವ್ಯಕ್ತಪಡಿಸಿರಲಿಲ್ಲವಾಗಿತ್ತು. ಆದರೆ ಇದೀಗ ಚೀನಾ ವೈರಸ್ ಎಂಬ ಹೆಸರಿಗೆ ತೀವ್ರ ವಿರೋಧವ್ಯಕ್ತಪಡಿಸುತ್ತಿದೆ ಎಂದು ವರದಿ ತಿಳಿಸಿದೆ.

ಈಗ ಚೀನಾ ಸರ್ಕಾರ ಮತ್ತು ಮಾಧ್ಯಮ ಚೀನಾದಲ್ಲಿ ವೈರಸ್ ಹರಡಲು ಅಮೆರಿಕವೇ ಕಾರಣ ಎಂದು ಆರೋಪಿಸುತ್ತಿದೆ. ಮಾರ್ಚ್ 12ರಂದು ಚೀನಾದ ವಿದೇಶಾಂಗ ವಕ್ತಾರ ಝಾವೋ ಲಿಜಾನ್ ಕೂಡಾ ಕೋವಿಡ್ ವೈರಸ್ ಅಮೆರಿಕದಿಂದ ಚೀನಾಕ್ಕೆ ಬಂದಿತ್ತು ಎಂದು ಟ್ವೀಟರ್ ನಲ್ಲಿ ಆರೋಪಿಸಿದ್ದರು.

Comments are closed.