ಕರ್ನಾಟಕ

ಕುಡಿಬಾರದ: ಕೊರೊನಾ ರಜೆಯಲ್ಲಿ ಪೊಲೀಸರ ವಿರುದ್ಧ ಯುವತಿಯರಿಬ್ಬರ ರಂಪಾಟ

Pinterest LinkedIn Tumblr


ಹಾಸನ: ಕುಡಿದೆ, ಕುಡಿಬಾರದ, ನೀವು ಕುಡಿಯಲ್ವಾ ಎಂದು ಯುವತಿಯರು ಪೊಲೀಸರ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದ ವಿಡಿಯೋವೊಂದು ವೈರಲ್ ಆಗುತ್ತಿದೆ.

ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಶಾಲೆ, ಕಾಲೇಜುಗಳಿಗೆ ರಜೆ ನೀಡಿದೆ. ಹೀಗಾಗಿ ಯುವತಿಯರ ತಂಡ ಸಕಲೇಶಪುರಕ್ಕೆ ಆಗಮಿಸಿದೆ. ಈ ವೇಳೆ ಗುಂಪಾಗಿದ್ದ ಯುವತಿಯರಿಗೆ ಪೊಲೀಸರು ತಿಳಿ ಹೇಳಿದ್ದಾರೆ.

ತಿಳಿ ಹೇಳಿದ ಪೊಲೀಸರ ವಿರುದ್ಧವೇ ಇಬ್ಬರು ಯುವತಿಯರು ಕೂಗಾಡಿ ರಂಪಾಟ ಮಾಡಿದ್ದಾರೆ. ಯುವತಿಯರು ಕುಡಿದಿರುವ ಅನುಮಾನದಲ್ಲಿ ಪೊಲೀಸರು ಪ್ರಶ್ನೆ ಮಾಡಿದ್ದರು. ಆಗ ಯುವತಿಯರು ಕುಡಿದೆ, ಕುಡಿಬಾರದ, ನೀವು ಕುಡಿಯಲ್ವಾ ಎಂದು ಪೊಲೀಸರ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಾಸನ ಜಿಲ್ಲೆ ಸಕಲೇಶಪುರದಲ್ಲಿ ಈ ಘಟನೆ ನಡೆದಿದ್ದು, ಯುವಕ ಹಾಗೂ ಯುವತಿ ಮೂಲತಃ ಮೂಡಬಿದಿರೆಯವರು. ಸದ್ಯ ಪೊಲೀಸರು ಯುವತಿಯ ಪೋಷಕರನ್ನು ಕರೆಸಿ ತಿಳಿ ಹೇಳಿ ಸುರಕ್ಷಿತವಾಗಿ ಮನೆಗೆ ಕಳುಹಿಸಿದ್ದಾರೆ.

ಕಳೆದ ಎರಡು ದಿನದ ಹಿಂದೆ ಈ ಘಟನೆ ನಡೆದಿದ್ದು, ಯುವತಿಯರ ರಂಪಾಟದ ವಿಡಿಯೋ ಮೊಬೈಲ್‍ನಲ್ಲಿ ಸೆರೆ ಹಿಡಿಯಲಾಗಿತ್ತು. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಸದ್ಯ ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ.

Comments are closed.