ಅಂತರಾಷ್ಟ್ರೀಯ

ಪಾಕ್ ನಲ್ಲಿ ಒಂದೇ ದಿನದಲ್ಲಿ 90 ಕೋವಿಡ್-19 ಸೋಂಕು ದೃಢ; ಇಟಲಿಯಲ್ಲಿ ಮೃತಪಟ್ಟವರ ಸಂಖ್ಯೆ 2,500

Pinterest LinkedIn Tumblr


ವಾಷಿಂಗ್ಟನ್/ಸ್ಪೇನ್: ಜಾಗತಿಕವಾಗಿ ಮಹಾಮಾರಿ ಕೊರೊನಾ ವೈರಸ್ ಗೆ 1,84,000 ಮಂದಿಗೆ ಸೋಂಕು ತಗುಲಿದ್ದು, ಈಗಾಗಲೇ 7,500 ಜನರು ಸಾವನ್ನಪ್ಪಿದ್ದಾರೆ. ಇಟಲಿಯಲ್ಲಿ ಕಳೆದ 24ಗಂಟೆಯಲ್ಲಿ ಕೋವಿಡ್ 19 ವೈರಸ್ ಗೆ 345 ಜನರು ಬಲಿಯಾಗಿದ್ದು, ಸಾವಿನ ಸಂಖ್ಯೆ 2,503ಕ್ಕೆ ಏರಿದೆ ಎಂದು ವರದಿ ತಿಳಿಸಿದೆ.

ಇಟಲಿಯಲ್ಲಿ ಕೋವಿಡ್ 19 ವೈರಸ್ ಪೀಡಿತರ ಸಂಖ್ಯೆ 31,506ಕ್ಕೆ ಏರಿಕೆಯಾಗಿದ್ದು, ಶೇ.12.06ರಷ್ಟು ಸಂಖ್ಯೆ ಹೆಚ್ಚಳವಾಗಿದೆ. ಫೆಬ್ರುವರಿ 21ರಂದು ಇಟಲಿಯಲ್ಲಿ ಕೋವಿಡ್ 19 ಸೋಂಕು ಪತ್ತೆಯಾಗಿತ್ತು. ಅತೀ ವೇಗವಾಗಿ ಹಬ್ಬುತ್ತಿರುವ ಕೋವಿಡ್ 19 ಸೋಂಕಿಗೆ ಬಲಿಯಾದವರ ಸಂಖ್ಯೆ ಅಧಿಕವಾಗುತ್ತಿರುವುದು ಇಟಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ ಎಂದು ವರದಿ ವಿವರಿಸಿದೆ.

ಪಾಕಿಸ್ತಾನದಲ್ಲಿ 24ಗಂಟೆಯಲ್ಲಿ 90 ಕೊರೊನಾ ಸೋಂಕು ದೃಢ:

ಪಾಕಿಸ್ತಾನದಲ್ಲಿ ಈವರೆಗೆ ಒಂದೇ ಒಂದು ಕೊರೊನಾ ಪ್ರಕರಣ ಪತ್ತೆಯಾಗಿದೆ ಎಂದು ವರದಿಯಾದ ಬೆನ್ನಲ್ಲೇ ಕಳೆದ 24ಗಂಟೆಯಲ್ಲಿ ಪಾಕಿಸ್ತಾನದಲ್ಲಿ ಕೋವಿಡ್ -19, 90 ಪ್ರಕರಣಗಳು ದೃಢಪಟ್ಟಿದ್ದು, ಒಟ್ಟು ಸಂಖ್ಯೆ 184ಕ್ಕೆ ಏರಿದೆ ಎಂದು ಅಧಿಕಾರಿಗಳು ಮಂಗಳವಾರ ಖಚಿತಪಡಿಸಿದ್ದಾರೆ.

ಪಾಕ್ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ಈಶಾನ್ಯ ಪಂಜಾಬ್ ನಲ್ಲಿ, ದಕ್ಷಿಣ ಸಿಂಧ್ ಮತ್ತು ವಾಯುವ್ಯ ಖೈಬರ್ ಪುಖ್ತುನ್ ಖಾವಾ(ಕೆಪಿ) ಪ್ರಾಂತ್ಯಗಳಲ್ಲಿ ನೂತನ ಕೇವಿಡ್ -19 ವೈರಸ್ ಪ್ರಕರಣ ಪತ್ತೆಯಾಗಿರುವುದಾಗಿ ತಿಳಿಸಿದೆ.

ಸಿಂಧ್ ಪ್ರಾಂತ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 146ಕ್ಕೆ ಏರಿದ್ದು, ಇದರಲ್ಲಿ 119 ಮಂದಿ ಯಾತ್ರಾರ್ಥಿಗಳು, ಇವರನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ಕರಾಚಿಯಲ್ಲಿ 26 ಪ್ರಕರಣ, ಹೈದರಾಬಾದ್ ನಲ್ಲಿ 01 ಪ್ರಕರಣ ಪತ್ತೆಯಾಗಿದೆ ಎಂದು ಸಿಂಧ್ ಪ್ರಾಂತೀಯ ಸರ್ಕಾರದ ವಕ್ತಾರ ಮುರ್ತಾಝ್ ವಾಹಬ್ ಟ್ವೀಟ್ ನಲ್ಲಿ ತಿಳಿಸಿದ್ದಾರೆ.

Comments are closed.