ಕರ್ನಾಟಕ

ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದ ಕಂಡಕ್ಟರ್ – ಪೋಷಕರಿಂದ ಹಿಗ್ಗಾಮುಗ್ಗಾ ಥಳಿತ

Pinterest LinkedIn Tumblr


ಬೆಂಗಳೂರು: ಚಲಿಸುವ ಬಸ್ಸಿನಲ್ಲಿ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದ ಕೆಎಸ್ಆರ್‌ಟಿಸಿ ಬಸ್ ಕಂಡಕ್ಟರ್ ಬೆಂಗಳೂರಿನಲ್ಲಿ ಸಿಕ್ಕಿಬಿದ್ದಿದ್ದಾನೆ.

ಬೆಂಗಳೂರಿನಿಂದ ಹಾಸನಕ್ಕೆ ಹೋಗುತ್ತಿದ್ದ ಯುವತಿಗೆ ಜೊತೆಯಲ್ಲೇ ಕುಳಿತ ಕಂಡಕ್ಟರ್ ಕೈ ಹಿಡಿದುಕೊಂಡು ಅಸಭ್ಯವಾಗಿ ವರ್ತಿಸಿದ್ದನು. ಜೋರಾಗಿ ಕಿರುಚಿಕೊಂಡರೆ ನಿನ್ನ ಮರ್ಯಾದೆನೇ ಹೋಗುವುದು, ನಾನು ನಿನ್ನ ಮೇಲೆನೇ ಹೇಳುತ್ತೇನೆ ಎಂದು ಕಂಡೆಕ್ಟರ್ ಯುವತಿಗೆ ಹೆದರಿಸಿದ್ದನು. ಇದನ್ನೂ ಓದಿ: KSRTC ಬಸ್ಸಿನಲ್ಲಿ ಮಹಿಳೆಯ ಜೊತೆ ಕಂಡಕ್ಟರ್ ಅಸಭ್ಯ ವರ್ತನೆ

ಈ ವೇಳೆ ಪ್ಲಾನ್ ಮಾಡಿದ ಯುವತಿ ಕಂಡಕ್ಟರ್ ಇಸಾಕ್ ಅಲಿಯ ಕಾಮಚೇಷ್ಟೇಯನ್ನು ತನ್ನ ಮೊಬೈಲಿನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಳು. ನಂತರ ಬೆಂಗಳೂರಿಗೆ ಬಂದ ಯುವತಿ ತನ್ನ ಪೋಷಕರ ಬಳಿ ನಡೆದ ಘಟನೆಯನ್ನು ವಿಡಿಯೋ ಸಮೇತ ಹೇಳಿಕೊಂಡಿದ್ದಳು. ಇದರಿಂದ ಕೋಪಗೊಂಡ ಯುವತಿಯ ಪೋಷಕರು ಹಾಸನ ಟು ಬೆಂಗಳೂರಿನ ಬಸ್ ನಂಬರ್ ಪಡೆದು ಆ ಬಸ್ ಮತ್ತೆ ಯಾವಾಗ ಬೆಂಗಳೂರಿಗೆ ಬರುತ್ತೆ ಎಂದು ಕಾಯುತ್ತಿದ್ದರು.

ಭಾನುವಾರ ಸಂಜೆ ವೇಳೆ ಅದೇ ಬಸ್, ಅದೇ ಕಂಡಕ್ಟರ್ ಬೆಂಗಳೂರಿಗೆ ಬರುತ್ತಿದ್ದನ್ನು ತಿಳಿದು ಯಶವಂತಪುರ ಬಸ್ ನಿಲ್ದಾಣದ ಬಳಿ ಕಾದು ಕಾಮುಕ ಕಂಡಕ್ಟರ್‍ಗೆ ಹಿಗ್ಗಾಮುಗ್ಗಾ ಥಳಿಸಿ ಸುಬ್ರಮಣ್ಯನಗರ ಪೊಲೀಸರಿಗೆ ಒಪ್ಪಿಸಿದ್ದಾರೆ.

Comments are closed.