ಕರ್ನಾಟಕ

ಅಮ್ಮನನ್ನು ಹತ್ಯೆ ಮಾಡಿದ ಮಹಿಳಾ ಟೆಕ್ಕಿಯ ಪ್ರಕರಣಕ್ಕೆ ಟ್ವಿಸ್ಟ್

Pinterest LinkedIn Tumblr


ಬೆಂಗಳೂರು: ಟೆಕ್ಕಿ ತನ್ನ ತಾಯಿಯನ್ನೇ ಕೊಂದ ಪ್ರಕರಣಕ್ಕೆ ಈಗ ಟ್ವಿಸ್ಟ್ ಸಿಕ್ಕಿದ್ದು, ಹೆತ್ತವಳನ್ನು ಕೊಲೆ ಮಾಡೋದಕ್ಕೆ ಆರೋಪಿ ಅಮೃತಾಳ ಪ್ರಿಯಕರನೂ ಸಾಥ್ ನೀಡಿರುವುದು ಬೆಳಕಿಗೆ ಬಂದಿದೆ. ತಾಯಿಯನ್ನು ಕೊಲೆ ಮಾಡಿದ ಬಳಿಕ ಲವ್ವರ್ ಜೊತೆ ಅಮೃತಾ ಪರಾರಿಯಾದ ದೃಶ್ಯಗಳು ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಸಿಂಪೋನಿ ಸಾಫ್ಟ್‌ವೇರ್ ಕಂಪನಿಯಲ್ಲಿ ಇಂಜಿನಿಯರ್ ಆಗಿದ್ದ ಅಮೃತಾ, ನಾನು 15 ಲಕ್ಷ ರೂ. ಸಾಲ ಮಾಡಿದ್ದೇನೆ. ಸಾಲಗಾರರು ಮನೆಯ ಬಳಿ ಬರುತ್ತಾರೆ, ಅವರು ಬಂದಾಗ ನನ್ನ ಬಂಡವಾಳ ಬಯಲಾಗುತ್ತೆ. ಅದಕ್ಕೆ ನಿಮ್ಮನ್ನು ಕೊಲ್ಲುತ್ತೇನೆ ಎಂದು ಮಲಗಿದ್ದ ತಾಯಿಗೆ ಚಾಕು ಇರಿದು ಕೊಲೆ ಮಾಡಿದ್ದಳು. ಬಳಿಕ ಅಲ್ಲಿಂದ ಆಕೆ ಪರಾರಿಯಾಗುತ್ತಿರುವ ದೃಶ್ಯಾವಳಿಗಳು ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆರೋಪಿಗೆ ಆಕೆಯ ಲವ್ವರ್ ಕೂಡ ಸಾಥ್ ನೀಡಿದ್ದಾನೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.

ಅಮೃತಾಳ ಪ್ರೀತಿಗೆ ಮನೆಯವರು ವಿರೋಧ ಮಾಡಿದ್ದಕ್ಕೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ತಾಯಿ ಹಾಗೂ ತಮ್ಮ ಹರೀಶ್ ಪ್ರೀತಿಗೆ ವಿರೋಧ ಮಾಡಿದ್ದಕ್ಕೆ ಅಮೃತಾ ಕೊಲೆ ಮಾಡಿದ್ದಾಳೆ ಎನ್ನಲಾಗಿದೆ. ತಾಯಿಯನ್ನು ಕೊಂದ ಬಳಿಕ ಪರಾರಿಯಾಗಿರುವ ಮಗಳಿಗಾಗಿ ಕೆ.ಆರ್ ಪುರಂ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ತಾಯಿ ನಿರ್ಮಾಲಾ ಅವರನ್ನು ಕೊಲೆ ಮಾಡಿ, ತಮ್ಮ ಹರೀಶ್‍ನನ್ನ ಕೊಲ್ಲಲು ಅಮೃತಾ ಯತ್ನಿಸಿದ್ದಳು. ಅಮೃತಾ ಚಾಕು ಇರಿಯುವಾಗ ಯಾಕೆ ಈ ರೀತಿ ಮಾಡುತ್ತಿದ್ದೀಯಾ ಎಂದು ಹರೀಶ್ ಪ್ರಶ್ನೆ ಮಾಡಿದ್ದನು. ನಾನು 15 ಲಕ್ಷ ಸಾಲ ಮಾಡಿದ್ದೀನಿ. ನಾನು ಹೈದರಾಬಾದ್‍ಗೆ ಹೋದಾಗ ನಿಮ್ಮ ಬಳಿ ಅದನ್ನು ಕೇಳಲು ಸಾಲಗಾರರು ಬರುತ್ತಾರೆ. ಆಗ ನನ್ನ ಬಂಡವಾಳ ನಿಮಗೆ ಗೊತ್ತಾಗುತ್ತೆ, ಅದಕ್ಕೆ ಅಮ್ಮನನ್ನು ಕೊಲೆ ಮಾಡಿದ್ದೀನಿ. ನಿನ್ನನ್ನು ಕೊಲ್ಲುತ್ತೇನೆ ಎಂದು ಅಮೃತಾ ಹೇಳಿದ್ದಳೆಂದು ಹರೀಶ್ ತಿಳಿಸಿದ್ದಾನೆ.

Comments are closed.