ರಾಷ್ಟ್ರೀಯ

ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಮಗುವಿಗೆ ಜನ್ಮ ನೀಡಿದ ಮಹಿಳೆ

Pinterest LinkedIn Tumblr


ಕೋಲ್ಕತ್ತಾ: ಕತಾರ್ ನ ದೋಹಾದಿಂದ ಬ್ಯಾಂಕಾಕ್ ಗೆ ತೆರಳುತ್ತಿದ್ದ ವಿಮಾನವೊಂದು ಕೊಲ್ಕತ್ತಾ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶವಾದ ಘಟನೆ ಮಂಗಳವಾರ ಮುಂಜಾನೆ ನಡೆದಿದೆ. ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಮಗುವಿಗೆ ಜನ್ಮ ನೀಡಿದ್ದೇ ಇದಕ್ಕೆ ಕಾರಣ.

23 ವರ್ಷದ ಗರ್ಭಿಣಿ ಕತಾರ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಥೈಲ್ಯಾಂಡ್ ಮೂಲದವರಾದ ಇವರಿಗೆ ವಿಮಾನದಲ್ಲಿ ಹೆರಿಗೆ ನೋವು ಕಾಣಿಸಿಕೊಂಡಿದೆ. ವಿಮಾನ ಸಿಬ್ಬಂದಿ ಕೂಡಲೇ ವ್ಯವಸ್ಥೆ ಮಾಡಿ ಅವರ ಸಹಾಯದಿಂದ ವಿಮಾನದಲ್ಲಿಯೇ ಹೆರಿಗೆ ಮಾಡಿಸಲಾಯಿತು.

ವಿಮಾನ ದೋಹಾದಿಂದ ಬ್ಯಾಂಕಾಂಗ್ ಗೆ ತೆರಳುತ್ತಿತ್ತು. ಮುಂಜಾನೆ ಸುಮಾರು 3 ಗಂಟೆ ಸುಮಾರಿಗೆ ಮಹಿಳೆ ವಿಮಾನದಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಗುವಿಗೆ ಸೂಕ್ತ ಚಿಕಿತ್ಸೆ ನೀಡಬೇಕಾದ ಕಾರಣ ವಿಮಾನವನ್ನು 3.15ರ ಸಮಯಕ್ಕೆ ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಯಿತು.

ಮಹಿಳೆ ಮತ್ತು ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ವರದಿಯಾಗಿದೆ. ವಿಮಾನ ಸಿಬ್ಬಂದಿಗಳ ಸಮಯಪ್ರಜ್ಞೆಗೆ ಮೆಚ್ಚುಗೆ ವ್ಯಕ್ತವಾಗಿದೆ.

Comments are closed.