ಕರ್ನಾಟಕ

ಹೆಂಡತಿಯ ಟಿಕ್‍ಟಾಕ್ ಹುಚ್ಚಾಟ ಕೇಳಿ ದುಬೈಯಿಂದ ಓಡಿ ಬಂದ!

Pinterest LinkedIn Tumblr


ಬೆಂಗಳೂರು: ಕೆಲಸಕ್ಕಾಗಿ ಪತಿ ವಿದೇಶಕ್ಕೆ ಹೋದರೆ, ಇತ್ತ ಮನೆಯಲ್ಲಿದ್ದ ಪತ್ನಿ ಟಿಕ್‍ಟಾಕ್ ವಿಡಿಯೋ ಗೀಳಿಗೆ ಬಿದ್ದಿದ್ದಳು.

ಬೆಂಗಳೂರಿನಲ್ಲಿ ವಾಸವಾಗಿದ್ದ 35 ವರ್ಷದ ಪತಿ ಕೆಲಸ ಅರಿಸಿ ದುಬೈಗೆ ಹೋಗಿದ್ದರು. ಪತಿ ವಿದೇಶಕ್ಕೆ ಹೋಗಿದ್ದೆ ತಡ ಪತ್ನಿ ಟಿಕ್‍ಟಾಕ್ ಹುಚ್ಚಿಗೆ ಬಿದ್ದು ವಿಡಿಯೋ ಮಾಡುವುದ್ದಕ್ಕೆ ಶುರು ಮಾಡಿದ್ದಳು. ಯಾವಾಗ ಲೈಕ್ಸ್, ಕಮೆಂಟ್ಸ್, ಫಾಲೋವರ್ಸ್ ಹೆಚ್ಚಾದರೋ, ಪತ್ನಿ ಫುಲ್ ಖುಷ್ ಆಗಿದ್ದಳು.

ಇದೇ ಖುಷಿಯಲ್ಲಿ ಅರೆಬರೆ ಬಟ್ಟೆ ಹಾಕಿಕೊಂಡು ಟಿಕ್‍ಟಾಕ್ ಮಾಡಿದ ಮಹಿಳೆಯ ವಿಡಿಯೋಗಳಿಗೆ ಭರ್ಜರಿ ರೆಸ್ಪಾನ್ಸ್ ಬಂದಿದ್ದವು. ಅದು ಯಾವ ಲೆವೆಲ್‍ಗೆ ಎಂದರೆ ದುಬೈನಲ್ಲಿ ಕೆಲಸ ಮಾಡುವ ಪತಿಯ ಮೊಬೈಲ್‍ಗೆ ಪತ್ನಿ ಹಸಿಬಿಸಿ ಟಿಕ್‍ಟಾಕ್ ವಿಡಿಯೋಗಳು ತಲುಪಿತ್ತು.

ತನ್ನ ಪತ್ನಿಯ ಟಿಕ್‍ಟಾಕ್ ವಿಡಿಯೋ ನೋಡಿದ್ದ ಪತಿ ಫುಲ್ ಶಾಕ್ ಆಗಿ ದುಬೈನಲ್ಲಿ ಕೆಲಸ ಬಿಟ್ಟು ಬೆಂಗಳೂರಿಗೆ ಓಡೋಡಿ ಬಂದಿದ್ದಾರೆ. ಮನೆಗೆ ಬಂದ ಪತಿ ತನ್ನ ಪತ್ನಿಗೆ ಎಷ್ಟೇ ಬುದ್ದಿವಾದ ಹೇಳಿದರೂ ಪತ್ನಿ ಮಾತ್ರ ಟಿಕ್‍ಟಾಕ್‍ನಿಂದ ಹೊರಬರುವುದಕ್ಕೆ ಸಿದ್ಧವಿರಲಿಲ್ಲ.

ಪತ್ನಿಯ ವರ್ತನೆಯಿಂದ ಬೇಸತ್ತ ಪತಿ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿರುವ ವನಿತಾ ಸಹಾಯವಾಣಿ ಮೊರೆ ಹೋಗಿದ್ದಾರೆ. ವನಿತಾ ಸಹಾಯವಾಣಿಗೆ ಬಂದ ಪತಿ ಸಾಮಾಜಿಕ ಜಾಲತಾಣಗಳಿಂದ ಏನೆಲ್ಲಾ ಎಡವಟ್ಟುಗಳು ಆಗುತ್ತವೆ ಎಂದು ಪತ್ನಿಗೆ ಕೌನ್ಸ್ ಲಿಂಗ್ ಮಾಡುತ್ತಿದ್ದಾರೆ.

Comments are closed.