ಕರ್ನಾಟಕ

ನಾನು ಮುಸ್ಲಿಂ ಮತ ಕೇಳುವುದಿಲ್ಲ: ರೇಣುಕಾಚಾರ್ಯ

Pinterest LinkedIn Tumblr


ಬೆಂಗಳೂರು: ಹೊನ್ನಾಳಿಯನ್ನು ಕೇಸರೀಕರಣ ಮಾಡುತ್ತೇವೆ. ಆದರೆ, ಅಲ್ಪಸಂಖ್ಯಾತರರಿಗೆ ತೊಂದರೆ ಕೊಡುವುದಿಲ್ಲ. ಕೇಸರೀಕರಣ ಅಂದರೆ ಕ್ರಾಂತಿ ಮಾಡಲ್ಲ, ಶಾಂತಿ ಮಂತ್ರ ಜಪಿಸುತ್ತೇವೆ ಎಂದು ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮಗೆ ಮುಸ್ಲಿಂ ಬೂತ್‌ಗಳಲ್ಲಿ ಒಂದೇ ಒಂದು ಮತವೂ ಬರುವುದಿಲ್ಲ. ಗೆದ್ದಾಗ ಅಣ್ಣಾ ನಮುªಕೇ ನಿಮ್ಗೆ ವೋಟ್‌ ಹಾಕಿದೀವಿ ಅಂತಾರೆ. ನಮ್ಮ ಕೇರಿ ಅಭಿವೃದ್ಧಿ ಮಾಡಿ ಅಂತಾರೆ. ಬಿಜೆಪಿಗೆ ಮತ ಕೊಡಬೇಡಿ ಎಂದು ಮುಸ್ಲಿಂ ಧರ್ಮ ಗುರುಗಳು ಫ‌ತ್ವಾ ಹೊರಡಿಸುತ್ತಾರೆ. ಅಭಿವೃದ್ಧಿಗೆ ಬಿಜೆಪಿ ಬೇಕು, ಮತ ಹಾಕಲು ಕಾಂಗ್ರೆಸ್‌ ಬೇಕಾ? ಎಂದು ಪ್ರಶ್ನಿಸಿದರು.

2018ರ ಚುನಾವಣೆಯಲ್ಲಿ ನನಗೆ ಒಂದೂ ಮುಸ್ಲಿಂ ಮತ ಬಿದ್ದಿಲ್ಲ, ನಾನು ಕೇಳಿಯೂ ಇಲ್ಲ, ಮುಂದೆಯೂ ಕೇಳಲ್ಲ. ಬೇಕಿದ್ದರೆ ಹಾಕಲಿ, ಬಿಡಲಿ. ಎಲ್ಲರಂತೆ ಅವರಿಗೂ ಅಭಿವೃದ್ಧಿ ಕಾರ್ಯಕ್ರಮ ಕೊಡುತ್ತೇವೆ. ಆದರೆ, ವಿಶೇಷ ಪ್ಯಾಕೇಜ್‌ ಕೊಡಲ್ಲ ಎಂದು ಹೇಳಿದರು.

ದೇಶದ್ರೋಹಿಗಳು
ಸಂಘ ಪರಿವಾರದವರನ್ನು ನಿಷೇಧ ಮಾಡಬೇಕು ಎಂದು ಹೇಳಿರುವ ಜಮೀರ್‌ ಅಹಮದ್‌ ಖಾನ್‌ ಮತ್ತುಯು.ಟಿ.ಖಾದರ್‌ ದೇಶದ್ರೋಹಿಗಳು. ಸಂಘ ಪರಿವಾರದವರು ದೇಶದ ರಕ್ಷಕರು. ಜಮೀರ್‌ ಅಹಮದ್‌ ಇನ್ನೊಮ್ಮೆ ಸಂಘ ಪರಿವಾರದ ಬಗ್ಗೆ ಮಾತನಾಡುವಾಗ ಹುಷಾಗಿರಬೇಕು. ಜಮೀರ್‌ ಅಹಮದ್‌ ಅವರಿಗೆ ಸೇರಿದ ನ್ಯಾಷನಲ್‌ ಟ್ರಾವೆಲ್ಸ್‌ನಲ್ಲಿ 2005 ರಲ್ಲಿ ರೈಫ‌ಲ್ಸ್‌ ಸಿಕ್ಕಿತ್ತು ಎಂದು ದೂರಿದರು.

ಪಿಎಫ್ಐ ಹಾಗೂ ಎಸ್‌ಡಿಪಿಐ ಉಗ್ರ ಸಂಘಟನೆಗಳು. ಸಾಕಷ್ಟು ಪ್ರಕರಣಗಳಲ್ಲಿ ಇದು ಸಾಬೀತಾಗಿದೆ. ಶಾಸಕ ತನ್ವೀರ್‌ ಸೇs… ಅವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಘಟನೆಯೂ ಇದಕ್ಕೆ ಸಾಕ್ಷಿ. ಹೀಗಾಗಿ, ಇವುಗಳನ್ನು ನಿಷೇಧ ಮಾಡಲು ಕೇಂದ್ರಕ್ಕೆ ಶಿಫಾರಸ್ಸು ಮಾಡಲು ತೀರ್ಮಾನಿಸಲಾಗಿದೆ.

ರಾಜ್ಯದಲ್ಲಿ ಕೆಲವೆಡೆ ಮಸೀದಿಗಳಲ್ಲಿ ಮದ್ದು-ಗುಂಡು ಸಂಗ್ರಹಿಸುವ ಕೆಲಸ ಮಾಡಲಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಮುಗ್ಧ ಜನರಲ್ಲಿ ಉಗ್ರವಾದ ತುಂಬುವ ಮದರಸಾಗಳು ಬೇಕಾ? ಈ ಬಗ್ಗೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಾಯಕರು ಮಾತನಾಡಲಿ ಎಂದು ಪ್ರಶ್ನಿಸಿದರು.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಮುಸ್ಲಿಂ ಇಟ್ಟಿದ್ದು ಅಂತೇನೂ ನಾವು ಹೇಳಿರಲಿಲ್ಲ. ಆದರೆ, ಬಹುತೇಕ ಭಯೋತ್ಪಾದನೆ ಚಟುವಟಿಕೆಗಳಲ್ಲಿ ಹೆಚ್ಚು ಅವರೇ ಭಾಗಿಯಾಗಿದ್ದಾರೆ. ಎಲ್ಲೋ ಹಿಂದೂಗಳು ಭಾಗಿಯಾಗಿದ್ದು ಒಂದೆರಡು ಪ್ರಕರಣಗಳು ಅಷ್ಟೇ ಎಂದು ತಿಳಿಸಿದರು.

ಮಂಗಳೂರು ವಿಮಾನ ನಿಲ್ದಾಣದಲ್ಲಿ ನ್ಪೋಟಕ ಪತ್ತೆ ವಿಚಾರದಲ್ಲಿ ನಮ್ಮ ಪೊಲೀಸರ ನೈತಿಕತೆ ಕುಗ್ಗಿಸುವ ಮಾತುಗಳನ್ನು ಆಡಿರುವ ಕುಮಾರಸ್ವಾಮಿಯವರೇ, ಬಾಂಬ್‌ಗ ಬಳಸಿದ್ದು ಮುಖಕ್ಕೆ ಹಾಕುವ ಪೌಡರ್‌ ಎಂದಿದ್ದೀರಿ. ಇದು ಸರಿಯಾ ಎಂದು ವಾಗ್ಧಾಳಿ ನಡೆಸಿದರು.

Comments are closed.