ಕರ್ನಾಟಕ

ಮಗುವಿಗೆ ಹೊಡೆಯಬೇಡ ಎಂದು ಪತಿ ಬುದ್ಧಿವಾದ ಹೇಳಿದ್ದಕ್ಕೆ ಪತ್ನಿ ಆತ್ಮಹತ್ಯೆ

Pinterest LinkedIn Tumblr


ಮೈಸೂರು: ಮಗುವಿಗೆ ಹೊಡೆಯಬೇಡ ಎಂದು ಪತಿ ಬುದ್ಧಿವಾದ ಹೇಳಿದ್ದಕ್ಕೆ ಮನನೊಂದು ಪತ್ನಿ ನೇಣಿಗೆ ಶರಣಾದ ಘಟನೆ ಮೈಸೂರಿನ ಶ್ರೀರಾಂಪುರದ 2ನೇ ಹಂತದಲ್ಲಿ ನಡೆದಿದೆ.

ವಿನುತಾ ಶೆಟ್ಟಿ(35) ಆತ್ಮಹತ್ಯೆ ಮಾಡಿಕೊಂಡ ಪತ್ನಿ. ಮೂಲತಃ ಕುಂದಾಪುರದವಳಾದ ವಿನುತಾ ಕಳೆದ 11 ವರ್ಷಗಳ ಹಿಂದೆ ನಾಗರಾಜ್ ಎಂಬವನ ಜೊತೆ ಮದುವೆಯಾಗಿತ್ತು. ಮೈಸೂರಿನ ಭ್ರಮರಾಂಭ ಕಲ್ಯಾಣ ಮಂಟಪದ ಬಳಿ ನಾಗರಾಜ್ ಜ್ಯೂಸ್ ಅಂಗಡಿ ಇಟ್ಟಿದ್ದರು.

ಪತ್ನಿ ವಿನುತಾ ತನ್ನ ಮಗುವಿಗೆ ಹೊಡೆಯುತ್ತಿದ್ದಳು. ಇದನ್ನು ನೋಡಿದ ನಾಗರಾಜ್ ಮಗುವಿಗೆ ಹೊಡೆಯಬೇಡ ಎಂದು ವಿನುತಾಳಿಗೆ ಬುದ್ಧಿವಾದ ಹೇಳಿದ್ದಾರೆ. ಪತ್ನಿಗೆ ಬುದ್ಧಿವಾದ ಹೇಳಿದ ಬಳಿಕ ನಾಗರಾಜ್ ಉತ್ತನಹಳ್ಳಿ ದೇವಸ್ಥಾನಕ್ಕೆ ಹೋಗಿದ್ದಾರೆ.

ವಿನುತಾ ತನ್ನ ಪತಿಯ ಮಾತಿಗೆ ಮನನೊಂದು ಆತ ದೇವಸ್ಥಾನಕ್ಕೆ ಹೋಗಿ ಬರುವಷ್ಟರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯ ಈ ಬಗ್ಗೆ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.