ಕರ್ನಾಟಕ

ನಾನು ಉಫ್‌ ಊದಿದ್ದಕ್ಕೇನೇ ಜಮೀರ್‌ ಅಹ್ಮದ್‌ ಬೆಂಗಳೂರು ವಿಮಾನ ಹತ್ತಿದ!

Pinterest LinkedIn Tumblr


ಬಳ್ಳಾರಿ: ನಾನು ಉಫ್‌ ಅಂತ ಊದಿದ್ದಕ್ಕೇನೇ ಜಮೀರ್‌ ಅಹ್ಮದ್‌ ಬೆಂಗಳೂರಿಗೆ ಫ್ಲೈಟ್ ಹತ್ತಿಕೊಂಡು ಹೋಗಿದ್ದಾರೆ ಎಂದು ಬಳ್ಳಾರಿ ನಗರ ಶಾಸಕ ಜಿ. ಸೋಮಶೇಖರ ರೆಡ್ಡಿ ಲೇವಡಿ ಮಾಡಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ಅಲ್ಪಸಂಖ್ಯಾತರ ವಿರುದ್ಧ ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾಗಿ ಆರೋಪಿಸಿದ್ದ ಚಾಮರಾಜಪೇಟೆ ಶಾಸಕ ಜಮೀರ್‌ ಅಹ್ಮದ್‌ ನನ್ನ ಮನೆ ಎದುರು ಧರಣಿಗೆ ಬಂದಿದ್ದರೆ ಬಹಳ ಚೆನ್ನಾಗಿರುತ್ತಿತ್ತು. ಒಳ್ಳೆಯ ಪರಿಣಾಮವೇ ಆಗುತ್ತಿತ್ತು, ಆ ದೇವರಿಗೆ ಗೊತ್ತಿರುತ್ತಿತ್ತು ನಾನು ಖಡ್ಗ ತೆಗೆದರೆ ಅವರಲ್ಲ, ಬೇರೆ ಯಾರೂ ಇರಲ್ಲ ಎಂದು ನಗುತ್ತಲೇ ಟೀಕಿಸಿದರು.

ನಾನು ಪ್ರತಿಭಟನೆ ಹೆಸರಲ್ಲಿ ದೇಶದ ಆಸ್ತಿ ಹಾಳು ಮಾಡುವವರ ವಿರುದ್ಧ ಮಾತಾಡಿದ್ದೇನೆ. ನೀನ್ಯಾವನಲೇ… ನನಗೆ ಸವಾಲು ಹಾಕಲು ಎಂದು ತಿರುಗೇಟು ನೀಡಿದ ಸೋಮಶೇಖರ ರೆಡ್ಡಿ, ನೀನು ಬೆಂಗಳೂರಿನವನು. ನಾವು ಬಳ್ಳಾರಿಯವರು. ನಿನ್ನ ಹಿಂದೆ ಬಂದವರು ಬಳ್ಳಾರಿಯವರಲ್ಲ. ನಿನ್ನ ಜೊತೆ ಕರೆದುಕೊಂಡು ಬಂದವರು ನಿನ್ನೂರಿನವರು. ಜಮೀರ್‌ ತಮ್ಮ ಕ್ಷೇತ್ರಕ್ಕೆ ಸೀಮಿತವಾಗಿರಬೇಕು. ಯಾರೂ ಸಹ ಅವರಿಗೆ ಕರ್ನಾಟಕ ಬರೆದು ಕೊಟ್ಟಿಲ್ಲ.

ರಾಜ್ಯದ ಶಾಸಕರ ವಿರುದ್ಧ ಪ್ರತಿಭಟನೆ ಮಾಡುವ ಹಕ್ಕೂ ನೀಡಿಲ್ಲ. ಯಾರ ಯಾರ ಮನೆಗೋ ಹೋಗಿ ಧರಣಿ ಮಾಡ್ತೇನೆ ಎಂದರೆ ಸುಮ್ಮನೆ ಕೂರಲ್ಲ ಎಂದರು.

Comments are closed.