ಕರ್ನಾಟಕ

ಭಾರತದ ಖ್ಯಾತ ಸಿತಾರ್‌ ವಾದಕ ಡಾ. ಉಸ್ತಾದ್‌ ಹಮೀದ್‌ ಖಾನ್‌ ವಿಧಿವಶ

Pinterest LinkedIn Tumblr


ಧಾರವಾಡ: ಭಾರತದ ಖ್ಯಾತ ಸಿತಾರ್ ವಾದಕರಾದ ಡಾಕ್ಟರ್ ಉಸ್ತಾದ್ ಹಮೀದ್ ಖಾನ್ (69) ಶನಿವಾರ ಧಾರವಾಡದ ಸ್ವಗೃಹದಲ್ಲಿ ಕೊನೆಯುಸಿರೆಳೆದರು.

ಖಾನ್‌ ಅವರು ಭಾರತದ ಸುಪ್ರಸಿದ್ಧ ಇಂದೋರ್ ಬೀನ್ ಕಾರ್ ಘರಾಣೆಯ ಪ್ರಮುಖ ಸಿತಾರ್ ವಾದಕರಲ್ಲಿ ಒಬ್ಬರಾಗಿದ್ದರು.

ಇವರ ಪತ್ನಿ ಫರೀದಾ ಖಾನ್, ಮಕ್ಕಳಾದ ಮೊಹಸೀನ್ ಖಾನ್ ಕೂಡ ಖ್ಯಾತ ಸಿತಾರ್ ವಾದಕರು. ಮಗಳು ಅರ್ಮಾ ಖಾನ್ ವರ್ಣಚಿತ್ರ ಕಲಾವಿದೆ. ಸೊಸೆ ಶ್ರುತಿ ಖಾನ್ ಹಿಂದೂಸ್ತಾನಿ ಗಾಯಕಿ‌.

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕರ್ನಾಟಕ ಕಾಲೇಜು ಸಂಗೀತ ವಿಭಾಗದ ಪ್ರಾಂಶುಪಾಲರಾಗಿ ನಿವೃತ್ತಿ ಹೊಂದಿದ್ದರು.

ಧಾರವಾಡದ ಸಮೀಪ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಸಂಗೀತವನ್ನು ಕಲಿಸುವ ‘ಕಲಕೇರಿ ಸಂಗೀತ ವಿದ್ಯಾಲಯ’ ವನ್ನು ಸ್ಥಾಪಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ‌.

ದಕ್ಷಿಣ ಭಾರತದಲ್ಲಿ ಸಿತಾರ್ ಪರಂಪರೆಯನ್ನು ಪ್ರಾರಂಭಿಸಿ ಅದನ್ನು ಎಲ್ಲೆಡೆ ಹರಡಿದ ಕೀರ್ತಿ ಇವರ ಕುಟುಂಬಕ್ಕೆ ಸಲ್ಲುತ್ತದೆ.

ಇವರು ಭಾರತ ಮಾತ್ರವಲ್ಲದೆ ಹೊರದೇಶಗಳ ಅನೇಕ ಕಲಿಕಾ ವಿದ್ಯಾರ್ಥಿಗಳಿಗೆ ಸಂಗೀತದ ಪಾಠ ಮಾಡಿದ್ದಾರೆ ಇವರ ಶಿಷ್ಯರು ಭಾರತದಾದ್ಯಂತ ಸಂಗೀತದ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ.

Comments are closed.