ಅಂತರಾಷ್ಟ್ರೀಯ

ಫ್ಯಾಷನ್ ಲೋಕದಲ್ಲಿ ಹವಾ ಎಬ್ಬಿಸಿದ 91 ವರ್ಷದ ಅಜ್ಜಿ…!

Pinterest LinkedIn Tumblr


ಫ್ಯಾಷನ್ ಲೋಕ ಅಂದರೆ ಅದು ತಳಕು ಬಳುಕಿನ ಲೋಕ. ಇಲ್ಲಿ ಯುವಕ ಯುವತಿಯರಷ್ಟೇ ಜಾಸ್ತಿ ಮಿಂಚುವುದು. ಸ್ವಲ್ಪ ವಯಸ್ಸಾದರೂ ಫ್ಯಾಷನ್ ಲೋಕದಲ್ಲಿ ಹೆಸರು ಮಾಡಲು ಸಾಧ್ಯವಿಲ್ಲ ಎಂಬುದು ಸಾಮಾನ್ಯ ನಂಬಿಕೆ. ಆದರೆ, ಇಲ್ಲೊಬ್ಬರು ಅಜ್ಜಿ ಈ ಎಲ್ಲಾ ನಂಬಿಕೆಯನ್ನು ಹುಸಿಗೊಳಿಸಿದ್ದಾರೆ. ಜೀವನದ ಸಂಧ್ಯಾಕಾಲದಲ್ಲೂ ಇವರು ಫ್ಯಾಷನ್ ಲೋಕದಲ್ಲಿ ಹವಾ ಎಬ್ಬಿಸಿದ್ದಾರೆ. ಇಷ್ಟಕ್ಕೂ ಈ ಅಜ್ಜಿಯ ವಯಸ್ಸು ಎಷ್ಟು ಗೊತ್ತಾ…? ಬರೋಬ್ಬರಿ 91 ವರ್ಷ…!

ನಿಜ. ನಂಬಲೇಬೇಕು. ಇತ್ತೀಚಿನ ದಿನಗಳಲ್ಲಿ ಮನುಷ್ಯನ ಆಯುಷ್ಯ ಕಡಿಮೆಯಾಗುತ್ತಿದೆ. ಇದಕ್ಕೆ ನಮ್ಮ ಜೀವನ ಕ್ರಮವೂ ಒಂದು ಕಾರಣವಿರಬಹುದು. ಅದೂ ಅಲ್ಲದೆ, 60 ವರ್ಷ ದಾಟಿದ ಮೇಲೆ ಸಾಮಾನ್ಯವಾಗಿ ಆರೋಗ್ಯದ ಸಮಸ್ಯೆಗಳೂ ಕಾಣಿಸಿಕೊಳ್ಳುತ್ತದೆ. ಆದರೆ, ಈ ಅಜ್ಜಿ ಹಾಗಲ್ಲ. 91 ವರ್ಷವಾದರೂ ಇವರು ಉತ್ಸಾಹದ ಚಿಲುಮೆಯಂತಿದ್ದಾರೆ. ಇವರ ಉತ್ಸಾಹ, ಜೀವನ ಶೈಲಿ ಒಂದು ಕ್ಷಣ ಎಲ್ಲರನ್ನೂ ದಂಗಾಗಿಸಿಬಿಡುತ್ತದೆ.

ಈ ವೃದ್ಧೆಯ ಹೆಸರು ಹೆಲೆನ್ ರುತ್ ಎಲಮ್. ತನ್ನ ಫ್ಯಾಷನ್ ಪ್ರೀತಿಯಿಂದಲೇ ಎಲ್ಲರ ಗಮನ ಸೆಳೆದಿರುವ ಹೆಲೆನ್ ಇನ್‌ಸ್ಟ್ರಾಗ್ರಾಂನಲ್ಲಿ ಈಗ ಸಖತ್ ಫೇಮಸ್ ಆಗಿದ್ದಾರೆ. ಹೀಗಾಗಿ, ಇನ್‌ಸ್ಟ್ರಾಗ್ರಾಂನಲ್ಲಿ ಇವರ ಫಾಲೋವರ್ಸ್‌ಗಳ ಸಂಖ್ಯೆ 3.8 ಮಿಲಿಯನ್ ದಾಟಿದೆ. ಈ ಮೂಲಕ ವಯಸ್ಸು ಬರೀ ನಂಬರ್ ಅಷ್ಟೇ ಎಂಬುದನ್ನು ಅಜ್ಜಿ ಹೆಲೆನ್ ಸಾಬೀತು ಮಾಡಿದ್ದಾರೆ.

ಈ ಅಜ್ಜಿ ಇಂಟರ್ನೆಟ್‌ನಲ್ಲಿ ಈಗಿನಿಂದ ಫೇಮಸ್ ಆಗಿಲ್ಲ. ಇವರಿಗೆ 85 ವರ್ಷ ಆಗಿದ್ದಾಗ ಇವರ ಮೊಮ್ಮಗಳು ಕೆನಡಿ ಟ್ವಿಟ್ಟರಿನಲ್ಲಿ ಅಜ್ಜಿಯ ಫೋಟೋ ಹಂಚಿಕೊಂಡಿದ್ದರು. ಈ ಫೋಟೋ ಎಲ್ಲರಿಗೂ ಇಷ್ಟ ಆಗಿತ್ತು. ಅಲ್ಲಿಂದ ಅಜ್ಜಿಯ ಸಾಮಾಜಿಕ ಮಾಧ್ಯಮಗಳಲ್ಲೂ ಸಕ್ರಿಯರಾಗಿದ್ದಾರೆ.

Comments are closed.