ಬೆಂಗಳೂರು : ರಾಜ್ಯದ ಹತ್ತಕ್ಕೂ ಹೆಚ್ಚು ಮಾಜಿ ಸಚಿವರು ಹಾಗೂ ಶಾಸಕರ ಹನಿಟ್ರ್ಯಾಫ್ ಪ್ರಕರಣ ದಿನದಿಂದ ದಿನಕ್ಕೆ ರೋಚಕ ತಿರುವನ್ನು ಪಡೆದುಕೊಳ್ಳುತ್ತಿದೆ. ಈ ಕುರಿತಂತೆ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರಿಗೆ ದಿನದಿಂದ ದಿನಕ್ಕೆ ಹನಿಟ್ರ್ಯಾಫ್ ಹಿಂದಿನ ಆಳ, ಅಗಲ ವಿಸ್ತಾರಗೊಳ್ಳುತ್ತಿರುವ ಬಗ್ಗೆ ಮಾಹಿತಿ ದೊರೆತಿದೆ. ಅಲ್ಲದೇ ಈ ಹನಿಟ್ರ್ಯಾಫ್ ಹಿಂದೆ ರಾಜಕೀಯ ಸೇಡಿನ ಕಮಟು ವಾಸನ ಸುತ್ತಿಕೊಂಡಿರುವ ಬಗ್ಗೆ ಸ್ಪೋಟಕ ಮಾಹಿತಿಯನ್ನು ಪತ್ತೆ ಹಚ್ಚಿದ್ದಾರೆ.
ರಾಜ್ಯದಲ್ಲಿ ಬೆಳಕಿಗೆ ಬಂದಿರುವ ಮಾಜಿ ಸಚಿವರು, ಶಾಸಕರುಗಳ ಹನಿಟ್ರ್ಯಾಫ್ ಜಾಲದಲ್ಲಿ ಜನಪ್ರತಿನಿಧಿಗಳು ಸೇರಿ 20ಕ್ಕೂ ಅಧಿಕ ಮಂದಿ ಸಿಲುಕಿದ್ದಾರೆ ಎಂಬ ಮಾಹಿತಿಯನ್ನು ಆರೋಪಿ ರಾಘವೇಂದ್ರ ಮನೆಯಲ್ಲಿ ಸಿಕ್ಕಿರುವ ಪೆನ್ ಡ್ರೈವ್, ಹಾರ್ಡ್ ಡಿಸ್ಕ್ ನಲ್ಲಿನ ಖಾಸಗಿ ವೀಡಿಯೋದಿಂದ ಸಿಸಿಬಿ ಪೊಲೀಸರು ಬತ್ತೆ ಹಚ್ಚಿದ್ದಾರೆ. ಅಲ್ಲದೇ ಈ ವಿಡಿಯೋಗಳನ್ನು ಇಟ್ಟಕೊಂಡೇ ಆರೋಪಿ ಬ್ಲಾಕ್ ಮೇಲ್ ಮಾಡುವ ಮೂಲಕ ಕೋಟ್ಯಂತರ ರೂಪಾಯಿ ಹಲವರಿಂದ ಸುಲಿಗೆ ಮಾಡಿರುವುದಾಗಿಯೂ ಪತ್ತೆ ಹಚ್ಚಿದ್ದಾರೆ.
ಈ ಎಲ್ಲದಕ್ಕಿಂತಲೂ ಮತ್ತೊಂದು ಸ್ಪೋಟಕ ಸತ್ಯ ಅಂದ್ರೇ, ಅದೇ ಹನಿಟ್ರ್ಯಾಫ್ ಕಾರ್ಯಾಚರಣೆಗಿಳಿದಿದ್ದ ಟಿವಿ ಧಾರವಾಹಿ ನಟಿ ಮತ್ತು ಸಂಗಡಿಗರಿಗೆ ಮಾಜಿ ಸಚಿವರು ಹಾಗೂ ಶಾಸಕರ ರಾಜಕೀಯ ಎದುರಾಳಿಗಳು ಲಕ್ಷಗಟ್ಟಲೆ ಹಣ ನೀಡಿ ಸಹಕಾರ ನೀಡಿದ್ದಾರೆ ಎಂಬುದಾಗಿದೆ. ಶಾಸಕರ ದೌರ್ಬಲ್ಯವನ್ನೇ ಬಂಡವಾಳ ಮಾಡಿಕೊಂಡಿದ್ದ ವಂಚಕರ ಜಾಲ, ಅವರ ವಿಡಿಯೋ ಮಾಡಿ, ಹಣ ಸುಲಿಗೆ ಮಾಡುವ ಮೂಲಕ, ಒಂದೊಂದೇ ಜಾಲದೊಳಗೆ ಶಾಸಕರನ್ನು ಬೀಳಿಸಿಕೊಂಡಿರುವುದಾಗಿಯೂ ಪತ್ತೆ ಹಚ್ಚಿದೆ.
ಅಂದಹಾಗೇ ಹನಿಟ್ರ್ಯಾಪ್ ಆರೋಪಿಗಳಿಗೆ ಮಾಜಿ ಸಚಿವರು ಶಾಸಕರ ಎದುರಾಳಿಗಳೇ ಸಾಥ್ ನೀಡಿದ್ದಾರೆ. ಕಳೆದ ಆಗಸ್ಟ್ ನಿಂದಲೇ ಇಂತಹ ಕಾರ್ಯಕ್ಕೆ ಇಳಿದಿದ್ದಾರೆ. ಇಂತಹ ಆರೋಪಿಗಳಿಗೆ ಕ್ಷೇತ್ರದಲ್ಲಿ ವಾರಗಟ್ಟಲೇ ಉಳಿದುಕೊಳ್ಳಲು ಮಾಜಿ ಸಚಿವರು, ಶಾಸಕರ ಎದುರಾಳಿಗಳೇ ವ್ಯವಸ್ಥೆ ಮಾಡಿರುವ ಸತ್ಯವೂ ಬಯಲಾಗಿದೆ.

Comments are closed.