ಕರ್ನಾಟಕ

ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ನ.1ರಿಂದ ಇ- ಕೆವೈಸಿ(ಆಧಾರ್ ದೃಢೀಕರಣ )ಆರಂಭ

Pinterest LinkedIn Tumblr

ಬೆಂಗಳೂರು : ಪಡಿತರ ಚೀಟಿದಾರರ ಕುಟುಂಬದ ಸದಸ್ಯರು ಆಧಾರ್ ದೃಢೀಕರಣ ( ಇ- ಕೆವೈಸಿ) ಮಾಡಿಸಿಕೊಳ್ಳಲು ಪಡಿತರ ವಿತರಿಸುವ ನ್ಯಾಯಬೆಲೆ ಅಂಗಡಿಗಳಲ್ಲಿ ನವೆಂಬರ್ 1 ರಿಂದ ಮುಂದುವರೆಸಲಾಗುವುದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಮಾಹಿತಿ ನೀಡಿದೆ .

ನೈಜ ಪಡಿತರದಾರರನ್ನು ಪತ್ತೆಹಚ್ಚಲು ಆಹಾರ , ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಮುಂದಾಗಿದ್ದು , ಪಡಿತರ ಚೀಟಿಯಲ್ಲಿ ಪಡೆಯುತ್ತಿರುವ ಕುಟುಂಬದ ಎಲ್ಲ ಸದಸ್ಯರು ಆಧಾರ್ ಕಾರ್ಡ್ ನೊಂದಿಗೆ ಸಂಬಂಧಿಸಿದ ನ್ಯಾಯಬೆಲೆ ಅಂಗಡಿಗೆ ತೆರಳಿ ತಮ್ಮ ಬಯೋಮೆಟ್ರಿಕ್ ನೀಡಿ ಅಪ್ಡೇಟ್ ಮಾಡಿಸಿಕೊಳ್ಳಬೇಕು . ಅಪ್ಡೇಟ್ ಮಾಡುವ ಸಮಯದಲ್ಲಿ ಪಡಿತರ ಚೀಟಿದಾರರು ನ್ಯಾಯಬೆಲೆ ಅಂಗಡಿಗಳಿಗೆ ಯಾವುದೇ ಶುಲ್ಕ ಪಾವತಿಸುವಂತಿಲ್ಲ .

ವಯೋವೃದ್ಧರು , ವಿಕಲಚೇತನರು , ಕುಟುಂದವರೊಂದಿಗೆ ವಾಸವಿರದ ಸದಸ್ಯರ ಮಾಹಿತಿ ಅಪ್ಡೇಟ್ ಮಾಡಲು ಸಾಧ್ಯವಾಗದ ಕಾರಣ ಅಂತಹ ಸದಸ್ಯರಿಗೆ ನ್ಯಾಯಬೆಲೆ ಅಂಗಡಿ ಮಟ್ಟದಲ್ಲಿ ಆಹಾರ ನಿರೀಕ್ಷಕರ ಪರಿಶೀಲನೆಗೆ ಒಳಪಟ್ಟು ವಿನಾಯತಿ ನೀಡಲಾಗಿದೆ . ನಿಯಮಾನುಸಾರ ಅಪ್ಡೇಟ್ ಮಾಡಿಸಿಕೊಳ್ಳಲು ನವೆಂಬರ್ ವರೆಗೆ ಅವಕಾಶವಿದ್ದು , ಕಾರ್ಡುದಾರರು ಅಪ್ಡೇಟ್ ಮಾಡಿಸಿಕೊಳ್ಳದಿದ್ದರೆ ಅಂತಹ ಕಾರ್ಡುದಾರರ ಪಡಿತರ ಹಂಚಿಕೆಯನ್ನು ಸ್ಥಗಿತಗೊಲಿಸಲಾಗುವುದು ಎಂದು ತಿಳಿಸಿದೆ .

Comments are closed.