ಕರ್ನಾಟಕ

ಪತ್ನಿಯ ಹತ್ಯೆ ಆರೋಪಿಯನ್ನ ಹಿಡಿದುಕೊಟ್ಟ ವ್ಯಕ್ತಿಗೆ ಪೊಲೀಸ್ ಇಲಾಖೆಯಿಂದ ಸನ್ಮಾನ

Pinterest LinkedIn Tumblr


ಮಡಿಕೇರಿ: ನ್ಯಾಯಾಲಯ ಆವರಣದಲ್ಲಿನ ಶೌಚಾಲಯದ ಕಿಂಡಿಯಿಂದ ಪರಾರಿಯಾಗಿದ್ದ ಕೊಲೆ ಆರೋಪಿಯನ್ನು ಹಿಡಿದುಕೊಟ್ಟ ವ್ಯಕ್ತಿಯನ್ನು ಪೊಲೀಸರು ಸನ್ಮಾನಿಸಿದ್ದಾರೆ.

ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಯಡವನಾಡಿನ ಸೂಳೆಭಾವಿಯ ರಾಮು ಪರಾರಿಯಾಗಿದ್ದ ಆರೋಪಿ. ಮೆಕ್ಯಾನಿಕ್ ಕೆಲಸ ಮಾಡುವ ರಫೀಕ್ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಅವರ ಕಾರ್ಯಕ್ಕೆ ಪೊಲೀಸರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೌಟುಂಬಿಕ ಕಲಹದಿಂದಾಗಿ ರಾಮು ತನ್ನ ಪತ್ನಿಯನ್ನು ಕೊಲೆ ಮಾಡಿ ತಲೆಮರೆಸಿಕೊಂಡಿದ್ದ. ಕುಶಾಲನಗರ ಪೊಲೀಸರು ನಿನ್ನೆಯಷ್ಟೇ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲು ಕರೆದೊಯ್ದಿದ್ದರು. ನ್ಯಾಯಾಲಯದ ಆವರಣದಲ್ಲಿ ರಾಮು ಮೂತ್ರ ವಿಸರ್ಜನೆಗೆಂದು ಶೌಚಾಲಯಕ್ಕೆ ಹೋಗಿದ್ದ. ಆದರೆ ಶೌಚಾಲಯದ ಕಿಟಕಿಯಿಂದ ಜಿಗಿದು ಪರಾರಿಯಾಗಿದ್ದ.

ಗುಡ್ಡೆಹೊಸೂರು ಸಮೀಪದ ತೆಪ್ಪದಕಂಡಿಯಲ್ಲಿ ಇಂದು ಓಡಾಡುತ್ತಿದ್ದ ರಾಮುನನ್ನು ಮೆಕ್ಯಾನಿಕ್ ರಫೀಕ್ ನೋಡಿದ್ದರು. ತಕ್ಷಣವೇ ಆತನನ್ನು ಹಿಡಿದು, ಪೊಲೀಸರಿಗೆ ಒಪ್ಪಿಸಿದ್ದಾರೆ. ರಫೀಕ್ ಅವರ ಕಾರ್ಯವನ್ನು ಗಮನಿಸಿ ಕುಶಾಲನಗರ ಡಿವೈಎಸ್‍ಪಿ ಅವರ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ರಫೀಕ್ ಅವರನ್ನು ಸನ್ಮಾನಿಸಿದ್ದಾರೆ.

Comments are closed.