ಮನೋರಂಜನೆ

‘ಆ ದಿನಗಳು’ ನಟಿ ಅರ್ಚನಾ ಮದುವೆ ಮುಹೂರ್ತ ಫಿಕ್ಸ್

Pinterest LinkedIn Tumblr


ಕನ್ನಡದ ‘ಆ ದಿನಗಳು’ ಖ್ಯಾತಿಯ ನಟಿ ಅರ್ಚನಾ ವೇದಾ ಅಲಿಯಾಸ್ ಅರ್ಚನಾ ಶಾಸ್ತ್ರಿ ಮದುವೆ ಮುಹೂರ್ತ ಫಿಕ್ಸ್ ಆಗಿದೆ. ನವೆಂಬರ್ 13ರಂದು ಹೈದರಾಬಾದಿನಲ್ಲಿ ಅವರ ಮದುವೆ ಶಾಸ್ತ್ರೋಕ್ತವಾಗಿ ನೆರವೇರಲಿದೆ.

ಹೆಲ್ತ್ ಕೇರ್ ಸಂಸ್ಥೆಯೊಂದರ ಉಪಾಧ್ಯಕ್ಷರಾಗಿರುವ ಜಗದೀಶ್‍ರೊಂದಿಗೆ ಅಕ್ಟೋಬರ್ 3ರಂದು ಅವರ ನಿಶ್ಚಿತಾರ್ಥ ನೆರವೇರಿದ್ದು ಗೊತ್ತಿರುವ ಸಂಗತಿ. ಕನ್ನಡದ ಮಿಂಚು, ಮೇಘ ವರ್ಷಿಣಿ ಹಾಗೂ ಮೈತ್ರಿ ಸಿನಿಮಾಗಳಲ್ಲಿ ಅಭಿನಯಿಸಿದ್ದರೂ ‘ಆ ದಿನಗಳು’ ಸಿನಿಮಾ ಅರ್ಚನಾ ಅವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿತು.

ಸುದೀರ್ಘ ಕಾಲದಿಂದ ಜಗದೀಶ್ ಎಂಬುವವರನ್ನು ಅರ್ಚನಾ ಪ್ರೀತಿಸುತ್ತಿದ್ದರು. ಈಗ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಹೆಲ್ತ್ ಕೇರ್ ಕಂಪನಿಯೊಂದರ ವೈಸ್ ಪ್ರೆಸಿಡೆಂಟ್ ಆಗಿ ಅರ್ಚನಾ ಭಾವಿ ಪತಿ ಕಾರ್ಯನಿರ್ವಹಿಸುತ್ತಿದ್ದಾರೆ.

ಅಕ್ಟೋಬರ್ 3ರಂದು ಜಗದೀಶ್ ಜತೆಗೆ ಉಂಗುರ ಬದಲಾಯಿಸಿಕೊಂಡಿದ್ದ ಅರ್ಚನಾ, ಹೈದರಾಬಾದಿನ ರಾಡಿಸನ್ ಹೋಟೆಲ್‍ನಲ್ಲಿ ಇವರಿಬ್ಬರ ನಿಶ್ಚಿತಾರ್ಥ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿತ್ತು. ತೆಲುಗಿನ ಬಿಗ್ ಬಾಸ್ ಸೀಸನ್ ಒಂದರಲ್ಲೂ ಅರ್ಚನಾ ಪಾಲ್ಗೊಂಡಿದ್ದರು. ಹಾಗಾಗಿ ಈ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಹಲವಾರು ಬಿಗ್ ಬಾಸ್ ಸ್ಪರ್ಧಿಗಳು ಆಗಮಿಸಿ ನೂತನ ಜೋಡಿಯನ್ನು ಹರಸಿದ್ದಾರೆ.

ಕ್ಲಾಸಿಕಲ್ ಡ್ಯಾನ್ಸರ್ ಆಗಿರುವ ಅರ್ಚನಾ 2004ರಲ್ಲಿ ಬಿಡುಗಡೆಯಾದ ‘ನೇನು’ ಎಂಬ ಸಿನಿಮಾ ಮೂಲಕ ತೆಲುಗು ಪ್ರೇಕ್ಷಕರಿಗೆ ಪರಿಚಿತರಾದರು. 2006ರಲ್ಲಿ ಮತ್ತೊಂದು ಸೂಪರ್ ಹಿಟ್ ಚಿತ್ರ ‘ನುವ್ವೋಸ್ತಾನಂಟೆ ನೇನೊದ್ದಂಟಾನಾ’ ಚಿತ್ರದಲ್ಲೂ ಅಭಿನಯಿಸಿದ್ದಾರೆ. ‘ಶ್ರೀರಾಮದಾಸು’ ಚಿತ್ರದಲ್ಲಿನ ಸೀತೆ ಪಾತ್ರ ಅರ್ಚನಾ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತು.

Comments are closed.